ಬೆಂಗಳೂರು:ಸ್ಯಾಂಡಲ್​ವುಡ್​ನ ಡ್ರಗ್ಸ್‌ ಜಾಲದಲ್ಲಿ ಸಿಲುಕಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿಯ ಆಪ್ತ ರವಿಶಂಕರ್​ಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ಮೂಲದ ಪೆಡ್ಲರ್ ಲೂಮ್‌ ಪೆಪ್ಪರ್‌ ಈಗ ಸಿಸಿಬಿ ಪೊಲೀಸರಿಗೆ ತಲೆನೋವಾಗಿದ್ದಾನೆ.
ಕಾರಣವಿಷ್ಟೇ. ಆಫ್ರಿಕಾ ಖಂಡದ ಸೆನೇಗಲ್ ಮೂಲವನಾಗಿರುವ ಲೂಮ್‌ ಪೆಪ್ಪರ್‌ ತನಗೆ ಆಫ್ರಿಕನ್‌ ಭಾಷೆ ಬಿಟ್ಟು ಬೇರೆ ಯಾವುದೇ ಭಾಷೆ ಬರುವುದಿಲ್ಲ. ಬೇಕಿದ್ದರೆ ಆಫ್ರಿಕನ್‌ ಭಾಷೆಯಲ್ಲಿಯೇ ಪ್ರಶ್ನಿಸಿ, ಉತ್ತರಿಸುವೆ ಎಂದು ಹರುಕು ಮುರುಕು ಇಂಗ್ಲಿಷ್‌ನಲ್ಲಿ ಹೇಳಿದ್ದಾನೆ.
ಆರಂಭದಲ್ಲಿ ಈತ ಬೆಂಗಳೂರಿನ ಕಾಲೇಜು ಮತ್ತು ಐಟಿ ಬಿಟಿ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಪಬ್​ವೊಂದರಲ್ಲಿ ಪಾರ್ಟಿ ಆಯೋಜಕರ ಪರಿಚಯವಾಗಿ ಅಂದಿನಿಂದ ಹೈ ಎಂಡ್ ಪಾರ್ಟಿಗಳಿಗೆ ಈತ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ಆ ಪಾರ್ಟಿಗಳಲ್ಲಿ ಪರಿಚಯವಾದ ಉದ್ಯಮಿ ಮಕ್ಕಳಿಗೂ ನೇರವಾಗಿ ಡ್ರಗ್ಸ್ ತಂದುಕೊಡುತ್ತಿದ್ದನೆನ್ನಲಾಗಿದೆ.
ಇದನ್ನೂ ಓದಿ:ಕಾರಣ ಏನೇ ಇರಬಹುದು ನೈತಿಕ ಪೊಲೀಸ್​ ಗಿರಿ ಹಕ್ಕು ಯಾರಿಗೂ ಇಲ್ಲ: ಸಂಯುಕ್ತಾ ಟ್ವೀಟ್​ಗೆ ರಮ್ಯಾ ರೀಟ್ವೀಟ್​!
ಡ್ರಗ್ಸ್ ಪ್ರಕರಣದಲ್ಲಿ ಎ7 ಆರೋಪಿಯಾಗಿದ್ದಾನೆ ಈತ. ಇಂಗ್ಲಿಷ್​ನಲ್ಲಿ ಕೇಳಿದ ಪ್ರಶ್ನೆಗೆ ಈತ ತನಗೆ ಇಂಗ್ಲಿಷ್ ಬರೋದಿಲ್ಲ ಎಂದಿದ್ದಾನೆ. ಈತನ ಇಂಗ್ಲಿಷ್ ಭಾಷೆ ಕೂಡ ಪೊಲೀಸರಿಗೆ ಅರ್ಥವಾಗುತ್ತಿಲ್ಲ. ಆದ್ದರಿಂದ ಈತನ ಬಾಯಿ ಬಿಡಿಸುವುದು ಸದ್ಯ ಪೊಲೀಸರಿಗೆ ಕಷ್ಟವಾಗಿದೆ ಎಂದು ತಿಳಿದುಬಂದಿದೆ.
ಆದರೆ ಈತ ತನಗೆ ಇಂಗ್ಲೀಷ್ ಭಾಷೆ ಗೊತ್ತಿಲ್ಲ ಎನ್ನುತ್ತಿರುವುದಕ್ಕೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೇವಲ ಆಫ್ರಿಕನ್‌ ಭಾಷೆ ಗೊತ್ತಿದ್ದ ಈತ ಬೇರೆ ಕಡೆಗಳಲ್ಲಿ ತನ್ನ ದಂಧೆಯನ್ನು ಹೇಗೆ ಮಾಡುತ್ತಿದ್ದ ಎನ್ನುವುದು ಪ್ರಶ್ನೆಯಾಗಿದೆ. ಈತ ನಾಟಕವಾಡುತ್ತಿದ್ದಾನೆ ಎಂಬ ಸಂಶಯ ಕಾಡತೊಡಗಿದೆ.ಅಷ್ಟೇ ಅಲ್ಲದೇ ಪ್ರಕರಣದ ಪ್ರಮುಖ ಆರೋಪಿ ರವಿಶಂಕರ್ ಈತನಿಗೆ ಈತನಿಗೆ ಇಂಗ್ಲಿಷ್ ಬರುತ್ತದೆ ಎಂದಿದ್ದ.
ಪೊಲೀಸರು ಇಂದು ಆಫ್ರಿಕನ್ ಭಾಷೆ ಬರುವ ಅನುವಾದಕರೊಬ್ಬರನ್ನು ಕರೆತಂದು ಲೂಮ್ ಪೆಪ್ಪರ್​ನನ್ನು ವಿಚಾರಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ನಾನು- ರಾಗಿಣಿ ಕ್ಲೋಸ್‌ ಕ್ಲೋಸ್‌: ಅರೆಸ್ಟ್‌ ಮಾಡಿ ಪ್ಲೀಸ್‌… ಸಿಸಿಬಿ ಕಚೇರಿಗೆ ಯುವಕನ ದೌಡು!

ಮುಸ್ಲಿಂ ಸಮುದಾಯಕ್ಕೆ ತೆಲಂಗಾಣ ಭರ್ಜರಿ ಗಿಫ್ಟ್‌: ಹಲವಾರು ಯೋಜನೆಗೆ ಗ್ನೀನ್‌ ಸಿಗ್ನಲ್‌

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 5 =
Remember me
