ನವದೆಹಲಿ:ದೇಶದ ಅತ್ಯಂತ ದೊಡ್ಡ ಟೆಲಿಕಾಂ ನೆಟ್​ವರ್ಕ್ ಎನಿಸಿಕೊಂಡಿರುವ ಏರ್​ಟೆಲ್​ ತನ್ನ ಗ್ರಾಹಕರಿಗೆ ದೊಡ್ಡದೊಂದು ಶಾಕ್​ ನೀಡಿದೆ. ತನ್ನ ಆರಂಭಿಕ ಹಂತದ ಪ್ರೀಪೇಯ್ಡ್ ಯೋಜನೆಯ ದರವನ್ನು ಹೆಚ್ಚಳ ಮಾಡಿದೆ.
ಈಗಾಗಲೇ ಕೆಲ ರಾಜ್ಯಗಳಲ್ಲಿ ರಿಚಾರ್ಜ್ ಶುಲ್ಕ ದರಗಳಲ್ಲಿ ಪರಿಷ್ಕರಣೆ ಮಾಡಿರುವ ಏರ್​ಟೆಲ್​ ಇದೀಗ ದೇಶಾದ್ಯಂತ ಈ ದರ ಹೆಚ್ಚಳವನ್ನು ಅನ್ವಯ ಮಾಡಿದೆ. ಟೆಲಿಕಾಂ ನೆಟ್ ವರ್ಕ್ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಆಗುತ್ತಿರುವ ಸಂದರ್ಭದಲ್ಲಿಯೇ ಏರ್​ಟೆಲ್​ ಈ ನಿರ್ಧಾರ ತೆಗೆದುಕೊಂಡಿದೆ. ತನ್ನ ಆರಂಭಿಕ ಹಂತದ ಪ್ರೀಪೇಯ್ಡ್ ಯೋಜನೆಯ ದರವನ್ನು ಶೇಕಡಾ 60 ರಷ್ಟು ಏರಿಕೆ ಮಾಡಿದೆ.
ಶೇಕಡಾ 60ರಷ್ಟು ಹೆಚ್ಚಳ ಮಾಡಿರುವುದರಿಂದ 49 ರೂಪಾಯಿಗೆ ಇದ್ದ ರೀಚಾರ್ಜ್ ಬೆಲೆ ಈಗ 79 ರೂಪಾಯಿ ಆಗಿದೆ.
ಈ ಮೊದಲು 49 ರೂಪಾಯಿಯ ಪ್ಲಾನ್​ನಲ್ಲಿ 100 ಎಂಬಿ ಡೇಟಾ ಮತ್ತು 38.52 ರೂಪಾಯಿ ಮೌಲ್ಯದ ಟಾಕ್ ಟೈಮ್ ದೊರೆಯುತ್ತಿತ್ತು. 100 ಎಂಬಿ ಡೇಟಾ ಮಗಿದ ಮೇಲೆ ಪ್ರತಿ ಒಂದು ಎಂಬಿ ಡೇಟಾಗೆ 0.50ರಷ್ಟು ಶುಲ್ಕ ಬೀಳುತ್ತಿತ್ತು. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತಿತ್ತು. ಆದರೆ 79 ರೂಪಾಯಿ 28 ದಿನಗಳ ಸಿಂಧುತ್ವ ಇರಲಿದ್ದು, 64ರ ಟಾಕ್‌ ಟೈಮ್‌ ಮತ್ತು 200 ಎಂಬಿ ಡೇಟಾ ದೊರೆಯಲಿದೆ ಎಂದು ಕಂಪೆನಿ ಹೇಳಿದೆ. ಬೇರೆ ಕಂಪೆನಿಗಳ ಸಿಮ್​ ಉಪಯೋಗಿಸುತ್ತಿರುವ ಹಲವು ಗ್ರಾಹಕರು ಈ ಆರಂಭಿಕ ಪ್ಲ್ಯಾನ್ ಆಗಿರುವ ರೂ.49 ಮಾತ್ರ ರೀಚಾರ್ಜ್​ ಮಾಡುತ್ತಿದ್ದು, ಅವರಿಗೆ ಈ ಹೊಸ ಶುಲ್ಕ ಭಾರಿ ಹೊಡೆತ ಬೀಳಲಿದೆ.
ರಿಚಾರ್ಜ್ ಶುಲ್ಕದಲ್ಲಿ ಕಡಿತ ಅಲ್ಲದೇ, ಸೇವಾವಧಿಯಲ್ಲಿ ಇಳಿಕೆ ಕೂಡ ಮಾಡಲು ಚಿಂತನೆ ನಡೆಸಿದ್ದು ಇದು ಮುಂದಿನ ತಿಂಗಳಿನಿಂದ ಜಾರಿ ಬರುವ ನಿರೀಕ್ಷೆ ಇದೆ.
ಆಗಸ್ಟ್‌ನಲ್ಲಿ ಬ್ಯಾಂಕ್‌ನಲ್ಲಿ ಕೆಲಸವಿದೆಯೆ? ರಜೆಯ ಬಗ್ಗೆ ತಿಳಿದುಕೊಳ್ಳಿ…

ದೇವರ ಮನೆಯಲ್ಲಿ ಹೀರೋಯಿನ್​: ದಿನವೂ ಈಕೆಗೆ ಪೂಜೆ, ಪುನಸ್ಕಾರ- ನಟಿಯೂ ಫುಲ್​ ಖುಷ್​!

ಇಂದು ಸಿಬಿಎಸ್​ಇ 12ನೇ ತರಗತಿ ಫಲಿತಾಂಶ: ಇದರ ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 7 =
Remember me
