ಕಾಬುಲ್:ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ಬೆನ್ನಲ್ಲೇ ಇಲ್ಲಿಯ ಜನರ ಸ್ಥಿತಿ ಕರುಣಾಜನಕವಾಗಿದೆ. ಕಾಬುಲ್‌ ಅನ್ನು ಸಂಪೂರ್ಣವಾಗಿ ಸ್ವಾಧೀನಕ್ಕೆ ತೆಗೆದುಕೊಂಡಿದ್ದ ತಾಲಿಬಾನಿಗಳು ಈ ಮೂಲಕ ಸಂಪೂರ್ಣ ರಾಷ್ಟ್ರದ ಮೇಲೆ ಜಯ ಸಾಧಿಸಿದ್ದಾರೆ.
ಈ ಉಗ್ರರಿಂದ ತಪ್ಪಿಸಿಕೊಂಡು ಮಾನ, ಪ್ರಾಣವನ್ನು ಉಳಿಸಿಕೊಳ್ಳಲು ಜನರು ದೇಶಬಿಟ್ಟು ಹೊರಡುತ್ತಿದ್ದಾರೆ. ಆದರೆ ಬೇರೆ ದೇಶಗಳಿಗೆ ಹೋಗಲು ಸಾರಿಗೆ ಸೌಕರ್ಯಗಳೇ ಇಲ್ಲದೇ ಅಕ್ಷರಶಃ ನಲುಗಿ ಹೋಗಿದ್ದಾರೆ.
ಈ ನಡುವೆಯೇ ಕಾಬುಲ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಒಂದೇ ಒಂದು ವಿಮಾನವನ್ನು ಹತ್ತಲು ಅಫ್ಘಾನ್‌ ಪ್ರಜೆಗಳು ಮುಗಿಬಿದ್ದಿದ್ದು, ನೂಕು ನುಗ್ಗಲು ಉಂಟಾದ ದೃಶ್ಯವೀಗ ವೈರಲ್‌ ಆಗಿದೆ.
ವಿಮಾನ ಹತ್ತಲು ಹತ್ತು ಹಲವು ನಿಯಮಗಳು ಇರುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿಮಾನ ಹತ್ತಲು ಅನುಮತಿ ನೀಡಲಾಗುತ್ತದೆ. ಆದರೆ ಇದ್ಯಾವುದನ್ನೂ ಲೆಕ್ಕಿಸದೇ ವಿಮಾನ ನಿಲ್ದಾಣಕ್ಕೆ ನುಗ್ಗಿರುವ ಪ್ರಜೆಗಳು, ಪ್ರಾಣವನ್ನು ಉಳಿಸಿಕೊಂಡರೆ ಸಾಕು ಎನ್ನುವಂತೆ ಏಣಿ ಮೂಲಕ ವಿಮಾನ ಹತ್ತಲು ನೂಕು ನುಗ್ಗಲು ಮಾಡಿರುವ ದೃಶ್ಯವನ್ನು ಕಾಣಬಹುದಾಗಿದೆ.
ಮನಕಲಕುವ ವಿಡಿಯೋ ಇಲ್ಲಿದೆ ನೋಡಿ:
Sad scenes from Kabul airport. Thousands trying to board a plane with capacity of few hundreds. Future is uncertain with Taliban at gates of airport. US shud never to forgiven for this act. Pray for Afghanistan.#Talibanpic.twitter.com/Jk8D3Wo5Sw
— Netbuzz Africa (@netbuzzafrica)August 16, 2021

ಮೂರನೇ ಅಲೆಗೆ ಹೆದರಿ ಬೇಗ ಬೇಗ ಮದುವೆಯಾದ 50 ಸಾವಿರ ಆಂಧ್ರದ ಜೋಡಿ!

ಕಾಂಗ್ರೆಸ್‌ಗೆ ಬಿಗ್‌ ಶಾಕ್‌! ಅಖಿಲ ಭಾರತ ಅಧ್ಯಕ್ಷೆ ರಾಜೀನಾಮೆ- ಸೋನಿಯಾಗಾಂಧಿಗೆ ಪತ್ರ ರವಾನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 6 =
Remember me
