ತಿರುವನಂತಪುರ:ಮಲಯಾಳ ಚಿತ್ರರಂಗ ಹಾಗೂ ಕಿರುತೆರೆಯ ಜನಪ್ರಿಯ ನಟಿ ಶರಣ್ಯಾ ಶಶಿ ಅವರು ನಿಧನರಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕ್ಯಾನ್ಸರ್, ಬ್ರೇನ್​ ಟ್ಯೂಮರ್​​ ವಿರುದ್ಧ ಹೋರಾಡುತ್ತಿದ್ದ ಶರಣ್ಯಾ ನಿನ್ನೆ ಮೃತಪಟ್ಟಿದ್ದಾರೆ. ಇವರಿಗೆ 35 ವರ್ಷ ವಯಸ್ಸಾಗಿತ್ತು.ಶರಣ್ಯಾ ಅವರಿಗೆ 2012ರಲ್ಲಿ ಬ್ರೈನ್ ಟ್ಯೂಮರ್ ಪತ್ತೆಯಾಗಿತ್ತು. ಬಳಿಕ 11 ಬಾರಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ತೀವ್ರ ಅನಾರೋಗ್ಯದ ನಡುವೆಯೂ ನಮ್ಮ ಮನೋಬಲದ ಕಾರಣಕ್ಕೆ ಅವರು ಅನೇಕರಿಗೆ ಸ್ಫೂರ್ತಿ ಆಗಿದ್ದರು. ಕ್ಯಾನ್ಸರ್ ವಿರುದ್ಧವೂ ನಟಿ ಧೈರ್ಯದಿಂದ ಹೋರಾಡಿದ್ದಕ್ಕಾಗಿ ವ್ಯಾಪಕವಾಗಿ ಪ್ರಶಂಸಿಸಲಾಗಿತ್ತು. ಜತೆಗೆ ಇವರು ಇತರ ರೋಗಿಗಳಿಗೂ ಸ್ಫೂರ್ತಿ ತುಂಬುತ್ತಿದ್ದರು.ಮೇ 23ರಂದು ಶರಣ್ಯಾ ಅವರಿಗೆ ಕರೊನಾ ವೈರಸ್​ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಚಿಂತಾಜನಕ ಆಗಿದ್ದರಿಂದ ಹಲವು ದಿನಗಳ ಕಾಲ​ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಜೂನ್​ನಲ್ಲಿ ಐಸಿಯುನಿಂದ ಜನರಲ್​ ವಾರ್ಡ್​ಗೆ ವರ್ಗಾಯಿಸಿದ ಬಳಿಕ ಮತ್ತೆ ಪರಿಸ್ಥಿತಿ ಬಿಗಡಾಯಿಸಿತ್ತು.ಇದರಿಂದ ಅವರಿಗೆ ಆರ್ಥಿಕ ಸಂಕಷ್ಟ ಕೂಡ ಎದುರಾಗಿತ್ತು. ಚಿತ್ರರಂಗದ ಅನೇಕ ಮಂದಿ ನೆರವಾಗಿದ್ದರು. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಶರಣ್ಯಾ ಅವರು ಬದುಕಿ ಬರಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ. ಶರಣ್ಯಾ ಇಹಲೋಕ ತ್ಯಜಿಸಿದ್ದಾರೆ.
ಟೈಟ್‌ ಬುರ್ಖಾ ಧರಿಸಿ ಒಂಟಿಯಾಗಿ ಹೋಗುತ್ತಿದ್ದಳೆಂದು ಯುವತಿಯನ್ನು ಗುಂಡಿಕ್ಕಿ ಕೊಂದರು!
ಪ್ರಿಯಕರನ ಜತೆ ಏಕಾಂತದಲ್ಲಿರುವಾಗ ನುಗ್ಗಿದ ಗಂಡ! ರಕ್ಷಣೆ ಕೋರಿ ಹೈಕೋರ್ಟ್‌ ಮೊರೆ ಹೋದ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 15 =
Remember me
