ಅಲಹಾಬಾದ್‌:ಇದು ಬಾಲಕ ಮತ್ತು ಅವನಿಗಿಂತ ವಯಸ್ಸಿನಲ್ಲಿ ಬಹುದೊಡ್ಡ ಮಹಿಳೆಯ ನಡುವಿನ ಪ್ರೇಮ ಕಥೆ. ಇಬ್ಬರೂ ಪ್ರೀತಿಸಿ ಪಾಲಕರ ವಿರೋಧದ ನಡುವೆ ಮದುವೆಯಾಗಿದ್ದಾರೆ. ಈ ಮದುವೆಯಿಂದ ಒಂದು ಮಗುವೂ ಹುಟ್ಟಿದೆ. ಆದರೀಗ ವಿವಾಹ ಹೈಕೋರ್ಟ್‌ ಮೆಟ್ಟಿಲೇರಿದ್ದು, ಅಪ್ರಾಪ್ತ ಗಂಡ ಪತ್ನಿಯ ಬಳಿ ಇರಿಸಲು ಕೋರ್ಟ್‌ ನಿರಾಕರಿಸಿದೆ.
ಇಂಥದ್ದೊಂದು ಘಟನೆ ನಡೆದಿರುವುದು ಅಲಹಾಬಾದ್‌ನಲ್ಲಿ. 16 ವರ್ಷದ ಬಾಲಕ ತನಗಿಂತ ಎರಡು ಪಟ್ಟು ಹೆಚ್ಚಿಗೆ ಮಹಿಳೆಯೊಬ್ಬಳ ಜತೆ ಮದುವೆಯಾಗಿದ್ದಾನೆ. ಈ ಮದುವೆಯನ್ನು ವಿರೋಧಿಸಿ, ಇದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಾಲಕನ ತಾಯಿ ಹೈಕೋರ್ಟ್‌ ಮೊರೆ ಹೋಗಿದ್ದರು. ತಮ್ಮ ಮಗ ಇನ್ನೂ ಅಪ್ರಾಪ್ತನಾಗಿರುವ ಕಾರಣ ಮದುವೆಯನ್ನು ಅನೂರ್ಜಿತಗೊಳಿಸಿ, ಆತನನ್ನು ತಮ್ಮ ಸುಪರ್ದಿಗೆ ನೀಡಬೇಕು ಎಂದು ಕೋರಿದ್ದರು.
ವಿಚಾರಣೆ ವೇಳೆ ಬಾಲಕ, ನಮ್ಮಿಬ್ಬರ ಪ್ರೇಮದ ಸಂಕೇತವಾಗಿ ಇದಾಗಲೇ ಮಗು ಹುಟ್ಟಿದೆ. ನಾನು ಪಾಲಕರ ಬಳಿ ಹೋಗಲಾರೆ. ಪತ್ನಿಯ ಬಳಿಯೇ ಇರುವೆ. ನಮ್ಮ ಈ ಮದುವೆಗೆ ಅಂಕಿತಹಾಕಿ ಎಂದು ಕೋರ್ಟ್‌ ಅನ್ನು ಕೋರಿಕೊಂಡಿದ್ದಾನೆ.
ಆದರೆ ನ್ಯಾಯಮೂರ್ತಿಗಳು ಬಾಲಕನ ವಾದವನ್ನು ಒಪ್ಪಲಿಲ್ಲ. ಪೋಕ್ಸೋ ಕಾಯ್ದೆ ಅಡಿ ಇದು ಅಪರಾಧವಾಗಿರುವ ಕಾರಣ ಮದುವೆಯನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ಕೋರ್ಟ್‌ ಹೇಳಿದ್ದು, ಅಪ್ರಾಪ್ತ ಪತಿಯನ್ನು ಪತ್ನಿಯ ಸುಪರ್ದಿಗೆ ನೀಡಲಾಗದು ಎಂದಿದೆ. ಹೀಗೆ ಮಾಡಿದರೆ ಪ್ರಾಯಕ್ಕೆ ಬಂದ ಮಹಿಳೆ ಹಾಗೂ ಅಪ್ರಾಪ್ತನ ಸಹಜೀವನಕ್ಕೆ ಒಪ್ಪಿಗೆ ನೀಡಿದಂತಾಗುತ್ತದೆ. ಇದು ಕಾನೂನುಬಾಹಿರ ಎಂದಿದೆ.ಆದರೆ ಬಾಲಕ ಪಾಲಕರ ಬಳಿ ಹೋಗಲು ಇಚ್ಛಿಸದ ಕಾರಣ ಆತನನ್ನು ಬಾಲಮಂದಿರದಲ್ಲಿ ಇರಿಸುವಂತೆ ನ್ಯಾಯಮೂರ್ತಿ ಜೆ.ಜೆ.ಮುನೀರ್‌ ಹೇಳಿದ್ದು, ಆತನಿಗೆ ಕಾನೂನುರೀತ್ಯಾ ಮದುವೆಯ ವಯಸ್ಸು ಆದ ಮೇಲೆ ಬೇಕಿದ್ದರೆ ಪತ್ನಿಯ ಜತೆ ವಾಸಿಸಲು ಅವಕಾಶ ನೀಡಲಾಗುವುದು ಎಂದಿದ್ದಾರೆ.
ನೋಡಬಾರದ್ದನ್ನು ಅಮ್ಮ ನೋಡಿದಳು- ಅದಕ್ಕಾಗಿ ವಿಚ್ಛೇದನ ಕೊಟ್ಟೆ: ಬಹು ವರ್ಷಗಳ ಸತ್ಯ ಬಿಚ್ಚಿಟ್ಟ ಶಿಲ್ಪಾ ಶೆಟ್ಟಿ ಪತಿ ಕುಂದ್ರಾ

ಮದ್ಯ ಖರೀದಿಗೆ ಮುನ್ನವೇ ಖುಷಿಯಲ್ಲಿ ಟೈಟ್‌! ಬಾಟ್ಲಿಗೆ ಪೂಜೆ ಮಾಡಿದ ಎಣ್ಣೆಭಕ್ತ- ಕುಳಿತಲ್ಲೇ ನಮಸ್ಕರಿಸಿದ್ರು ಪ್ರಿಯರು!

ಅವಳು ಗಂಡ- ಇವಳು ಹೆಂಡತಿ! ಏಳು ವರ್ಷ ‘ಸಂಸಾರ’ ಮಾಡಿ ಓಡಿಹೋಗಿ ಮದುವೆಯಾದ ಸ್ನೇಹಿತೆಯರು…

ಸಿಂಗಲ್‌ ಇದ್ದು ಎಲ್ಲರಿಗೂ ಲಭ್ಯಳಿದ್ದೇನೆ: ಮೂರನೇ ಮದುವೆ ಮುರಿದು ನಾಲ್ಕನೆಯದ್ದಕ್ಕೆ ಸಿದ್ಧಳಾದ ನಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 10 =
Remember me
