ಬ್ರಿಟನ್‌:ರೈಲುಗಳಲ್ಲಿ ಮಲ-ಮೂತ್ರ ಮಾಡಿದರೆ ಅದು ನೇರವಾಗಿ ಹಳಿಗಳ ಮೇಲೆ ಬೀಳುವುದು ರೈಲು ಪ್ರಯಾಣಿಕರಿಗೆ ಗೊತ್ತು. ಆದರೆ ವಿಮಾನದಲ್ಲಿ ಮಲ ಮೂತ್ರ ಮಾಡಿದರೆ ಅದೇನಾಗುತ್ತದೆ ಎನ್ನುವುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಆದರೆ ವಿಮಾನದಲ್ಲಿ ರೈಲಿನ ಹಾಗಲ್ಲ. ಅಲ್ಲಿ ಮಲ ಮೂತ್ರಗಳನ್ನು ಹಾಗೂ ಇತರ ತ್ಯಾಜ್ಯಗಳನ್ನು ದೊಡ್ಡ ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಇದನ್ನು ವಿಮಾನ ನಿಲ್ದಾಣಗಳಲ್ಲಿ ಎಲ್ಲರೂ ಇಳಿದ ಮೇಲೆ ವಿಲೇವಾರಿ ಮಾಡಲಾಗುತ್ತದೆ. ಟ್ಯಾಂಕ್‌ ಭರ್ತಿಯಾದರೆ ಕೆಲವೊಮ್ಮೆ ಇದನ್ನು ನಿರ್ಜನ ಪ್ರದೇಶಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ.
ಆದರೆ ಇಲ್ಲೊಂದು ಭಯಾನಕ ಪ್ರಕರಣದಲ್ಲಿ ಕೆಲವೊಂದು ಕಾರಣಕ್ಕೆ ವಿಮಾನದ ಸಿಬ್ಬಂದಿ ನಿರ್ಜನ ಎನಿಸಿರುವ ತೋಟದ ನಡುವೆ ಆ ಟ್ಯಾಂಕ್‌ನಲ್ಲಿ ಇರುವ ಮಲಮೂತ್ರ ವಿಲೇವಾರಿ ಮಾಡಿದ್ದಾರೆ. ಆದರೆ ದುರದೃಷ್ಟವಶಾತ್‌ ಆ ಸಮಯದಲ್ಲಿ ತೋಟದಲ್ಲಿ ವಿಶ್ರಮಿಸುತ್ತಿದ್ದ ಬ್ರಿಟನ್‌ ಪ್ರಜೆಯೊಬ್ಬರು ಮಲ ಮೂತ್ರದಿಂದ ತೋಯ್ದು ತೊಪ್ಪೆಯಾಗಿ ಹೋದರು.
ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿಯೇ ಇಡೀ ಟ್ಯಾಂಕ್‌ನಲ್ಲಿದ್ದ ಮಲಮೂತ್ರ ಅವರ ಮೈಮೇಲೆ ಬಿದ್ದಿದೆ. ವಿಂಡ್ಸರ್ ಕ್ಯಾಸಲ್ ಬಳಿ ಇರುವ ತಮ್ಮ ತೋಟದಲ್ಲಿ ಬಿಡುವಿನ ಸಮಯ ಕಳೆಯಲು ಬಂದಿದ್ದ. ಈ ಸಮಯದಲ್ಲಿ ಅನಾಹುತ ಸಂಭವಿಸಿದೆ.
ಕೂಡಲೇ ಓಡಿಹೋಗಿ ಶುಚಿಗೊಳಿಸಿಕೊಂಡಿರುವ ವ್ಯಕ್ತಿ ನಂತರ ಈ ಬಗ್ಗೆ ಸ್ಥಳೀಯ ಕೌನ್ಸಿಲರ್ ಕಾರೇನ್‌ ಡೇವಿಸ್ ಅವರ ಬಳಿ ವಿಷಯ ತಿಳಿಸಿದ್ದಾರೆ. ಅವರು ಈ ಕುರಿತು ರಾಯಲ್ ಬ್ಯೂರೋ ಆಫ್ ವಿಂಡ್ಸರ್ ಮತ್ತು ಮೇಡನ್ ಹೆಡ್‌ನ ವಾಯುಯಾನ ವೇದಿಕೆಯ ಗಮನಕ್ಕೆ ತಂದಿದ್ದು, ಈ ಬಗ್ಗೆ ದೂರು ದಾಖಲು ಮಾಡಿದ್ದಾರೆ.
ನಂತರ ಈ ಅನಾಹುತ ಮಾಡಿರುವ ವಿಮಾನಯಾನದ ವಿರುದ್ಧ ದೂರು ದಾಖಲು ಮಾಡಲಾಗಿದೆ. ಆದರೆ ಇಂಥದ್ದೊಂದು ಅಚಾತುರ್ಯ ನಡೆಸಿರುವುದು ಯಾವ ಸಂಸ್ಥೆ ಎಂಬ ಹೆಸರನ್ನು ಮಾತ್ರ ಗೋಪ್ಯವಾಗಿ ಇಡಲಾಗಿದೆ. ಮೊದಲಿಗೆ ತನ್ನ ತಪ್ಪೇ ಇಲ್ಲ ಎಂದು ವಾದಿಸಿದ್ದ ವಿಮಾನಯಾನ ಸಂಸ್ಥೆ, ನಂತರ ತಪ್ಪನ್ನು ಒಪ್ಪಿಕೊಂಡಿದ್ದು, ವ್ಯಕ್ತಿಯ ಬಳಿ ಕ್ಷಮೆ ಕೋರಿದೆ. ಈ ರೀತಿ ವಿಮಾನಗಳಿಂದ ಆಗುವುದು ಬಲು ಅಪರೂಪ. ತ್ಯಾಜ್ಯ ವಿಲೇವಾರಿ ಸಂದರ್ಭದಲ್ಲಿ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದು ನಡೆದಿರುವುದು ದುರದೃಷ್ಟಕರ ಎಂದಿದೆ.
ಆದರೆ ಇದೇ ವೇಳೆ ಪರಿಹಾರ ನೀಡುವಂತೆ ಈ ವ್ಯಕ್ತಿ ಸಂಸ್ಥೆ ವಿರುದ್ಧ ಕೇಸ್‌ ಹಾಕಿದ್ದಾರೆ.
ಉದ್ಯೋಗ ಕೊಡಿಸುವ ನೆಪದಲ್ಲಿ ಅತ್ಯಾಚಾರ ಆರೋಪ: ಸ್ಯಾಂಡಲ್‌ವುಡ್‌ ನಟ ಶೇಷಗಿರಿ ಅರೆಸ್ಟ್‌

ಕಳ್ಳತನ ಮಾಡಲು ಬೆತ್ತಲಾಗಿ ಹೋಗ್ತಿದ್ದ, ಹೊರಗೆ ಹೆಂಡ್ತಿ ಕಾಯ್ತಿದ್ಲು! ಬಾಗಲಕೋಟೆ ಖತರ್ನಾಕ್‌ ದಂಪತಿ ಅರೆಸ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
