ಹೈದರಾಬಾದ್:ತೆಲಗು ಸೇರಿದಂತೆ ಕೆಲವು ಭಾಷೆಗಳಲ್ಲಿ ನಟಿಸಿರುವ ಪ್ರಸಿದ್ಧನಟಿ ನಯನತಾರಾ ಕೆಲ ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಇವರು ನಿರ್ದೇಶಕ ವಿಘ್ನೇಶ್‌ ಶಿವನ್‌ ಅವರ ಜತೆ ಬಹು ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದು, ಇದೀಗ ಮದುವೆಯಾಗಲು ಹೊರಟಿದ್ದಾರೆ ಎನ್ನುವ ಕಾರಣಕ್ಕೆ.ಇಷ್ಟೇ ಆಗಿದ್ದರೆ ಇದೇನೂ ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಆದರೆ ಈ ಬೆಡಗಿ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿರಲು ಕಾರಣ, ವಿಘ್ನೇಶ್‌ ಅವರ ಜತೆಗೆ ಮದುವೆಯಾಗುವ ಮೊದಲು ಮರದ ಜತೆ ಮದುವೆಯಾಗಲಿದ್ದಾರೆ ಎನ್ನುವ ಕಾರಣಕ್ಕೆ!ಕೆಲ ವರ್ಷಗಳಿಂದ ಕದ್ದುಮುಚ್ಚಿ ವಿಘ್ನೇಶ್ ಶಿವನ್ ಮತ್ತು ನಯನತಾರಾ ಡೇಟಿಂಗ್‌ ಮಾಡುತ್ತಿದ್ದರು. ನಂತರ ಇವರ ಈ ಲವ್‌ ಸ್ಟೋರಿ ಸಿನಿಮಾರಂಗದಲ್ಲಿ ಗುಸುಗುಸು ಶುರುವಾಗಿತ್ತು, ನಂತರ ಇದು ಖುಲ್ಲಂಖುಲ್ಲಾ ಆಗಿ ಎಲ್ಲರಿಗೂ ತಿಳಿದಿತ್ತು. ಇದಾಗುತ್ತಿದ್ದಂತೆಯೇ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಒಟ್ಟಿಗಿರುವ ಫೋಟೋಗಳನ್ನು ಹಂಚಿಕೊಂಡು ಎಲ್ಲರ ಬಾಯಿ ಮುಚ್ಚಿಸಿದ್ದರು. ತಾವು ಮದುವೆಯಾಗುತ್ತಿರುವುದಾಗಿಯೂ ಹೇಳಿದ್ದರು.ಇದರ ನಡುವೆಯೇ ಇದೀಗ ಮರದ ಜತೆ ಮದುವೆಯಾಗುವ ಸಿದ್ಧತೆ ನಡೆಸಿದ್ದಾರೆ! ಇದು ಕೆಲವರಿಗೆ ಅಚ್ಚರಿ ತಂದರೂ, ಅನೇಕ ಮಂದಿಗೆ ಈ ವಿಷಯದಲ್ಲಿ ಹೊಸತೇನೂ ಕಾಣಲಿಲ್ಲ. ಏಕೆಂದರೆ ನಯನತಾರಾರಂತೆ ಇದಾಗಲೇ ಹಲವಾರು ಮಂದಿ ತಮ್ಮ ಮದುವೆಗೂ ಮುನ್ನ ಮರದ ಜತೆ ಮದುವೆಯಾಗಿದ್ದಾರೆ, ಆಗುತ್ತಲೂ ಇದ್ದಾರೆ. ಇದಕ್ಕೆ ಕಾರಣವೆಂದರೆ ಜಾತಕದಲ್ಲಿನ ದೋಷ.ಹಿಂದೂ ಸಂಪ್ರದಾಯದಲ್ಲಿ ಮದುಮಕ್ಕಳ ಜಾತಕದಲ್ಲಿ ದೋಷವಿದ್ದರೆ ಅರ್ಥಾತ್‌ ಅವರಿಗೆ ಎರಡು ಮದುವೆಯ ಯೋಗ ಅಥವಾ ದಾಂಪತ್ಯದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದರೆ, ಮೊದಲು ಮರ ಅಥವಾ ಪ್ರಾಣಿಯ ಜತೆ ಮದುವೆ ಮಾಡಿ ನಂತರ ನಿಜವಾದ ಮದುವೆ ಮಾಡುತ್ತಾರೆ. ಈ ಮೂಲಕ ಎರಡನೆಯ ಮದುವೆಯಾಗುತ್ತಿದ್ದೇವೆ ಎನ್ನುವುದು. ನಟಿ ನಯನತಾರಾ ಅವರು ಮದುವೆಯಾಗುವುದಕ್ಕೂ ಇದೇ ಕಾರಣವಿದೆ.ಈ ಜೋಡಿ ಜಾತಕದಲ್ಲಿ ಕೆಲವೊಂದು ದೋಷಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಮೊದಲು ಮರವನ್ನು ಮದುವೆ ಆಗಿ ನಂತರ ವಿಘ್ನೇಶ್ ಅವರನ್ನು ಮದುವೆ ಆಗುವಂತೆ ಜ್ಯೋತಿಷಿಗಳು ಸೂಚಿಸಿದ್ದಾರೆ. ಆದ್ದರಿಂದ ಮರದ ಜತೆ ಮದುವೆಗೆ ಸಿದ್ಧತೆ ನಡೆಸಲಾಗುತ್ತಿದೆ. ಇದನ್ನು ಅರಿಯದ ಕೆಲವರು ಮಾತ್ರ ವಿಷಯ ಕೇಳಿ ನಯನತಾರಾ ಅವರಿಗೆ ಇದೇನು ಹುಚ್ಚು ಹಿಡಿದಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಮನುಷ್ಯರಿಗೆ ಮದುವೆಯಾಗುವ ಬದಲು ಇದೇ ಬೆಸ್ಟ್‌ ಬಿಡಿ ಎಂದೂ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಸದ್ಯ ಈ ನಟಿ ಸಕತ್‌ ಸುದ್ದಿಯಾಗುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − six =
Remember me
