ನವದೆಹಲಿ:ಹೆಚ್ಚು ಹೆಚ್ಚು ಯುವಕರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್​ ಯೋಜನೆ ವಿರೋಧಿಸಿ ದೇಶಾದ್ಯಂತ ಒಂದು ಗುಂಪಿನ ಜನ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅದೇ ಇನ್ನೊಂದೆಡೆ ಅಗ್ನಿಪಥ್​ಕ್ಕೆ ನೇಮಕವಾಗುವ ಯುವಕರಿಗೆ ಇರುವ ಸೌಲಭ್ಯಗಳ ಕುರಿತು ಕೇಂದ್ರ ಸರ್ಕಾರ ಜನರಿಗೆ ಮನವರಿಕೆ ಮಾಡುತ್ತಲೇ ಬಂದಿದೆ.
ಇದರ ಪ್ರತಿಫಲವಾಗಿಯೇ ವಾಯುಪಡೆಗೆ ಕೇವಲ ಆರು ದಿನಗಳಲ್ಲಿ 1.83 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ. ಅಗ್ನಿಪಥ್ ಯೋಜನೆಯಡಿ ಅಗ್ನಿವೀರರಾಗಿ ಸೇವೆ ಸಲ್ಲಿಸಲು ದೇಶದ ಯುವಕರು ಅತ್ಯುತ್ಸಾಹ ತೋರಿಸಿದ್ದಾರೆ. ಇಲ್ಲಿಯವರೆಗೆ, 1,83,634 ಭವಿಷ್ಯದ ಅಗ್ನಿವೀರ್‌ಗಳು ನೋಂದಣಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಬರುವ ಜುಲೈ 5ರಂದು ನೋಂದಣಿ ಮುಕ್ತಾಯವಾಗುತ್ತದೆ ಎಂದು ಭಾರತೀಯ ವಾಯುಪಡೆಯು ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿದೆ.
So far, 183634 future#Agniveershave applied on the registration websitehttps://t.co/kVQxOwkUczIf you want to be an#Agniveertoo, apply soon.Registration closes on 05 July 2022.#BhartiyaVayuSenaKeAgniveerpic.twitter.com/EV2yCatzII— Indian Air Force (@IAF_MCC)June 29, 2022
So far, 183634 future#Agniveershave applied on the registration websitehttps://t.co/kVQxOwkUczIf you want to be an#Agniveertoo, apply soon.Registration closes on 05 July 2022.#BhartiyaVayuSenaKeAgniveerpic.twitter.com/EV2yCatzII
ಅಗ್ನಿಪಥ್ ಯೋಜನೆಯಡಿಯಲ್ಲಿ ನೇಮಕಗೊಂಡವರನ್ನು ‘ ಅಗ್ನಿವೀರ್ ‘ ಎಂದು ಕರೆಯಲಾಗುತ್ತದೆ. ಜೂನ್ 16 ರಂದು ಸರ್ಕಾರವು ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 2022 ಕ್ಕೆ 21 ರಿಂದ 23 ವರ್ಷಗಳಿಗೆ ಹೆಚ್ಚಿಸಿದೆ.
ಜೂನ್ 24 ರಂದು ಪ್ರಾರಂಭವಾದ ನೋಂದಣಿ ಪ್ರಕ್ರಿಯೆಯು ಜುಲೈ 5 ರಂದು ಮುಕ್ತಾಯಗೊಳ್ಳಲಿದೆ. ಆನ್‌ಲೈನ್ ಪರೀಕ್ಷೆ ಪ್ರಕ್ರಿಯೆ ಜುಲೈ 24 ರಿಂದ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಅಧಿಕೃತ ವೆಬ್‌ಸೈಟ್ ಮೂಲಕ ನೇರವಾಗಿ ಅಗ್ನಿಪಥ್ ಯೋಜನೆ 2022 ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಹತೆಯ ಮಾನದಂಡಗಳು ಹೀಗಿವೆಆಸಕ್ತ ಅಭ್ಯರ್ಥಿಗಳು 10ನೇ ತರಗತಿ ಅಥವಾ ಮೆಟ್ರಿಕ್ಯುಲೇಷನ್ ಉತ್ತೀರ್ಣ ಪ್ರಮಾಣಪತ್ರ, ಮಧ್ಯಂತರ ಅಥವಾ 10+2 ಅಥವಾ ತತ್ಸಮಾನ ಅಂಕಪಟ್ಟಿ ಅಥವಾ 3 ವರ್ಷಗಳ ಇಂಜಿನಿಯರಿಂಗ್ ಡಿಪ್ಲೊಮಾ ಅಂತಿಮ ವರ್ಷದ ಮಾರ್ಕ್​ಷೀಟ್​ ಮತ್ತು ಮೆಟ್ರಿಕ್ಯುಲೇಷನ್ ಅಂಕಪಟ್ಟಿ ಅಥವಾ 2 ವರ್ಷಗಳ ವೃತ್ತಿಪರ ಕೋರ್ಸ್ ಮಾರ್ಕ್​ಷೀಟ್​ ಮತ್ತು ವೃತ್ತಿಯಲ್ಲದ ಅಂಕಪಟ್ಟಿಗಳನ್ನು ಹೊಂದಿರಬೇಕು.
‘ಒಂದೂವರೆ ಲಕ್ಷ ಯುವಕರ ನೇಮಕ, ಒಂದು ಕೋಟಿ ರೂ. ಪರಿಹಾರ: ಗಲಭೆಕೋರರಿಗಿಲ್ಲ ಅವಕಾಶ!
ಅಗ್ನಿಪಥ್​ ಯೋಜನೆ: ಪ್ರತಿಭಟನೆ ಹೆಸರಲ್ಲಿ ಹಿಂಸಾಚಾರಕ್ಕಿಳಿದ ಗಲಭೆಕೋರರಿಗೆ ಬಿಗ್​ ಶಾಕ್​ ನೀಡಿದ ಯೋಗಿ
ಅಗ್ನಿಪಥ್​ v/s ಕಾಂಗ್ರೆಸ್​- ಎಲ್ಲಿದ್ದೆ ಇಲ್ಲೀ ತನಕ…ಈಗ್ಯಾಕೆ ಬಂದ್ಯಯ್ಯ: ವಿಂಗ್​ ಕಮಾಂಡರ್​ ಹೇಳಿದ್ದೇನು ನೋಡಿ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
