ಜಾರ್ಖಂಡ್‌:ಅನ್ಯಗ್ರಹ ಜೀವಿ ಏಲಿಯನ್‌ಗಳ ಇರುವಿಕೆಗೆ ಸಂಬಂಧಿಸಿದಂತೆ ಇದಾಗಲೇ ಸಾಕಷ್ಟು ಅಧ್ಯಯನಗಳು ನಡೆಯುತ್ತಿದ್ದು, ಇನ್ನೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಬಂದಿದ್ದಾರೆ. ಕೆಲವರು ಈ ಜೀವಿ ಇರುವುದು ನಿಜ ಎಂದಿದ್ದರೆ, ಅಂಥ ಜೀವಿಗಳೇ ಇಲ್ಲ ಎನ್ನುವುದು ಇನ್ನು ಕೆಲವರ ವಾದ.
ವಾದ-ಪ್ರತಿವಾದ ಏನೇ ಇದ್ದರೂ ಸದ್ಯ ಜಾರ್ಖಂಡ್‌ನಲ್ಲಿ ಕಂಡಿರುವ ಜೀವಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿರುವ ಜೀವಿಯೊಂದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದ್ದು, ಇದು ಏಲಿಯನ್‌ ಎಂದು ಹಲವರು ಹೇಳುತ್ತಿದ್ದಾರೆ. ವಾಹನ ಸವಾರರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಈ ಜೀವಿಯನ್ನು ಕಂಡ ಹೆದರಿ ಗಾಡಿ ನಿಲ್ಲಿಸಿರುವುದನ್ನು ಇದರಲ್ಲಿ ಕಾಣಬಹುದಾಗಿದೆ.
ಜಾರ್ಖಂಡ್‌ನ ಹಜಾರಿಬಾಗ್‌ನ ಚಡ್ವಾ ಅಣೆಕಟ್ಟು ಸೇತುವೆಯ ಮೇಲೆ ಈ ದೃಶ್ಯ ಕಂಡುಬಂದಿದೆ. ಇದು ನಿಜವಾಗಿಯೂ ವಿಚಿತ್ರ ಎಂದು ಜನರು ಭಯಭೀತರಾಗಿದ್ದರೆ, ಅದೇ ಇನ್ನೊಂದೆಡೆ ಇದು ಫೇಕ್‌ ಎಂದೂ ಕಮೆಂಟ್‌ ಮಾಡಿದ್ದಾರೆ. ಆದರೆ ಅಸಲಿಯತ್ತು ಏನೆಂದು ಇನ್ನಷ್ಟೇ ತಿಳಿಯಬೇಕಿದೆ. ನಿರ್ಮಾಪಕಿ ಏಕ್ತಾ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಶೇರ್‌ ಮಾಡಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದೂ ಅಲ್ಲದೇ ಇದು ಭಯಾನಕ ಎಂದು ಹೇಳಿದ್ದಾರೆ. ಅಲ್ಲಿಂದ 30 ಸೆಕೆಂಡ್‌ಗಳ ಈ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
ಇಲ್ಲಿದೆ ನೋಡಿ ವಿಡಿಯೋ:
This Video is from#hazaribagh#Jharkhandclaiming Creature shown in this Video is an#Alien& viral with speed, no one claiming it to be fake or false but much real😐😶Have they really arrived or just Rumours?#aliens#ViralVideopic.twitter.com/RpSZip6lEO
— Amogh Gupta (@crazyme_ag)May 30, 2021

ಗಿಟಾರ್‌ ವಾದ್ಯಕ್ಕೆ ತಕ್ಕಂತೆ ಹಾಡು ಹೇಳ್ತಿದೆ ಈ ಕ್ಯೂಟ್‌ ಗಿಳಿ: ವಿಡಿಯೋ ವೈರಲ್‌

ಸೋಂಕಿತರನ್ನು ಮತಾಂತರಕ್ಕೆ ಪ್ರಯತ್ನಿಸಿ ಎಂದ ಐಎಎಂ ಅಧ್ಯಕ್ಷ! ಈತನ ಜನ್ಮ ಜಾಲಾಡಿ ಕೋರ್ಟ್‌ನಲ್ಲಿ ಕೇಸ್‌ ದಾಖಲು

ದತ್ತಕಕ್ಕೆ ಪತಿಯ ಅನುಮತಿ ಬೇಕೇ ಬೇಕಾ? ಕಾನೂನು ಏನು ಹೇಳುತ್ತದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + five =
Remember me
