ನವದೆಹಲಿ:ಅಗ್ನಿಪಥ್​ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಹಲವೆಡೆ ಕಾಂಗ್ರೆಸ್​ ಸೇರಿದಂತೆ ಹಲವರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ಹೆಸರಿನಲ್ಲಿ ರೈಲಿಗೆ ಬೆಂಕಿ ಹಚ್ಚುವುದು, ಆಸ್ತಿಪಾಸ್ತಿ ಹಾಳು ಮಾಡುವುದು, ಕಲ್ಲು ತೂರಾಟ… ಹೀಗೆ ನೂರಾರು ಕೋಟಿ ರೂಪಾಯಿಗಳನ್ನು ನಷ್ಟ ಮಾಡಿದ್ದಾರೆ ಪ್ರತಿಭಟನಾಕಾರರು. ಈ ನಡುವೆಯೇ ಅಗ್ನಿಪಥ್​ ಯೋಜನೆಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ಘೋಷಣೆಗಳನ್ನು ಮಾಡಿದೆ ಕೇಂದ್ರ ಸರ್ಕಾರ.
ಈ ಕುರಿತು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ, ಏರ್ ಮಾರ್ಷಲ್ ಎಸ್‌ಕೆ ಝಾ ಸೇರಿದಂತೆ ಸೇನಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಜೂನ್​ 24ರಿಂದ ಆರಂಭಅಗ್ನಿವೀರರ ಮೊದಲ ಬ್ಯಾಚ್‌ನ ನೋಂದಣಿ ಪ್ರಕ್ರಿಯೆ ಜೂನ್ 24ರಂದು ಆರಂಭವಾಗಲಿದೆ. ಜುಲೈ 24ರಂದು ಮೊದಲ ಹಂತದ ಆನ್‌ಲೈನ್ ಪರೀಕ್ಷೆ ಪ್ರಕ್ರಿಯೆ ನಡೆಯಲಿದೆ. ಮೊದಲ ಬ್ಯಾಚ್‌ನ ಪ್ರವೇಶಾತಿ ಡಿಸೆಂಬರ್ ವೇಳೆಗೆ ಜರುಗಲಿದೆ. ಡಿಸೆಂಬರ್ 30ರಿಂದ ತರಬೇತಿ ಶುರುವಾಗಲಿದೆ ಎಂದು ಏರ್ ಮಾರ್ಷಲ್ ಎಸ್‌.ಕೆ ಝಾ ತಿಳಿಸಿದ್ದಾರೆ.
ಸದ್ಯ 46 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲಿದ್ದೇವೆ. ಶೀಘ್ರವೇ ಈ ಸಂಖ್ಯೆಯನ್ನು ಒಂದೂವರೆ ಲಕ್ಷಕ್ಕೆ ಏರಿಸಲಿದ್ದೇವೆ. ಮುಂದಿನ 4-5 ವರ್ಷಗಳಲ್ಲಿ ತಮ್ಮ ಸೈನಿಕರ ನೇಮಕಾತಿ 50 ಸಾವಿರದಿಂದ 60 ಸಾವಿರ ಆಗಲಿದ್ದು, ತದನಂತರ 90 ಸಾವಿರದಿಂದ ಲಕ್ಷಕ್ಕೆ ಏರುತ್ತದೆ. ಇದಾದ ಬಳಿಕ ಒಂದೂವರೆ ಲಕ್ಷ ಯುವಕರ ನೇಮಕ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ ಮೊದಲ ವಾರದ ವೇಳೆಗೆ, 25,000 ಅಗ್ನಿವೀರರ ಮೊದಲ ಬ್ಯಾಚ್ ನಮಗೆ ಸಿಗಲಿದ್ದು, ಎರಡನೇ ಬ್ಯಾಚ್ ಫೆಬ್ರವರಿ 2023ರಲ್ಲಿ ಲಭ್ಯವಾಗಲಿದೆ. ಅದರಲ್ಲಿ 40,000 ಮಂದಿ ಇರಲಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ಬನ್ಸಿ ಪೊನ್ನಪ್ಪ ತಿಳಿಸಿದ್ದಾರೆ.
#WATCHNo rollback of#Agnipathscheme, says Lt General Anil Puri, Additional Secy, Dept of Military Affairs, MoDpic.twitter.com/d4raPk9IjN
— ANI (@ANI)June 19, 2022

#WATCH| Ministry of Defence briefs the media on Agnipath recruitment schemehttps://t.co/JRgzkQyuOn
— ANI (@ANI)June 19, 2022

ಪ್ರತಿಭಟನಾಕಾರರಿಗಿಲ್ಲ ಅವಕಾಶ:ಅಗ್ನಿಪಥ್​ ಯೋಜನೆಯನ್ನು ವಿರೋಧಿಸಿ ಗಲಭೆ ಮಾಡುತ್ತಿರುವ, ಬೆಂಕಿ ಹಚ್ಚುತ್ತಿರುವ, ಕಲ್ಲು ತೂರಾಟ ನಡೆಸುತ್ತಿರುವ ಯುವಕರಿಗೆ ನೇಮಕಾತಿ ಪ್ರಕ್ರಿಯೆಯಿಂದ ಹೊರಕ್ಕೆ ಇಡಲಾಗಿದೆ. ಈ ಕುರಿತು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಸ್ಪಷ್ಟಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಗೆ ಬರುವ ಪ್ರತಿಯೊಬ್ಬರೂ ಪ್ರತಿಭಟನೆ ಅಥವಾ ವಿಧ್ವಂಸಕ ಕೃತ್ಯದ ಭಾಗವಾಗಿಲ್ಲ ಎಂದು ಪ್ರಮಾಣಪತ್ರ ನೀಡಬೇಕಾಗುತ್ತದೆ. ನೇಮಕಾತಿಗೆ ಆಗಮಿಸುವ ಪ್ರತಿಯೊಬ್ಬರ ಪೊಲೀಸ್​ ವೆರಿಫಿಕೇಷನ್​ ನಡೆಯುತ್ತದೆ. ಪೊಲೀಸರಿಂದ ಗ್ರೀನ್​ ಸಿಗ್ನಲ್​ ಸಿಕ್ಕ ನಂತರವಷ್ಟೇ ಅಂಥವರನ್ನು ನೇಮಕಾತಿಗೆ ಪರಿಗಣಿಸಲಾಗುವುದು ಎಂದು ಪುರಿ ತಿಳಿಸಿದ್ದಾರೆ.
“ಮೂರೂ ವಿಭಾಗಗಳಿಂದ ಪ್ರತಿ ವರ್ಷವೂ ಸುಮಾರು 17,600 ಮಂದಿ ಅವಧಿಗೆ ಮುನ್ನವೇ ನಿವೃತ್ತಿ ಪಡೆಯುತ್ತಿದ್ದಾರೆ. ನಿವೃತ್ತಿ ಬಳಿಕ ಏನು ಮಾಡುತ್ತೀರಿ ಎಂದು ಯಾರೂ ಕೂಡ ಅವರನ್ನು ಕೇಳಲು ಹೋಗಿಲ್ಲ. ಅಗ್ನಿವೀರರು ಕೂಡ ಹಾಲಿ ಸೇವೆಯಲ್ಲಿರುವ ಸಾಮಾನ್ಯ ಸೈನಿಕರಂತೆಯೇ ಸಿಯಾಚಿನ್ ಹಾಗೂ ಇತರೆ ಕೆಲವು ಪ್ರದೇಶಗಳಲ್ಲಿ ಅದೇ ಭತ್ಯೆಯನ್ನು ಪಡೆಯಲಿದ್ದಾರೆ. ಸೇವಾ ಪರಿಸ್ಥಿತಿಗಳಲ್ಲಿ ಅವರ ನಡುವೆ ಯಾವುದೇ ತಾರತಮ್ಯ ಇರುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಅಗ್ನಿಪಥದಡಿ ಸಿಗುವ ಸೌಲಭ್ಯಗಳು:* ಭಾರತೀಯ ವಾಯುಸೇನೆ ಯೋಧರಿಗೆ ವೇತನದ ಜೊತೆಗೆ ಸಂಕಷ್ಟ ಭತ್ಯೆ, ಸಮವಸ್ತ್ರ ಭತ್ಯೆ, ಕ್ಯಾಂಟೀನ್ ಸೌಲಭ್ಯ, ವೈದ್ಯಕೀಯ ಸೌಲಭ್ಯ ಸೇರಿದಂತೆ ಸಾಮಾನ್ಯ ಸೈನಿಕರಿಗೆ ನೀಡುವ ಎಲ್ಲಾ ಸೌಲಭ್ಯ ಸಿಗಲಿವೆ.* ಒಂದು ವರ್ಷದಲ್ಲಿ 30 ದಿನ ರಜೆ ಘೋಷಿಸಲಾಗಿದೆ. ಇದರ ಜತೆಗೆ ಹೆಚ್ಚುವರಿಯಾಗಿ ಅನಾರೋಗ್ಯ ರಜೆ(ಮೆಡಿಕಲ್ ಲೀವ್) ನೀಡಲಾಗುತ್ತದೆ.* ನಾಲ್ಕು ವರ್ಷಗಳ ಸೇವಾವಧಿಯ ಸಂದರ್ಭದಲ್ಲಿ ಮೃತಪಟ್ಟರೆ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಹುತಾತ್ಮ ಯೋಧರ ಕುಟುಂಬಕ್ಕೆ 1 ಕೋಟಿ ರೂಪಾಯಿ ಗೌರವ ಧನವನ್ನು ನೀಡಲಾಗುತ್ತದೆ. ’* ಒಂದು ವೇಳೆ ಸೇವಾವಧಿಯ ಸಂದರ್ಭದಲ್ಲಿ ಅಂಗವೈಕಲ್ಯಕ್ಕೆ ತುತ್ತಾದರೆ, 44 ಲಕ್ಷ ರೂಪಾಯಿ ಜೊತೆಗೆ ಉಳಿದ ಅವಧಿಯ ಪೂರ್ಣ ವೇತನವನ್ನು ನೀಡಲಾಗುವುದು. ಇದರ ಜೊತೆಗೆ ಸೇವಾ ನಿಧಿ ಪ್ಯಾಕೇಜ್ ಕೂಡ ಲಭ್ಯವಿರುತ್ತದೆ.
Indian Navy has 30 women officers at present sailing on different Indian Navy ships. We have decided that under#Agnipathscheme, we will recruit women also. They will be deployed on warships also: Vice Admiral Dinesh Tripathi
— ANI (@ANI)June 19, 2022

By December first week, we will get the first batch of 25,000 'Agniveers' and the second batch would be inducted around February 2023 making it 40,000: Lt Gen Bansi Ponappa on#Agnipathschemepic.twitter.com/bgMwVtnQZE
— ANI (@ANI)June 19, 2022

ಮಹಿಳೆಯರಿಗೂ ಅವಕಾಶಭಾರತೀಯ ನೌಕಾಪಡೆಯಲ್ಲಿ ಪ್ರಸ್ತುತ 30 ಮಹಿಳಾ ಅಧಿಕಾರಿಗಳು ವಿಭಿನ್ನ ನೌಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯಡಿ ಮಹಿಳೆಯರನ್ನು ಕೂಡ ನೇಮಕ ಮಾಡಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ಅವರನ್ನು ಕೂಡ ಯುದ್ಧ ನೌಕೆಗಳಲ್ಲಿ ನಿಯೋಜಿಸಲಾಗುವುದು ಎಂದಿದ್ದಾರೆ.
ಅಗ್ನಿಪಥ್​ v/s ಕಾಂಗ್ರೆಸ್​- ಎಲ್ಲಿದ್ದೆ ಇಲ್ಲೀ ತನಕ…ಈಗ್ಯಾಕೆ ಬಂದ್ಯಯ್ಯ: ವಿಂಗ್​ ಕಮಾಂಡರ್​ ಹೇಳಿದ್ದೇನು ನೋಡಿ…

ಸಿದ್ದರಾಮಯ್ಯ ಮದ್ವೆಯಾಗಿದ್ದು ಯಾವಾಗ್ರಿ? ಎಷ್ಟು ವರ್ಷಕ್ಕೆ ಮಕ್ಕಳು ಮಾಡಿದ್ರು? 21ಕ್ಕೇ ಆಗತ್ತೇನ್ರಿ: ಈಶ್ವರಪ್ಪ ಕಿಡಿ

ಅಗ್ನಿಪಥ್: ಕಾಂಗ್ರೆಸ್​ನಿಂದ ಬೆಂಕಿಗೆ ತುಪ್ಪ ಸುರಿಯುವ ಕೆಲಸ- ಸಿಎಂ ಬೊಮ್ಮಾಯಿ ಕಿಡಿ

s in p
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + three =
Remember me
