ನವದೆಹಲಿ:ನಷ್ಟದಲ್ಲಿದ್ದ ಏರ್‌ ಇಂಡಿಯಾ ಸಂಸ್ಥೆಯನ್ನು ಟಾಟಾ ಕಂಪೆನಿ ವಾಪಸ್‌ ಪಡೆದುಕೊಂಡಿದ್ದು, ಈ ಮೂಲಕ 69 ವರ್ಷಗಳ ಬಳಿಕ ಈ ಸಂಸ್ಥೆಯು ತನ್ನ ಮೂಲ ಮಾಲೀಕರ ಕೈ ಸೇರುತ್ತಿದೆ. ಕಳೆದ ವರ್ಷದ ಆಕ್ಟೋಬರ್ ತಿಂಗಳಿನಲ್ಲೇ ಟಾಟಾ ಕಂಪನಿಯು ಬಿಡ್‌ನಲ್ಲಿ ಏರ್ ಇಂಡಿಯಾವನ್ನ ತನ್ನದಾಗಿಸಿಕೊಂಡಿದೆ. ಇಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಟಾಟಾ ಕಂಪನಿಗೆ ಹಸ್ತಾಂತರ ಮಾಡಲಿದೆ.
ಸರ್ಕಾರವು ಕಳೆದ ಅಕ್ಟೋಬರ್ 8 ರಂದು 18 ಸಾವಿರ ಕೋಟಿ ರೂಪಾಯಿಗೆ ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ನ ಹಿಡುವಳಿ ಕಂಪನಿಯ ಅಂಗಸಂಸ್ಥೆಯಾದ ತಾಲೇಸ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಿತ್ತು. ಇಂದು ಟಾಟಾ ಕಂಪನಿಯ ಮುಖ್ಯಸ್ಥ ಚಂದ್ರಶೇಖರನ್ ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಮೂಲಕ ಇದನ್ನು ಅಧಿಕೃತವಾಗಿ ಪಡೆದುಕೊಳ್ಳಲಾಗಿದ್ದಾರೆ. ನಷ್ಟದಿಂದ ಮುಳುಗುತ್ತಿದ್ದ ಏರ್ ಇಂಡಿಯಾ ಈಗ ಮೂಲ ಮಾಲೀಕರು ಹಾಗೂ ಸ್ಥಾಪಕರ ಕೈ ಸೇರಿರುವುದರಿಂದ ಸೇವೆಯಲ್ಲಿ ಸುಧಾರಣೆಯೊಂದಿಗೆ ಯಶಸ್ಸಿನ ಹಾದಿಯಲ್ಲಿ ಹಾರಾಟ ನಡೆಸುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಹಾಲಿ ಇರುವ ಏರ್ ಇಂಡಿಯಾ ಬೋರ್ಡನ್ನು ವಿಸರ್ಜಿಸಲಾಗುತ್ತಿದ್ದು, ಟಾಟಾ ಕಂಪನಿಯ ಹೊಸ ಬೋರ್ಡ್ ರಚಿಸುವ ಸಾಧ್ಯತೆ ಇದೆ. ಈ ಬಗ್ಗೆ ಇದಾಗಲೇ ವಾಯುಯಾನ ಕ್ಷೇತ್ರದ ಅಂತಾರಾಷ್ಟ್ರೀಯ ತಜ್ಞರನ್ನು ಸಂಪರ್ಕಿಸಿರುವುದಾಗಿ ತಿಳಿದುಬಂದಿದೆ.
ಈಗಾಗಲೇ ಟಾಟಾ ಕಂಪನಿಯು ವಿಸ್ತಾರಾ ಏರ್‌ಲೈನ್ಸ್‌ಹಾಗೂ ಏರ್ ಏಷ್ಯಾ ಏರ್‌ಲೈನ್ಸ್‌ಗಳ ಮಾಲೀಕತ್ವದ ಪಾಲನ್ನು ಹೊಂದಿದೆ. ಏರ್ ಇಂಡಿಯಾ ಕೂಡ ಅದರ ತೆಕ್ಕೆಗೆ ಹೋಗಲಿರುವ ಹಿನ್ನೆಲೆಯಲ್ಲಿ ಇಂದಿನಿಂದ ಟಾಟಾ ಕಂಪನಿಯ ತೆಕ್ಕೆಯಲ್ಲಿ ಮೂರು ಏರ್‌ಲೈನ್ಸ್‌ಗಳು ಇರಲಿವೆ.
AI864 (ಮುಂಬೈ-ದೆಹಲಿ), AI687 (ಮುಂಬೈ-ದೆಹಲಿ), AI945 (ಮುಂಬೈ-ಅಬುಧಾಬಿ) ಮತ್ತು AI639 (ಮುಂಬೈ-ಬೆಂಗಳೂರು) ಈ ವಿಮಾನಗಳಲ್ಲಿ ಹೆಚ್ಚಿನ ಊಟದ ಸೇವೆಯನ್ನು ಒದಗಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹಿಂದೂ ಹೆಸರಿಟ್ಟುಕೊಂಡು ಭಾರತದ ಪೌರತ್ವ! ಬೆಂಗಳೂರಿನಲ್ಲಿ ತಣ್ಣಗೆ ನೆಲೆಸಿದ್ದ ಬಾಂಗ್ಲಾ ಯುವತಿ ಅರೆಸ್ಟ್‌

ಮೋದಿಯಿಂದ್ಲೇ ನನ್ನ ಫಾಲೋವರ್ಸ್‌ ಕುಸಿದಿದ್ದು- ರಾಹುಲ್‌ ಕೆಂಡಾಮಂಡಲ: ಟ್ವಿಟರ್‌ ಏನು ಹೇಳಿದೆ ನೋಡಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × 1 =
Remember me
