ಕಾಬುಲ್​:ತಾಲಿಬಾನ್ ದಾಳಿಯಿಂದ ತತ್ತರಿಸಿರುವ ಅಪ್ಘಾನಿಸ್ತಾನಕ್ಕೆ ಗಾಯದ ಮೇಲೆ ಬರೆ ಎನ್ನುವಂತೆ ಮತ್ತೊಂದು ಆಘಾತ ಉಂಟಾಗಿದೆ. ಅದೇನೆಂದರೆ ಅಪ್ಘಾನಿಸ್ತಾನದಲ್ಲಿ ಇಂದು ಮುಂಜಾನೆ ಭೂಮಿ ಕಂಪಿಸಿದೆ.
ಉಗ್ರರ ಹಿಡಿತಕ್ಕೆ ಸಿಲುಕಿದಾಗಲೇ ನಿನ್ನೆ ಆಫ್ಘಾನಿಸ್ತಾನದ ಸೇನಾ ವಿಮಾನ ಪತನವಾಗಿತ್ತು. ಇಂದು ಬೆಳಗಿನ ಜಾವ ಆಫ್ಘಾನಿಸ್ತಾನದ ಫೈಜಾಬಾದ್ ಆಗ್ನೇಯ ಪ್ರದೇಶದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದೆ.
ಬೆಳಗ್ಗೆ 6.08ಕ್ಕೆ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿದ್ದಾರೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮೊಲಾಜಿ ವರದಿ ತಿಳಿಸಿದೆ. ಇದಕ್ಕೂ ಮೊದಲು ಅಂದರೆ ಆಗಸ್ಟ್ 15 ರಂದೇ ಆಫ್ಘಾನಿಸ್ತಾನ ಮತ್ತು ಕಜಕಿಸ್ತಾನ ಭಾಗದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಹೀಗೆ ಪದೇ ಪದೇ ಭೂಕಂಪನ ಉಂಟಾಗುತ್ತಿರುವುದರಿಂದ ಜನ ಜೀವನ ಅಲ್ಲೋಲಕಲ್ಲೋಲವಾಗಿದೆ.
‘ಕಚೇರಿ ಸುತ್ತುವರೆದಿದ್ದರು, ಬುರ್ಖಾ ಹಾಕದವರನ್ನು ಕೊಲ್ಲುತ್ತಿದ್ದರು, ಜೀವ ಕೈಯಲ್ಲಿ ಹಿಡಿದು ಓಡಿದೆ…’

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:two × 4 =
Remember me
