ಕೋಲ್ಕತಾ:ತಮಾಷೆಗಾಗಿ ಸಹೋದ್ಯೋಗಿಗಳ ಮಾಡಿದ ಕೆಲಸದಿಂದಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕೋಲ್ಕತಾದ ಹೂಗ್ಲಿಯಲ್ಲಿ ನಡೆದಿದೆ.
ಬ್ರೂಕ್ ಜ್ಯೂಟ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದವರು, ರೆಹಮತ್ ಅಲಿ ಎನ್ನುವವರ ಗುದದ್ವಾರಕ್ಕೆ ಏರ್‌ಪಂಪ್‌ ಇಟ್ಟು ಪಂಪ್‌ ಮಾಡಿದ್ದಾರೆ. ಅಲಿ ಎಷ್ಟೇ ವಿರೋಧಿಸಿದರೂ ಸಹೋದ್ಯೋಗಿಗಗಳು ತಮಾಷೆಗಾಗಿ ಹೀಗೆ ಮಾಡಿದ್ದು, ಇದೇ ಅಲಿ ಅವರ ಪ್ರಾಣಕ್ಕೆ ಮುಳುವಾಗಿದೆ.
ರೆಹಮತ್ ಅಲಿ ಅವರು ನೈಟ್ ಶಿಫ್ಟ್‌ನಲ್ಲಿದ್ದರು. ಗಿರಣಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಇತರ ಸಹದ್ಯೋಗಿಗಳು ಏರ್‌ಪಂಪ್‌ ತಂದು ಪಂಪ್‌ ಮಾಡಿದ್ದಾರೆ. ಇಷ್ಟಾಗುತ್ತಿದ್ದಂತೆಯೇ ಅಲಿ ಅವರು ಕುಸಿದು ಬಿದ್ದಿದ್ದಾರೆ. ಗಾಬರಿಗೊಂಡ ಸಹದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಲಿಲ್ಲ. ಅವರು ಮೃತಪಟ್ಟಿದ್ದಾರೆ.
ಗುದದ್ವಾರದಿಂದ ಒತ್ತಡವಾಗಿ ಹಾಕಿರುವ ಗಾಳಿಯಿಂದ ಅಲಿ ಅವರ ಯಕೃತ್ತು ಸೇರಿದಂತೆ ಇತರ ಅಂಗಾಗಳು ಹಾನಿಯಾಗಿರುವ ಕಾರಣ, ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಸಹೊದ್ಯೋಗಿಗಳ ಮೇಲೆ ಕೇಸ್‌ ದಾಖಲಾಗಿದೆ. ಪ್ರಮುಖ ಆರೋಪಿ ಶೆಹಜಾದಾ ಖಾನ್ ಪರಾರಿಯಾಗಿದ್ದಾನೆ. ಈ ಬಗ್ಗೆ ಮಿಲ್‌ ಮಾಲೀಕರು ಮೌನವಾಗಿರುವುದು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ.
ಡ್ಯೂಟಿ ನೆಪದಲ್ಲಿ ವಿವಾಹಿತೆ ಜತೆ ಸಬ್​​​ಇನ್ಸ್​​ಪೆಕ್ಟರ್ ಲವ್ವಿಡವ್ವಿ… ಊರಿಗೆ ಹೋಗ್ತೇನೆಂದು ಬಲೆಬೀಸಿದ ಗಂಡ!

ವಧು-ವರರಿಗಾಗಿ ಬೆಳ್ಳಿ ಶೂಷ್‌, ಬೆಲ್ಟ್​, ಪರ್ಸ್: ಖರೀದಿ ಮಾಡಲು ಯುವಕ-ಯುವತಿಯರ ನೂಕು ನುಗ್ಗಲು!

ವರದಕ್ಷಿಣೆಗೆ ಕೂಡಿದ್ದ 75 ಲಕ್ಷ ರೂ. ಬಡ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಕೊಟ್ಟ ವಧು: ಎಲ್ಲೆಡೆ ಶ್ಲಾಘನೆಗಳ ಮಹಾಪೂರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
