ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನಿನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆ ಹುಡುಕಿದಷ್ಟೂ ಕುತೂಹಲವೇ ತೆರೆದುಕೊಳ್ಳುತ್ತಿದೆ. ನಿಜಕ್ಕೂ ಇದು ಕಾಯ್ದೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯೆ ಅಥವಾ ಇದರ ಹಿಂದಿರುವ ಉದ್ದೇಶವೇನು ಎಂಬ ಬಗ್ಗೆ ಸಂದೇಹ ಮೂಡುವಷ್ಟು ಒಂದೊಂದು ಘಟನೆಗಳು ಇದೀಗ ಬಹಿರಂಗಗೊಳ್ಳುತ್ತಿವೆ.
ಈ ಕಾನೂನು ವಿರೋಧಿಸಿ ಬಹುಮುಖ್ಯವಾಗಿ ಪ್ರತಿಭಟನೆ ನಡೆಸುತ್ತಿರುವವರು ಪಂಜಾಬ್​ ಮತ್ತು ಹರಿಯಾಣದ ರೈತರು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಭಾರತ ಮಾತ್ರವಲ್ಲದೇ, ಲಂಡನ್​, ಅಮೆರಿಕದಲ್ಲಿರುವ ಸಿಖ್​ ಸಮುದಾಯದವರು ಕೂಡ ಬೀದಿಗಿಳಿದಿದ್ದಾರೆ.ಆದರೆ ತೀರಾ ಕುತೂಹಲ ಎನ್ನುವ ವಿಷಯವೊಂದು ಇದೀಗ ಬೆಳಕಿಗೆ ಬಂದಿದೆ. 2008ರಲ್ಲಿ ಯುಪಿಎ ಸರ್ಕಾರ ಅಸ್ತಿತ್ವದಲ್ಲಿ ಇದ್ದ ವೇಳೆ, ಪಂಜಾಬ್ ಮತ್ತು ಹರಿಯಾಣದ ಇದೇ ರೈತರು ತಮ್ಮ ಗೋಧಿ ಉತ್ಪನ್ನಗಳನ್ನು ಕನಿಷ್ಠ ಮಾರಾಟ ಬೆಲೆಗೆ (ಎಂಎಸ್‌ಪಿ) ಮಾರಾಟ ಮಾಡಲು ಒತ್ತಾಯಿಸಿ ಯುಪಿಎ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದರು.
ಈ ಕುರಿತು 2008 ರ ಏಪ್ರಿಲ್ 3ರಂದು ದಿ ಟ್ರಿಬ್ಯೂನ್‌ನ ಚಂಡೀಗಢ ಆವೃತ್ತಿಯಲ್ಲಿಯೇ ವರದಿ ಪ್ರಕಟವಾಗಿದೆ. ರೈತರಿಂದ ಗೋಧಿ ಸಂಗ್ರಹಿಸುವುದನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನೇತೃತ್ವದ ಪಂಜಾಬ್ ಮತ್ತು ಹರಿಯಾಣ ರೈತರು ಭಾರಿ ಪ್ರತಿಭಟನೆ ನಡೆಸಿರುವುದಾಗಿ ಅದರಲ್ಲಿ ವರದಿಯಾಗಿದೆ.
ಕಿಸಾನ್ ಸಮನ್ವಯ ಸಮಿತಿಯ (ಕೆಸಿಸಿ) ಸಂಸ್ಥಾಪಕರಾಗಿದ್ದ ಆಗಿನ ಸಂಸದ ಶರದ್ ಜೋಶಿ ಮತ್ತು ಬಿಕೆಯುನ ಭೂಪಿಂದರ್ ಮನ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆ ಕ್ವಿಂಟಲ್‌ಗೆ ಸರಿಸುಮಾರು 1,600 ರೂ ಇರುವ ಸಂದರ್ಭದಲ್ಲಿ, ಎಂಎಸ್​ಪಿ ದರದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರತಿ ಕ್ವಿಂಟಲ್‌ಗೆ ಕೇವಲ 1,000 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ ನಷ್ಟ ಅನುಭವಿಸಬೇಕಾಗಿದೆ . ರಾಜಕೀಯ ರೈತರ ನಡುವೆ ಪ್ರವೇಶ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಸಂಸದ ಶರದ್ ಜೋಶಿ ಆಗ ಹೇಳಿದ್ದರು.
ಇದೇ ಕಾರಣಕ್ಕೆ ಕಾಂಗ್ರೆಸ್​ ಕೂಡ ತನ್ನ ಪ್ರಣಾಳಿಕೆಯಲ್ಲಿ ಕೃಷಿ ಕಾನೂನು ಜಾರಿಯ ಕುರಿತು ತಿಳಿಸಿತ್ತು. ಆದರೆ ಇದೀಗ ಬಿಜೆಪಿ ಸರ್ಕಾರ ಹನ್ನೆರಡು ವರ್ಷಗಳ ನಂತರ, ಅದೇ ರೈತ ಸಂಘಟನೆಯ ನೇತೃತ್ವದ ಅದೇ ರಾಜ್ಯಗಳ ರೈತರು ಈತ ಅವರು ಹೇಳಿದಂತೆಯೇ ಕೇಳಿದರೆ, ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಅಚ್ಚರಿ ತರುವಂಥದ್ದಾಗಿದೆ ಎನ್ನುತ್ತಿದ್ದಾರೆ ಕೃಷಿ ಕಾನೂನಿನ ಪರವಿರುವ ರೈತ ಮುಖಂಡರು.
ಅಂದು ಇದೇ ಕಾನೂನು ಬೇಕು ಎಂದವರು ಇದೀಗ ಹೊಸ ಕಾನೂನು ರೈತರ ಅನುಕೂಲಕ್ಕಾಗಿ ಅಲ್ಲ ಎಂದು ಆರೋಪಿಸಿ ವಿರೋಧಿಸುತ್ತಿದ್ದಾರೆ. ಇನ್ನೂ ಅಚ್ಚರಿಯ ವಿಷಯ ಎಂದರೆ ಅಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರು ಅಂದಿನ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಬಳಿ ಈಗಿರುವ ವ್ಯವಸ್ಥೆಯನ್ನು ತೆಗೆದುಹಾಕಿ ರೈತರಿಗೆ ನೇರ ಪಾವತಿಯನ್ನು ಖಾತರಿಪಡಿಸುವಂತೆ ಒತ್ತಾಯಿಸಿದ್ದನ್ನು ಇದೇ ಕಿಸಾನ್​ ಯೂನಿಯನ್​ ಬೆಂಬಲಿಸಿತ್ತು.
ತಮ್ಮ ಉತ್ಪನ್ನಗಳನ್ನು ರೈತರು ಅವರು ಬಯಸುವವರಿಗೆ ಮಾರಾಟ ಮಾಡಲು ಅನುವು ಮಾಡಿಕೊಡುವಂತೆ ಅಂದು ಕೋರಿಕೊಂಡ ಮನವಿಯು ಇದೀಗ ಈಡೇರಿದ್ದರೂ ಪ್ರತಿಭಟನೆ ವ್ಯಕ್ತವಾಗುತ್ತಿರುವುದು ಅಚ್ಚರಿಯ ವಿಷಯವಾಗಿದೆ ಎನ್ನಲಾಗುತ್ತಿದೆ.
ಮುಗ್ಧ ರೈತರ ಹೆಸರಲ್ಲಿ ನಡೀತೀರೋ ಪ್ರತಿಭಟನೆಯ ಇನ್ನೊಂದು ಕರಾಳಮುಖ ಬಯಲು!

ಕ್ಷಮಿಸು ಭಾರತ್​ಮಾತಾ- ಸೈನ್ಯದ ಸಮವಸ್ತ್ರ ಧರಿಸಿ, ಬಾವುಟ ಹಿಡಿಯುವ ಆಸೆ ಈಡೇರಿಸದೇ ಸಾಯುತ್ತಿರುವೆ…

ಜೂಜಾಟದಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಗೆದ್ದವರ ಬಳಿ ಆಕೆಯ ಕಳುಹಿಸಿದ- ಮುಂದಾದದ್ದೆಲ್ಲವೂ ಭಯಾನಕ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − three =
Remember me
