ಕೋಲ್ಕತಾ:ತಾವು ಮದುವೆಯಾಗುವವರು ಹೀಗೆ ಇರಬೇಕು, ತಮ್ಮ ಬಾಳಸಂಗಾತಿಯಾಗುವವರು ಹೀಗೇ ಇರಬೇಕು ಎಂದು ಬಹುತೇಕ ಎಲ್ಲರೂ ಕಲ್ಪನೆ ಇಟ್ಟುಕೊಂಡಿರುತ್ತಾರೆ. ಕೆಲವರಿಗೆ ಅವರು ಅಂದುಕೊಂಡಂಥವರೇ ಸಿಕ್ಕರೆ, ಇನ್ನು ಹಲವರಿಗೆ ಏನೋ ನಿರಾಸೆ. ತಾವು ಅಂದುಕೊಂಡ ಪರಿಪೂರ್ಣ ಹುಡುಗ- ಹುಡುಗಿ ಸಿಗಲಿಲ್ಲ ಎಂಬ ಬೇಸರ.
ಅದೇನೇ ಇರಲಿ. ಆದರೆ ಮದುವೆಗೆ ವಧು ಬೇಕಾಗಿದ್ದಾಳೆ, ವರ ಬೇಕಾಗಿದ್ದಾನೆ ಎಂದು ಜಾಹೀರಾತು ಕೊಡುವಾಗ ಕೆಲವೊಂದು ವಿಷಯಗಳು ಕಾಮನ್​ ಇರುತ್ತವೆ. ಇಂಥ ಜಾತಿಯ, ಇಂಥ ಗೋತ್ರದ, ಇಷ್ಟು ಹೈಟ್​ ಇರುವ, ಇಂಥ ಕೆಲಸದಲ್ಲಿ ಇರುವ, ಇಷ್ಟು ಓದಿರುವ… ಹೀಗೆ ಕೆಲವೊಂದು ಕಾಮನ್​ ವಿಷಯಗಳ ಉಲ್ಲೇಖ ಮಾಡುವುದು ಮಾಮೂಲು.
ಅದರಂತೆಯೇ, ವಧುವನ್ನು ಹುಡುಕುವ ಬಹುತೇಕ ಯುವಕರು ತಮ್ಮನ್ನು ವರಿಸುವಾಕೆ ತೆಳ್ಳಗೆ, ಬೆಳ್ಳಗೆ ಇರಬೇಕು ಎಂದು ಅಂದುಕೊಳ್ಳುವುದು ಸಹಜ, ಹೆಚ್ಚಿನ ವೇಳೆ ಅದನ್ನು ವಧು ಬೇಕಾಗಿದ್ದಾಳೆ ಕಾಲಂನಲ್ಲಿಯೂ ಉಲ್ಲೇಖ ಮಾಡಿರುತ್ತಾರೆ.
Prospective brides/grooms please pay attention.
Match making criteria are changing 😌pic.twitter.com/AJZ78ARrHZ
— Nitin Sangwan (@nitinsangwan)October 3, 2020

ಇಲ್ಲೊಬ್ಬ ವಕೀಲ, ಅಂಥದ್ದೇ ಒಂದು ಜಾಹೀರಾತು ನೀಡಿದ್ದಾರೆ. ಆದರೆ ಈ ಜಾಹೀರಾತು ಮಾತ್ರ ಸಕತ್​ ವೈರಲ್​ ಆಗಿದೆ. ಅದಕ್ಕೆ ಕಾರಣ ಏನು ಗೊತ್ತಾ? ತಾವು ಸುಂದರವಾಗಿದ್ದು, ಉತ್ತಮ ಸ್ಥಿತಿವಂತರಾಗಿದ್ದು, ಯಾವುದೇ ಚಟಕ್ಕೆ ದಾಸನಾಗಿಲ್ಲ ಎಂದು ತಮ್ಮ ಬಗ್ಗೆ ಬರೆದುಕೊಂಡಿರುವ ಈ ವಕೀಲ, ವಧು, ಎತ್ತರವಾಗಿ, ತೆಳ್ಳಗೆ, ಬೆಳ್ಳಗೆ, ಸುಂದರವಾಗಿರಬೇಕು ಎಂದೆಲ್ಲಾ ಮಾಮೂಲಾಗಿ ಬರೆದಿದ್ದಾರೆ. ಆದರೆ ಕೊನೆಯಲ್ಲಿ “ವಧು ಸೋಶಿಯಲ್ ಮೀಡಿಯಾಗೆ ಎಡಿಕ್ಟ್ ಆಗಿರಬಾರದು” ಎಂಬ ಕಂಡೀಷನ್​ ಹಾಕಿದ್ದಾರೆ!
ಪತ್ರಿಕೆಯೊಂದರಲ್ಲಿ ಬಂದಿರುವ ಈ ಜಾಹೀರಾತನ್ನು ಐಎಎಸ್ ಅಧಿಕಾರಿ ನಿತಿನ್ ಸಂಘ್ವಾನ್ ಎಂಬುವವರು ತಮ್ಮ ಟ್ವಿಟರ್​ ಖಾತೆಯಲ್ಲಿ ಉಲ್ಲೇಖ ಮಾಡಿದ್ದು, ‘ವಧು/ವರರೇ ಇತ್ತ ಗಮನ ಕೊಡಿ ಮದುವೆ ಹೊಂದಾಣಿಕೆಯ ಮಾನದಂಡಗಳು ಬದಲಾಗಿವೆ’ ಎಂಬ ಕ್ಯಾಪ್ಶನ್ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿಯೇ ಮುಳುಗಿರುವ ಬಹುತೇಕ ಲಲನೆಯರು ಇರುವ ಈ ದಿನಗಳಲ್ಲಿ, ವಕೀಲನ ಮನದನ್ನೆ ಸಿಗಲು ಸಾಧ್ಯವೆ? ನಿಮ್ಮ ಅನಿಸಿಕೆ ಏನು?
₹500 ದಂಡ ಹಾಕಿದ್ದಕ್ಕೆ ₹10 ಲಕ್ಷ ಪರಿಹಾರ! ವಕೀಲನ ವಿರುದ್ಧ ಹೋಗಿ ಪೇಚಿಗೆ ಸಿಲುಕಿದ ಪೊಲೀಸ್

ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ: ದುಷ್ಟತನದ ಪರಮಾವಧಿ ಎಂದ ಸಿದ್ದುಗೆ ಕಮೆಂಟಿಗರಿಂದ ಗುದ್ದೋ ಗುದ್ದು!

ಡಿಕೆಶಿಗೆ ಡಬಲ್​ ಶಾಕ್​! ಆದಾಯ ಮೀರಿ ಆಸ್ತಿ ಗಳಿಕೆ ಆರೋಪ- ದಾಖಲಾಯ್ತು ಎಫ್​ಐಆರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eight =
Remember me
