ಕೋಯಿಕ್ಕೋಡ್ (ಕೇರಳ):ಇತ್ತ ಪಂಜಾಬ್‌ ಮುಖ್ಯಮಂತ್ರಿಯಾಗಿದ್ದ ಅಮರೀಂದರ್‌ ಸಿಂಗ್‌ ಸಿಎಂ ಹುದ್ದೆ ತೊರೆದ ತಕ್ಷಣ ಬಿಜೆಪಿ ಸೇರುತ್ತಿದ್ದಾರೆ ಎಂದು ವರದಿಯಾಗುತ್ತಿದ್ದಂತೆಯೇ, ಅತ್ತ ನವಜೋತ್‌ ಸಿಧು ಕೂಡ ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ತೊರೆದಿದ್ದು ಆಮ್‌ ಆದ್ಮಿ ಪಕ್ಷ ಸೇರಲು ತಯಾರಿ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.
ಕಾಂಗ್ರೆಸ್ ನಾಯಕ ವಿ.ಎಂ.ಸುಧೀರನ್ ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿಗೆ ರಾಜೀನಾಮೆ ನೀಡಿ, ತದ ನಂತರ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೂ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ನಡುವೆಯೇ ಕಂಗಾಲಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕೇರಳಕ್ಕೆ ಧಾವಿಸಿದ್ದಾರೆ.
ಸಾಂಸ್ಥಿಕ ನವೀಕರಣದ ಬಗ್ಗೆ ತಮ್ಮೊಂದಿಗೆ ಮಾತುಕತೆ ನಡೆಸದ ಕಾರಣಕ್ಕಾಗಿ ಸುಧೀರನ್ ಅವರು ರಾಜ್ಯ ಕಾಂಗ್ರೆಸ್ ನಾಯಕತ್ವದೊಂದಿಗೆ ಮುನಿಸಿಕೊಂಡಿರುವುದೇ ಈ ರಾಜೀನಾಮೆಗೆ ಕಾರಣ ಎನ್ನಲಾಗಿದ್ದು, ಅವರನ್ನು ಸಮಾಧಾನಪಡಿಸಲು ರಾಹುಲ್‌ ಗಾಂಧಿ ದೌಡಾಯಿಸಿದ್ದಾರೆ.
ರಾಹುಲ್ ಜತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೂ ಕೇರಳಕ್ಕೆ ಹೋಗಿದ್ದು, ಇಂದು ಅಲ್ಲಿ ಸಭೆ ನಡೆಯಲಿದೆ. ಕೂಡಾ ಆಗಮಿಸಿದ್ದಾರೆ.ಮೂಲಗಳ ಪ್ರಕಾರ ರಾಹುಲ್ ಗಾಂಧಿ ಸಭೆಯೊಂದನ್ನು ನಡೆಸಲಿದ್ದು, ಕೆ.ಸುಧಾಕರನ್ ಮತ್ತು ವಿ.ಡಿ.ಸತೀಶನ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಕೋಯಿಕ್ಕೋಡ್ ಮತ್ತು ಮಲಪ್ಪುರಂಗೆ ರಾಹುಲ್‌ ಗಾಂಧಿ ಭೇಟಿ ನೀಡಲಿದ್ದು, ಮಲಪ್ಪುರಂನಲ್ಲಿ ಎಚ್‌ಐಎಂಎ ಡಯಾಲಿಸಿಸ್ ಕೇಂದ್ರವನ್ನು ಮತ್ತು ಕೋಯಿಕ್ಕೋಡ್​​ನಲ್ಲಿ ವೃದ್ಧರಿಗೆ ಸಂಬಂಧಿಸಿದ ಕೇಂದ್ರವೊಂದರ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಪಟ್ಟ ತೊರೆದ ಅಮರೀಂದರ್‌ ಸಿಂಗ್‌ ಕೇಂದ್ರದ ಕೃಷಿ ಸಚಿವ? ಕುತೂಹಲ ಮೂಡಿಸಿದೆ ನಾಯಕನ ನಡೆ!

ಕಾಂಗ್ರೆಸ್‌ನಲ್ಲಿ ಅಲ್ಲೋಲ- ಕಲ್ಲೋಲ: ಸಿಂಗ್‌ ಹಾದಿ ತುಳಿದ ಸಿಧು! ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eight =
Remember me
