ಕಾಬೂಲ್​:ರಸ್ತೆರಸ್ತೆಗಳಲ್ಲಿ ರಕ್ತದೋಕುಳಿ ಹರಿಸಿ, ಹೆಣ್ಣುಮಕ್ಕಳನ್ನು ಅಪಹರಿಸಿ ಅತ್ಯಾಚಾರ ಎಸಗಿ ನೀಡಬಾರದ್ದ ಹಿಂಸೆ ನೀಡುವ ಮೂಲಕ ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ತಾಲಿಬಾನ್​ ರಕ್ಕಸರಿಗೆ ಸಂಪೂರ್ಣ ಅಫ್ಘಾನಿಸ್ತಾನ್​ ಶರಣಾಗಿದೆ. ರಾಜಧಾನಿ ಕಾಬೂಲ್​ ಸುತ್ತುವರಿದು ಅದನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಮೂಲಕ ಉಗ್ರರು ಜಯ ಸಾಧಿಸಿದ್ದಾರೆ.
ಕಾಬೂಲ್​ ಅನ್ನು ತಾವು ಹಿಂಸೆಯಿಂದ ವಶಪಡಿಸಿಕೊಳ್ಳುವುದಿಲ್ಲ ಎಂದು ಈ ಉಗ್ರರು ಮೊದಲೇ ಘೋಷಣೆ ಮಾಡಿದ್ದರು. ಅದರಂತೆಯೇ ಆಂತರಿಕ ಸಚಿವ ಅಬ್ದಲ್​ ಸತ್ತಾರ್​ ಹೇಳಿಕೆ ನೀಡಿದ್ದು, ತಾಲಿನಾನಿಗಳು ದಾಳಿ ಮಾಡಿಲ್ಲ. ಶಾಂತಿಯುತವಾಗಿ ಕಾಬೂಲ್​ ಅನ್ನು ವಶಕ್ಕೆ ಪಡೆದಿದ್ದಾರೆ ಎಂದಿದ್ದಾರೆ. ಶಾಂತಿಯುತವಾಗಿ ತಾಲಿಬಾನಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ನಿನ್ನೆಯಷ್ಟೇ ಕಾಬೂಲ್ ನಗರವನ್ನು ಪ್ರವೇಶಿಸಿರುವುದಾಗಿ ಅಫ್ಘಾನಿಸ್ತಾನ ಗೃಹಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದರು. ಅಫ್ಘಾನಿಸ್ತಾನದ ಉತ್ತರ, ಪಶ್ಚಿಮ ಹಾಗೂ ದಕ್ಷಿಣ ಭಾಗವನ್ನು ಸಂಪೂರ್ಣ ವಶಪಡಿಸಿಕೊಂಡಿರುವ ತಾಲಿಬಾನ್‌ ಉಗ್ರರು ಇದೀಗ ಜಲಾಲಾಬಾದ್’ನ್ನೂ ವಶಕ್ಕೆ ಪಡೆದುಕೊಂಡಿದ್ದು, ಸರ್ಕಾರದ ವಶದಲ್ಲಿರುವ ಏಕೈಕ ನಗರ ಕಾಬೂಲನ್ನೂ ಸುತ್ತುವರೆದಿದ್ದರು.
ಇದರ ಬೆನ್ನಲ್ಲೇ ಅಮೆರಿಕ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಕಾಬೂಲಿನಿಂದ ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಿತ್ತು. ಜತೆಗೆ ರಾಯಭಾರಿ ಕಚೇರಿಯ ಸಿಬ್ಬಂದಿಯನ್ನೂ ಏರ್​ಲಿಫ್ಟ್​ ಮೂಲಕ ಸ್ಥಳಾಂತರಿಸಲಾಗಿದೆ.ಇನ್ನು 90 ದಿನಗಳಲ್ಲಿ ಕಾಬೂಲ್ ತಾಲಿಬಾನ್ ವಶವಾಗಲಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಕಳೆದ ವಾರವಷ್ಟೇ ಭವಿಷ್ಯ ನುಡಿದಿತ್ತು. ಅದರಂತೆಯೇ ಸಂಪೂರ್ಣ ಕಾಬೂಲ್​ ಉಗ್ರರ ವಶವಾಗಿದೆ. ಈ ಮೂಲಕ ಅಫ್ಘಾನಿಸ್ತಾನದ ಪ್ರತಿಯೊಂದು ಪಟ್ಟಣ, ನಗರ, ಮಹಾನಗರ ಎಲ್ಲವೂ ಉಗ್ರರ ವಶವಾಗಿದೆ.
VIDEO: ಎನ್​ಕೌಂಟರ್​ನಲ್ಲಿ ಸತ್ತ ಹಿಜ್ಬುಲ್ ಉಗ್ರನ ತಂದೆಯಿಂದ ಧ್ವಜಾರೋಹಣ: ಎಲ್ಲರೂ ಹಾಡಿದರು ಜನಗಣಮನ!

ಸೇನೆಗೆ ಸೇರುವುದಿದ್ದರೆ ಲೈಂಗಿಕ ಕ್ರಿಯೆ ನಡೆದಿರಬಾರದು ಎಂಬ ವಿಚಿತ್ರ ಆದೇಶಕ್ಕೆ ಕೊನೆಗೂ ಸಿಕ್ತು ಮುಕ್ತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 13 =
Remember me
