ಮುಂಬೈ:ಹಣವಿದ್ದ ಮಾತ್ರಕ್ಕೆ ಎಲ್ಲರೂ ದಾನಿಗಳಾಗಲು ಸಾಧ್ಯವೇ ಇಲ್ಲ. ಹಣ ಬಂದಷ್ಟೂ ಬರಲಿ ಎಂದು ಸಿಕ್ಕದ್ದನ್ನೆಲ್ಲಾ ಬಾಚಿಕೊಳ್ಳುವ ಈ ಕಾಲದಲ್ಲಿ, ಜಗತ್ತಿನ ಶ್ರೀಮಂತರೊಬ್ಬರು ಮಾಡುತ್ತಿರುವ ದಾನದ ಬಗ್ಗೆ ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.
ಇವರೇ ಆಧುನಿಕ ದಾನಶೂರ ಕರ್ಣ ಎಂದು ಕರೆಸಿಕೊಂಡಿರುವ ಐಟಿ ದೈತ್ಯ ವಿಪ್ರೋದ ಅಜೀಮ್ ಪ್ರೇಮ್‌ಜಿ. ಇವರು ಮಾಡಿರುವ ದಾನ ಎಷ್ಟು ಗೊತ್ತಾ? ವರ್ಷದಲ್ಲಿ 7,9.04 ಕೋಟಿ ರೂಪಾಯಿಗಳು. ಇದನ್ನು ಪ್ರತಿದಿನದ ಸರಾಸರಿ ಲೆಕ್ಕದಲ್ಲಿ ಹೇಳುವುದಾದರೆ ಪ್ರತಿದಿನ 22 ಕೋಟಿ ರೂಪಾಯಿಗಳು!
ಈ ಮೂಲಕ 2020ನೇ ಹಣಕಾಸಿನ ವರ್ಷದಲ್ಲಿ ಅತ್ಯಂತ ಅಧಿಕ ದಾನಮಾಡಿರುವ ಪಟ್ಟಿಯಲ್ಲಿ ಅಜೀಂ ಅವರು ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ:ಲಡಾಖ್​ ಜಟಾಪಟಿ: ಶೇ.30ರಷ್ಟು ಸೇನೆ ವಾಪಸ್​ ಪಡೆಯಲು ಚೀನಾ ಒಪ್ಪಿಗೆ
ಕಳೆದ ವರ್ಷ ಎಚ್‌ಸಿಎಲ್ ಕಂಪನಿಯ ಶಿವ ನಾದರ್ 826 ಕೋಟಿ ರೂಪಾಯಿ ದಾನ ಮಾಡುವ ಮೂಲಕ ಅತಿದೊಡ್ಡ ದಾನಿಯಾಗಿದ್ದರು. ಈ ವರ್ಷ ಇವರು 795 ಕೋಟಿ ರೂಪಾಯಿ ದಾನ ನೀಡುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಕಳೆದ ವರ್ಷ 426 ಕೋಟಿ ರೂ,. ನೀಡಿದ್ದ ಅಜೀಂ ಪ್ರೇಮ್‌ಜಿ ಈ ವರ್ಷ 7904 ಕೋಟಿ ರೂಪಾಯಿ ನೀಡಿದ್ದು ನಂ.1 ದಾನಿಯಾಗಿದ್ದಾರೆ.
ಹುರುನ್ ರಿಪೋರ್ಟ್ ಇಂಡಿಯಾ ಮತ್ತು ಎಡೆಲ್‌ಗೈವ್ ಫೌಂಡೇಷನ್ ನಡೆಸಿದ್ದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಎಚ್‌ಸಿಎಲ್ ಟೆಕ್ನಾಲಜೀಸ್‌ನ ಶಿವ ನಾಡರ್ ಪ್ರೇಮ್‌ಜಿ ನಂತರದ ಸ್ಥಾನದಲ್ಲಿ ಇದ್ದಾರೆ. ನಾಡಾರ್ ದೇಣಿಗೆ ಈ ವರ್ಷದಲ್ಲಿ 795 ಕೋಟಿ ರೂ.ಗಳಷ್ಟಿದೆ. ಹಿಂದಿನ ವರ್ಷದ ಅವಧಿಯಲ್ಲಿ ಇವರು 826 ಕೋಟಿ ರೂ. ನೀಡಿದ್ದರು.
ರಿಲಯನ್ಸ್ ಇಂಡಸ್ಟ್ರೀಸ್​​ನ ಮಾಲೀಕ ಮುಖೇಶ್ ಅಂಬಾನಿ 458 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಇವರು 402 ಕೋಟಿ ರೂ. ನೀಡಿದ್ದರು.
ಕರೊನಾ ವಿರುದ್ಧ ಹೋರಾಟಕ್ಕಾಗಿ ನೀಡಿರುವ ದಾನದ ಕುರಿತು ಮಾತನಾಡುವುದಾದರೆ, ಟಾಟಾ ಸನ್ಸ್​ 1,500- ಕೋಟಿ ರೂ. ನೀಡಿದ್ದು, ಪ್ರೇಮ್​ಜಿ ಅವರು 1,125 ಕೋಟಿ ರೂಪಾಯಿ ಮತ್ತು ಅಂಬಾನಿಯ 510 ಕೋಟಿ ರೂ. ಮೊತ್ತವನ್ನು ಪಿಎಂ-ಕೇರ್ಸ್ ನಿಧಿಗೆ ದೇಣಿಗೆ ಕೊಟ್ಟಿದ್ದಾರೆ. ಆದಿತ್ಯ ಬಿರ್ಲಾ ಗ್ರೂಪ್ 400 ಕೋಟಿ ರೂ. ನೀಡಿದೆ.
ನಾವು ಅವರ ನ್ಯೂಸ್​ ಚಾನೆಲ್​ ನೋಡುವುದಿಲ್ಲ… ಆದರೆ… ಸರ್ಕಾರಕ್ಕೆ ಸುಪ್ರೀಂ ಛೀಮಾರಿ

50 ವರ್ಷ ಇವರೇ ಪ್ರಧಾನಿ! ಸುದೀರ್ಘ ಆಳ್ವಿಕೆಯ ದಾಖಲೆ ನಿರ್ಮಿಸಿದ್ದ ಖಲೀಫಾ ನಿಧನ

ಇನ್ಮುಂದೆ ಬೇಕಾಬಿಟ್ಟಿ ನ್ಯೂಸ್​ ವೆಬ್​ಸೈಟ್ ತೆರೆಯುವಂತಿಲ್ಲ- ನೋಂದಣಿ ಕಡ್ಡಾಯ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:6 + six =
Remember me
