ಕೋಲ್ಕತಾ:ಕೋಲ್ಕತಾದಲ್ಲಿ ಆಧಾರ್​ ಕಾರ್ಡ್​ ಇದೀಗ ಭಾರಿ ವೈರಲ್​ ಆಗಿದೆ. ಇದಕ್ಕೆ ಕಾರಣ, ಇದರಲ್ಲಿ ಎಲ್ಲಾ ಆಧಾರ್​ ಕಾರ್ಡ್​ನಲ್ಲಿ ಇರುವ ವ್ಯಕ್ತಿಯ ಮಾಹಿತಿಯ ಬದಲು ಫಿಷ್​ ಫ್ರೈ, ಮಟನ್​ ಕಾಷಾ, ಪಾಪಡ್​, ಐಸ್​​ಕ್ರೀಂ… ಹೀಗೆ ಮೆನು ಕಾಣಿಸಿಕೊಂಡಿದೆ.
ಅಷ್ಟಕ್ಕೂ ಇದು ನಿಜವಾದ ಆಧಾರ್​ ಕಾರ್ಡ್​ ಅಲ್ಲ. ಬದಲಿಗೆ ಮದುವೆಗೆ ಬರುವ ಅತಿಥಿಗಳಿಗೆ ಮದುವೆ ಮಂಟಪದಲ್ಲಿ ನೀಡಿರುವ ಊಟದ ಮೆನುಕಾರ್ಡ್​. ಈಗಿನ ಜೋಡಿಗಳಿಗೆ ಏನಾದರೂ ಹೊಸತನ್ನು ಮಾಡುವ ಹಂಬಲ. ಆದ್ದರಿಂದ ಲಗ್ನ ಪತ್ರಿಕೆಯನ್ನು ನೂತನ ವಿಧಾನದಲ್ಲಿ ಮಾಡಿದ್ದ ಈ ಜೋಡಿಗೆ, ಊಟದ ಮೆನುವನ್ನು ಕೂಡ ಹೊಸ ವಿಧಾನದಲ್ಲಿ ಮಾಡಬೇಕು ಎನ್ನಿಸಿ ಹೀಗೆ ಮಾಡಲಾಗಿದೆ. ಮದುವೆ ಊಟದ ಮೆನು ಕಾರ್ಡ್ ಅನ್ನು ಆಧಾರ್ ಕಾರ್ಡ್​ನಂತೆ ಪ್ರಿಂಟ್​ ಮಾಡಲಾಗಿದೆ.

ಇದನ್ನು ಮದುವೆಗೆ ಬರುವ ಅತಿಥಿಗಳಿಗೆ ನೀಡಲಾಗಿದೆ. ಮದುವೆ ಮನೆಯಲ್ಲಿ ಊಟದಲ್ಲಿ ಏನೆಲ್ಲಾ ವಿಶೇಷತೆಗಳು ಇರಲಿವೆ ಎಂದು ಮೆನು ನೋಡಿದರೆ ಅತಿಥಿಗಳಿಗೆ ತಿಳಿಯಲಿದೆ.
ಇಂಥದ್ದೊಂದು ವಿಶೇಷ ರೀತಿಯ ಕಾರ್ಡ್​ ಮುದ್ರಿಸಿ ವೈರಲ್​ ಆಗಿರುವ ಜೋಡಿಯ ಹೆಸರು ಗೊಗೋಲ್ ಸಹಾ ಮತ್ತು ಸುವರ್ಣ ದಾಸ್. ಈ ಕುರಿತು ಪ್ರತಿಕ್ರಿಯಿಸಿರುವ ಗೂಗೋಲ್, ಇದು ಸುವರ್ಣ ದಾಸ್ ಅವರ ಆಲೋಚನೆ. ನಾವಿಬ್ಬರೂ ಡಿಜಿಟಲ್ ಇಂಡಿಯಾಕ್ಕೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಆಧಾರ್ ಕಾರ್ಡ್ ಮಾದರಿಯ ಮೆನುವನ್ನು ಹಂಚಿದ್ದೇವೆ ಎಂದಿದ್ದಾರೆ.
ಇನ್ನೊಂದು ತಮಾಷೆ ಎಂದರೆ ಮದುವೆ ಮನೆಯಲ್ಲಿ ರಾಶಿರಾಶಿಯಾಗಿ ಬಿದ್ದಿರುವ ಈ ಕಾರ್ಡ್​ ನೋಡಿ, ಅಲ್ಲಿ ಬಂದವರೆಲ್ಲಾ ಅಯ್ಯೋ ಮದುವೆಗೆ ಬರುವಾಗ ಆಧಾರ್​ ಕಾರ್ಡ್​ ತರಬೇಕಿತ್ತೇನೋ ಎಂದು ಗೊಂದಲ ಆಗಿದ್ದೂ ಇದೆಯಂತೆ.
ಬಯಲಾಯ್ತು ಕರಾಳಮುಖ! ಪ್ರತಿಭಟನೆ ಹೆಸರಲ್ಲಿ ಭಾರತಕ್ಕೆ ಕಪ್ಪುಮಸಿ ಬಳಿಯೋದು ಹೇಗೆ ಎಂದು ಪಾಠ ಮಾಡಿದ ‘ಪರಿಸರ ಹೋರಾಟಗಾರ್ತಿ’…

ಹೆಂಡತಿಗೆ ಕಳ್ಳತನ ಮಾಡೋ ಚಟ- ಇದು ಮನೋರೋಗವೆ? ಪ್ಲೀಸ್​ ಪರಿಹಾರ ಹೇಳಿ..

‘ವೇಶ್ಯೆಯ ಸಹವಾಸ ಮಾಡಿದ್ರೇನು, ಅವನು ಗಂಡಸು ಕಣೆ… ಏನು ಬೇಕಾದ್ರೂ ಮಾಡ್ಬೋದು…’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + thirteen =
Remember me
