ಮುಂಬೈ:ಇಂಟರ್​ನೆಟ್​ನಲ್ಲಿ ಸಿಗದ ವಿಷಯವೇ ಇಲ್ಲ ಎನ್ನಬಹುದೇನೊ. ಇದೀಗ ಕುತೂಹಲ ಎನಿಸುವ ವಿಷಯವೊಂದು ಇದರಲ್ಲಿ ಲಭ್ಯವಾಗಿದ್ದು, ಅದು ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರ ಮೊದಲ ಸಂಬಳದ ಅಗ್ರೀಮೆಂಟ್​ ಪೇಪರ್​ ವೈರಲ್​ ಆಗಿದೆ.
ಸದ್ಯ ಒಂದು ಚಿತ್ರಕ್ಕೆ 5 ರಿಂದ 6 ಕೋಟಿ ರೂಪಾಯಿ ಪಡೆದುಕೊಳ್ಳುತ್ತಿರುವ ಐಶ್ವರ್ಯ 1992ರಲ್ಲಿ ಐಶ್ವರ್ಯ ರೈ ಮಾಡೆಲಿಂಗ್​ ಮಾಡುತ್ತಿದ್ದ ವೇಳೆ ಮಾಡಿಕೊಂಡಿರುವ ಮೊದಲ ಕಾಂಟ್ರಾಕ್ಟ್​ ಇದು ಎನ್ನಲಾಗಿದೆ.

1994ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಐಶ್ವರ್ಯ ರೈ ಪಾಲ್ಗೊಳ್ಳುವ ಎರಡು ವರ್ಷ ಮೊದಲು ಮಾಡೆಲಿಂಗ್​ನಲ್ಲಿ ನಟಿಸಿದ್ದ ವೇಳೆ ಅವರು ಪಡೆದುಕೊಂಡಿರುವ ಸಂಬಳ ಇದಾಗಿದೆ. ಇದರಲ್ಲಿ ಒಂದು ಮಾಡೆಲಿಂಗ್​ ಸೆಷನ್​ಗೆ ಅವರು ಪಡೆದುಕೊಂಡದ್ದು 1500 ರೂಪಾಯಿಗಳು.
ಜಾಲತಾಣದಲ್ಲಿ ಇದು ಭಾರಿ ವೈರಲ್​ ಆಗಿದ್ದು, ಥಹರೇವಾರಿ ಕಮೆಂಟ್​ಗಳು ಬಂದಿವೆ. 1992ರಲ್ಲಿ ಈ ಮೊತ್ತ ಅಧಿಕವೇ ಎಂದು ಕೆಲವರು ಹೇಳಿದ್ದರೆ, ಆಗ ನಾನು ಇದಕ್ಕಿಂತ ಹೆಚ್ಚಿಗೆ ದುಡಿಯುತ್ತಿದ್ದೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಅದೇನೇ ಇದ್ದರೂ ಸದ್ಯ ಮಾತ್ರ ಐಶ್ವರ್ಯ ರೈ ಅವರ ಆಸ್ತಿಯ ಮೊತ್ತ ಸುಮಾರು 100 ಮಿಲಿಯನ್​ ಡಾಲರ್​. ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 776 ಕೋಟಿ ರೂಪಾಯಿಗಳು! ಇತ್ತೀಚೆಗೆ ಅವರು ಸುಮಾರು 21 ಕೋಟಿ ರೂಪಾಯಿಗಳ ಬಂಗಲೆ ಕೂಡ ಖರೀದಿಸಿದ್ದಾರೆ.
ಅವನು ನನ್ನವ, ಮದ್ವೆಯಾಗ್ದೇ ಇಲ್ಲಿಂದ ಕದಲಲ್ಲ: ಖ್ಯಾತ ನಟನ ಮನೆ ಮುಂದೆ ಮಧ್ಯರಾತ್ರಿ ನಟಿಯ ಧರಣಿ!

ನಿಮ್​ ಕಥೆ ಮುಗೀತು, ಇಲ್ಲಿ ಕಾಲಿಟ್ಟರೆ ಮರ್ಡರ್ ಆಗ್ತೀರಿ: ನಟಿ, ಸಂಸದೆಗೆ ಜೀವ ಬೆದರಿಕೆ ಕರೆ- ದೂರು ದಾಖಲು

ಪ್ರಧಾನಿ ಮೋದಿಗೆ ಪತ್ರ ಬರೆದ ‘ಜೊತೆ ಜೊತೆಯಲಿ…’ ಧಾರಾವಾಹಿ ನಟ ಅನಿರುದ್ಧ್​ ಹೇಳಿದ್ದೇನು?

ಪ್ರಿಯಕರನ ಲೈಂಗಿಕ ಆಸೆ ಈಡೇರಿಸಲು ಮಗಳನ್ನೇ ಆತನ ಬಳಿ ಬಿಟ್ಟ ಪಾಪಿ ತಾಯಿ!

Sign in to your account
Please enter an answer in digits:nine + 3 =
Remember me
