ಮುಂಬೈ:ಬ್ಲೂ ಫಿಲ್ಮ್‌ ಕೇಸ್‌ನಲ್ಲಿ ಸಿಲುಕಿಕೊಂಡಿರೋ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ವಿರುದ್ಧ ಎಲ್ಲಾ ಆಯಾಮಗಳಿಂದಲೂ ಪೊಲೀಸರು ತನಿಖೆ ನಡೆಸುತ್ತಿರುವ ನಡುವೆಯೇ, ಅವರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಅದೇನೆಂದರೆ ಇವರ ವಿರುದ್ಧ ನಟಿ ಶೆರ್ಲಿನ್ ಛೋಪ್ರಾ ಲೈಂಗಿಕ ದೌರ್ಜನ್ಯ ಕೇಸ್‌ ದಾಖಲು ಮಾಡಿದ್ದಾರೆ.
ಪ್ರಸ್ತುತ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ರಾಜ್ ಕುಂದ್ರಾ ಅವರಿಗೆ ಕೋರ್ಟ್‌ ಜಾಮೀನು ನಿರಾಕರಿಸಿರುವ ಬೆನ್ನಲ್ಲೇ ನಟಿ ಮಾಡಿರುವ ಈ ಆರೋಪದಿಂದ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಮುಂಬೈ ಅಪರಾಧ ವಿಭಾಗದ ಮುಂದೆ ಹಾಜರಾಗಿದ್ದ ನಟಿ ಶೆರ್ಲೀನ್‌, ಕುಂದ್ರಾ ತಮ್ಮ ಮೇಲೆ ಮಾಡಿರುವ ಲೈಂಗಿಕ ದೌರ್ಜನ್ಯದ ಕುರಿತು ಮಾಹಿತಿ ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಕುಂದ್ರಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.ಚಿತ್ರವೊಂದಕ್ಕೆ ಸಂಬಂಧಿಸಿದಂತೆ ರಾಜ್‌ ಕುಂದ್ರಾ ನನ್ನ ಜತೆ ಮಾತನಾಡಿದ್ದರು, ಹೀಗೆ ನಮ್ಮಿಬ್ಬರ ಪರಿಚಯವಾಗಿತ್ತು. ಅದಾದ ಮೇಲೆ ಕುಂದ್ರಾ ನನ್ನ ಮನೆಗೆ ಬರಲು ಶುರು ಮಾಡಿದರು. ನನ್ನನ್ನು ಚುಂಬಿಸಲು ಪ್ರಯತ್ನಿಸುತ್ತಿದ್ದರು. ನೀವು ವಿವಾಹಿತರು, ಹೀಗೆಲ್ಲಾ ಮಾಡಬಾರದು ಎಂದರೂ ಕೇಳದೇ ನನ್ನನ್ನು ಬಲವಂತ ಮಾಡುತ್ತಿದ್ದರು. ನನಗೆ ಇದೆಲ್ಲಾ ಇಷ್ಟವಾಗುವುದಿಲ್ಲ, ವಿವಾಹಿತನ ಜತೆ ಹೀಗೆಲ್ಲಾ ನಡೆದುಕೊಳ್ಳುವುದು ನನಗೆ ಇಷ್ಟವಿಲ್ಲ ಎಂದರೂ ಅವರು ಕೇಳದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಪತ್ನಿ ಶಿಲ್ಪಾ ಜತೆ ನನ್ನ ಸಂಬಂಧ ಅಷ್ಟು ಚೆನ್ನಾಗಿಲ್ಲ, ಮನೆಯಲ್ಲಿ ನನಗೆ ತುಂಬಾ ಹಿಂಸೆಯಾಗುತ್ತಿದೆ ಎಂದುಕೊಂಡು ನನ್ನನ್ನು ಹತ್ತಿರ ಮಾಡಿಕೊಳ್ಳಲು ನೋಡುತ್ತಿದ್ದರು, ಇದರಿಂದಾಗಿ ನನ್ನ ಬಳಿ ಅಸಭ್ಯವಾಗಿ ನಡೆದುಕೊಂಡರು ಎಂದು ಕುಂದ್ರಾ ವಿರುದ್ಧ ನಟಿ ದೂರಿನಲ್ಲಿ ಹೇಳಿದ್ದಾರೆ.
34 ಕೋಟಿ ರೂ. ಬ್ಲೂಫಿಲ್ಮಂ ದಂಧೆಗಿದ್ಯಾ ಶಿಲ್ಪಾ ಲಿಂಕ್‌? ನಟಿಗೆ ಕ್ಲೀನ್‌ಚಿಟ್‌ ನೀಡಲ್ಲ ಎಂದ ಪೊಲೀಸರು

ಲಂಚ ಕೊಡ್ಲಿಕ್ಕೆ ಮನೆಗೆ ಬಾ ಎಂದ ಅಧಿಕಾರಿ ಚಡ್ಡಿ- ಬನಿಯನ್‌ನಲ್ಲೇ ತಗ್ಲಾಕ್ಕೊಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 2 =
Remember me
