ನವದೆಹಲಿ:ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪರವಾಗಿ ವಾದ ಮಂಡಿಸುತ್ತಿರುವ, ಮಾಜಿ ಸಾಲಿಸಿಟರ್‌ ಜನರಲ್‌, ಹಿರಿಯ ವಕೀಲ ಹರೀಶ್​ ಸಾಳ್ವೆ ಅವರು ಇದೀಗ ಎರಡನೆಯ ಮದುವೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
65 ವರ್ಷದ ಹರೀಶ್​ ಅವರು ಲಂಡನ್‌ ಮೂಲದ ಕಲಾವಿದೆ ಕ್ಯಾರೊಲೀನ್‌ ಬ್ರೊಸ್ಸಾರ್ಡ್‌ ಅವರನ್ನು ಮುಂದಿನ ವಾರ ಚರ್ಚ್​ ಒಂದರಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ.
ಕಳೆದ ಜೂನ್‌ನಲ್ಲಿ ಪತ್ನಿ ಮೀನಾಕ್ಷಿ ಅವರಿಗೆ ವಿಚ್ಛೇದನ ನೀಡಿದ್ದಾರೆ. ಇವರಿಗೆ ಸಾಕ್ಷಿ (37) ಹಾಗೂ ಸಾನಿಯಾ (33) ಎಂಬ ಹೆಣ್ಣುಮಕ್ಕಳಿದ್ದಾರೆ. ಇನ್ನು ಕ್ಯಾರೊಲೀನ್​ ಅವರಿಗೂ ಇದು ಎರಡನೆಯ ಮದುವೆಯಾಗಿದ್ದು, ಅವರಿಗೆ 18 ವರ್ಷದ ಮಗಳಿದ್ದಾರೆ.
ಇದನ್ನೂ ಓದಿ:ಮದರಸಾದ ಮೇಲೆ ಬಾಂಬ್​ ದಾಳಿ: ಏಳು ಮಕ್ಕಳು ಬಲಿ- ಉಳಿದವರ ಸ್ಥಿತಿ ಚಿಂತಾಜನಕ
ಕರೊನಾ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ವಿವಾಹಕ್ಕೆ ಕೇವಲ 15 ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗುವುದು ಎಂದು ಆಪ್ತ ಮೂಲಗಳು ತಿಳಿಸಿವೆ.ಲಂಡನ್​ನಲ್ಲಿ ಚಿತ್ರಕಲಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ ಕ್ಯಾರೋಲಿನ್ ಅವರನ್ನು ಭೇಟಿಯಾಗಿದ್ದರು. ಸುಮಾರು ಒಂದು ವರ್ಷಗಳಿಂದ ಇಬ್ಬರೂ ಪರಿಚಿತರಾಗಿದ್ದಾರೆ. ಬ್ರಿಟನ್​ಲ್ಲಿ ಜನಿಸಿರುವ ಕ್ಯಾರೋಲಿನ್ ಅವರಿಗೆ ತಮ್ಮಂತೆಯೇ ಕಲೆ, ರಂಗಭೂಮಿ ಹಾಗೂ ಶಾಸ್ತ್ರೀಯ ಸಂಗೀತದ ಬಗ್ಗೆ ಅಭಿರುಚಿ ಇದೆ. ಇದೇ ಕಾರಣಕ್ಕೆ ಆಕೆಯನ್ನು ವರಿಸಿರುವುದಾಗಿ ಸಾಳ್ವೆ ಹೇಳಿದ್ದಾರೆ.
ಭಾರತದ ಮಾಜಿ ಸಾಲಿಸಿಟರ್ ಜನರಲ್ ಆಗಿರುವ ಹರೀಶ್ ಸಾಳ್ವೆ, ಜನವರಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್​ಕ್ವೀನ್ಸ್ ಕೌನ್ಸೆಲ್ ಆಗಿ ನೇಮಕವಾಗಿದ್ದಾರೆ. ಕುಲಭೂಷಣ್‌ ಜಾಧವ್‌ ನೇಣುಶಿಕ್ಷೆ ತಪ್ಪಿಸಲು ಭಾರತದ ಪರ ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ ಇವರು ವಾದ ಮಂಡಿಸುತ್ತಿದ್ದಾರೆ. ಇವರಿಗೆ ಪದ್ಮಭೂಷಣ ಪ್ರಶಸ್ತಿಯೂ ಲಭಿಸಿದೆ.
ಮನುಷ್ಯರ ವೃಷಣ ಕತ್ತರಿಸಿ ಹಸಿಹಸಿ ತಿನ್ನುವ ‘ವೈದ್ಯರು’ ಇವರು! ಫ್ರಿಜ್​ನಲ್ಲಿತ್ತು ಭಯಾನಕ ಸತ್ಯ…

ಫ್ಲ್ಯಾಟ್ ಲಭ್ಯವಿದೆ… ಮುಸ್ಲಿಮರು, ಪ್ರಾಣಿಗಳಿಗೆ ಪ್ರವೇಶವಿಲ್ಲ…

ಫ್ಲ್ಯಾಟ್ ಲಭ್ಯವಿದೆ… ಮುಸ್ಲಿಮರು, ಪ್ರಾಣಿಗಳಿಗೆ ಪ್ರವೇಶವಿಲ್ಲ…

ಬಿಜೆಪಿ ನಾಯಕಿ ಖುಷ್ಬೂ ಅರೆಸ್ಟ್​… ನಾನು ಹೆದರಲ್ಲ, ಮಹಿಳೆಯರಿಗಾಗಿ ಕೊನೆವರೆಗೂ ಹೋರಾಟ ಎಂದ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − four =
Remember me
