ಕಾಬೂಲ್:ಕಳೆದ ಆಗಸ್ಟ್‌ 15ರಂದು ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಸಂಪೂರ್ಣವಾಗಿ ವಶಪಡಿಸಿಕೊಂಡ ನಂತರ ಜೀವ ಉಳಿಸಿಕೊಳ್ಳಲು ದೇಶತೊರೆಯಲು ಹವಣಿಸಿದವರು ಅದೆಷ್ಟೋ ಮಂದಿ. ತಾವು ಸತ್ತರೂ ಚಿಂತೆಯಿಲ್ಲ, ತಮ್ಮ ಮಕ್ಕಳಾದರೂ ಬದುಕಲಿ ಎಂದುಕೊಂಡು ಬೇಲಿಯಾಚೆ ಇರುವ ಅಮೆರಿಕದ ಸೈನಿಕರ ಕೈಗೆ ತಮ್ಮ ಮಕ್ಕಳನ್ನು ಕೊಡುತ್ತಿರುವ ದೃಶ್ಯ ಎಂಥ ಕಲ್ಲುಹೃದಯದವರ ಕಣ್ಣಲ್ಲೂ ನೀರು ತುಂಬಿಸುವಂತಿತ್ತು.
ತಂತಿಬೇಲಿಯ ಮೇಲೆ ಹೆತ್ತ ಕರುಳನ್ನು ಅತ್ತ ಕಡೆಯಿರುವ ಅಮೆರಿಕದ ಸೈನಿಕರತ್ತ ಎಸೆಯುತ್ತಿರುವ ತಾಯಂದಿರನ್ನು ನೋಡಿದವರು ಕಣ್ಣೀರಾದದ್ದಂತೂ ನಿಜ. ಅದರಲ್ಲಿಯೂ ಶಿಶುಗಳನ್ನೂ ಬಿಡದೇ ಹೆಣ್ಣುಮಕ್ಕಳನ್ನು ಲೈಂಗಿಕತೆ ಬಳಸಿಕೊಳ್ಳಲು ತಾಲಿಬಾನಿಗಳು ಮುಂದಾದಾಗ ಇಂಥ ದೃಶ್ಯ ಅಲ್ಲಿ ಸಾಮಾನ್ಯವಾಗಿಬಿಟ್ಟಿತ್ತು.
ಅಂಥದ್ದೇ ವೈರಲ್‌ ಆಗಿರುವ ವಿಡಿಯೋಗಳ ಪೈಕಿ ಆಗಸ್ಟ್‌ 19ರಂದು 2 ತಿಂಗಳ ಪುಟಾಣಿ ಕಂದಮ್ಮನನ್ನು ಮಿರ್ಜಾ ಅಲಿ ದಂಪತಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರಿ ಜನಸಮೂಹದ ನಡುವೆ ಗೋಡೆಯನ್ನು ದಾಟಿಸಿ ಅಮೆರಿಕದ ಸೈನಿಕರ ಕೈಗೆ ಕೊಡುತ್ತಿದುದು. 10 ವರ್ಷಗಳ ಕಾಲ ಯುಎಸ್ ರಾಯಭಾರ ಕಚೇರಿಯ ಉದ್ಯೋಗಿಯಾಗಿದ್ದ ಮಿರ್ಜಾ ಅಲಿ ಅವರು, ಸುಮಾರು 5 ಮೀಟರ್ ಎತ್ತರದ ಗೋಡೆಯ ಇನ್ನೊಂದು ಬದಿಯಲ್ಲಿದ್ದ ಅಮೆರಿಕದ ಸೈನಿಕರಿಗೆ ಕರುಳಬಳ್ಳಿಯನ್ನು ಕೊಡುತ್ತಿರುವ ದೃಶ್ಯ ಕಣ್ಣೀರು ತರಿಸುವಂತಿದೆ. ಈ ಪುಟಾಣಿಯ ಹೆಸರು ಸೊಹೈಲ್‌.
ಆದರೆ ಇದೀಗ ಈ ಮಗು ಕಾಣೆಯಾಗಿದೆ. ಮಗುವನ್ನು ಅಮೆರಿಕದ ಸೈನಿಕರಿಗೆ ಒಪ್ಪಿಸಿ, ಜೀವವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಈ ದಂಪತಿಗೆ ವಿಮಾನ ನಿಲ್ದಾಣದಲ್ಲಿ ಮಗು ಸಿಗಲೇ ಇಲ್ಲ. ನೀವು ವಿಮಾನ ನಿಲ್ದಾಣ ತಲುಪುವಷ್ಟರಲ್ಲಿ ಮಗು ನಿಮಗೆ ಸಿಗುತ್ತದೆ ಎಂದು ಸೈನಿಕರು ಹೇಳಿದ್ದರು. ಅಲ್ಲಿಂದ ಇಲ್ಲಿಯವರೆಗೂ ಮಗುವಿಗಾಗಿ ದಂಪತಿ ನಡೆಸುತ್ತಿರುವ ಹುಡುಕಾಟ ಅಷ್ಟಿಷ್ಟಲ್ಲ.
ಯುಎಸ್ ಮಿಲಿಟರಿ ಇಂಗ್ಲಿಷ್ ಮಾತನಾಡುವ ಕಾರಣ, ಮಿರ್ಜಾ ಅಲಿಗೆ ಸಂವಹನ ಮಾಡುವುದು ಕಷ್ಟಕರವಾಗಿತ್ತು. ಆದರೂ ಹೇಗೋ ಅವರು ಅಮೆರಿಕದ ಸೈನಿಕರ ಜತೆ ಸಂವಹನ ನಡೆಸುತ್ತಲೇ ಬಂದಿದ್ದರು. ಇದಾದ ಬಳಿಕ ಹತಾಶೆಯಿಂದ 4 ಮಕ್ಕಳು ಹಾಗೂ ಪತ್ನಿಯೊಂದಿಗೆ ಕತಾರ್‌ಗೆ ಅಲ್ಲಿಂದ ಜರ್ಮನಿಗೆ ಹೋಗಿ ಅಮೆರಿಕಕ್ಕೆ ಹೋದರು. ಅವರು ಪ್ರಸ್ತುತ ಟೆಕ್ಸಾಸ್‌ನ ಫೋರ್ಟ್ ಬ್ಲಿಸ್‌ನಲ್ಲಿರುವ ಆಫ್ಘನ್ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿದ್ದಾರೆ. ಆದರೂ ಈ ಮಗುವಿಗಾಗಿ ಅವರ ಹುಡುಕಾಟ ನಿಂತಿಲ್ಲ.
ಮಗುವನ್ನು ಹಸ್ತಾಂತರಿಸುತ್ತಿರುವ ವಿಡಿಯೋ ಇಲ್ಲಿದೆ ನೋಡಿ:

US soldiers rescue a BABY which was thrown over the wall of the airport in#Kabulin#AfghanistanThat is how desperate people are to get out.Think about throwing (literally) your CHILD to random strangers over a wall.Heartbreakingpic.twitter.com/TZkdLsZo6Z— Emily Schrader – אמילי שריידר امیلی شریدر (@emilykschrader)August 19, 2021
US soldiers rescue a BABY which was thrown over the wall of the airport in#Kabulin#AfghanistanThat is how desperate people are to get out.Think about throwing (literally) your CHILD to random strangers over a wall.Heartbreakingpic.twitter.com/TZkdLsZo6Z
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 2 =
Remember me
