ಅಹಮದಾಬಾದ್​ (ಗುಜರಾತ್​):ಒಂದೆಡೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದ್ದರೆ, ಅದೇ ಇನ್ನೊಂದೆಡೆ, ಹೃದಯಾಘಾತಕ್ಕೆ ಒಳಗಾಗಿದ್ದ 107 ವರ್ಷ ವಯಸ್ಸಿನ ವಯೋವೃದ್ಧೆಗೆ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಆಪರೇಷನ್​ ಮಾಡಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.
ಅತ್ಯಂತ ಕಠಿಣ ಮತ್ತು ಸವಾಲಿನ ಶಸ್ತ್ರಚಿಕಿತ್ಸೆಯನ್ನು ಮಾಡಿ ಇಳಿ ವಯಸ್ಸಿನಲ್ಲಿಯೂ ಶಸ್ತ್ರಚಿಕಿತ್ಸೆಯನ್ನು ಫಲಪ್ರದ ಮಾಡಿದ್ದಾರೆ.
ಹೀಗೆ ಇಳಿವಯಸ್ಸಿನಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಮಹಿಳೆ ಮಧ್ಯಪ್ರದೇಶದ ಮಂಡಸೌರ ಜಿಲ್ಲೆಯ ಜಮ್ನಾಬೆನ್​​. ಜನ್ಮಾಬೆನ್​ ಅವರ ರಕ್ತನಾಳಗಳಲ್ಲಿ ಶೇ.99ರಷ್ಟು ಸಮಸ್ಯೆ ಉಂಟಾಗಿತ್ತು. ಆಕೆ ಬದುಕುವುದೇ ಕಷ್ಟವಾಗಿತ್ತು. ನಂತರ ಆಕೆಯ ಕುಟುಂಬಸ್ಥರು ಸುಮಾರು 8 ಗಂಟೆ ಕಾಲ ದೂರ ಪ್ರಯಾಣ ಬೆಳೆಸಿ ಅಹಮದಾಬಾದ್​ನ ಮಾರೆಂಗೋ ಸಿಮ್ಸ್​ (ಸಿಐಎಂಸಿ) ಆಸ್ಪತ್ರೆಗೆ ದಾಖಲಿಸಿದ್ದರು.
ಆಕೆ ಹೃದಯ ಬಡಿತದಲ್ಲಿ ಏರುಪೇರಾಗಿದ್ದರಿಂದ ಅದನ್ನು ಸಹಜ ಸ್ಥಿತಿಗೆ ತರಲು ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಈ ಶಸ್ತ್ರ ಚಿಕಿತ್ಸೆ ಮಾಡಿದರೆ ಮಹಿಳೆ ಬದುಕುಳಿಯುವುದು ಕಷ್ಟವಾಗಿತ್ತು. ಆದರೂ ಸವಾಲನ್ನು ಸ್ವೀಕರಿಸಿ ಹೃದ್ರೋಗ ತಜ್ಞ ಡಾ.ಕೆಯೂರ್ ಪಾರಿಖ್ ಮತ್ತು ಅರಿವಳಿಕೆ ತಜ್ಞ ಚಿಂತನ್ ಸೇಠ್ ಅವರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದೆ.
‘ದಿ ಕಶ್ಮೀರ್ ಫೈಲ್ಸ್’ ಬಳಿಕ ಮತ್ತೊಂದು ಕರಾಳ ಅಧ್ಯಾಯದ ಸತ್ಯ ದರ್ಶನ! ನಿರ್ದೇಶಕ ಏನು ಹೇಳಿದ್ದಾರೆ ಕೇಳಿ…

ವೈದ್ಯಕೀಯ ಲೋಕದಲ್ಲೊಂದು ಅದ್ಭುತ ಸಂಶೋಧನೆ: ಆರು ತಿಂಗಳಿನಲ್ಲಿ ಸಂಪೂರ್ಣ ಮಾಯವಾಯ್ತು ಕ್ಯಾನ್ಸರ್!

‘ಈ ತಲೆಗಳ ಕಡಿದರೆ 20 ಲಕ್ಷ ರೂ.. ಖಾತೆಗೆ ಕೂಡಲೇ ಜಮಾʼ: ಮುತಾಲಿಕ್​, ಯಶ್​ಪಾಲ್​ ಪ್ರತಿಕ್ರಿಯೆ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
