ಮುಂಬೈ:ಇದೀಗ ಫಿಟ್​ನೆಸ್​ ಚಾಲೆಂಜ್​ ಟ್ರೆಂಡ್​ ಪುನಃ ಶುರುವಾಗಿದೆ. ಇದು ನಟಿಯರ ಫಿಟ್​ನೆಸ್​ ಚಾಲೆಂಜ್​. ಇದಾಗಲೇ ಕತ್ರಿನಾ, ಮಲೈಕಾ ಅರೋರಾ ಸೇರಿದಂತೆ ಕೆಲವು ನಟಿಯರು ಫಿಟ್​ನೆಸ್​ ಚಾಲೆಂಜ್​ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.
ಈಗ ನಟಿ ಆಲಿಯಾ ಭಟ್ ಹಾಟ್​ ಎನಿಸುವ ಫಿಟ್​ನೆಸ್​ ಫೋಟೋ ಶೇರ್​ ಮಾಡಿದ್ದು, ಫಿಟ್​ನೆಸ್​ ಚಾಲೆಂಜ್​ ಸ್ವೀಕರಿಸಿದ್ದಾರೆ. 40 ದಿನಗಳ ಫಿಟ್​ನೆಸ್​ ಚಾಲೆಂಜ್‍ ಸ್ವೀಕರಿಸಿರುವ ಆಲಿಯಾ, ಇದೀಗ 20 ದಿನ ಪೂರೈಸಿದ್ದು, ಅದರ ಫೋಟೋ ಶೇರ್​ ಮಾಡಿದ್ದಾರೆ.
ಈ ಫೋಟೋ ನೋಡಿ ಕತ್ರೀನಾ, ಮೈಲಕಾ ಮುಂದಾದವರು ಬೆರಗಾಗಿದ್ದು, ಭೇಷ್​ ಭೇಷ್​ ಎಂದಿದ್ದಾರೆ. ಸದ್ಯ ಆಲಿಯಾಳ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಆಲಿಯಾ ಭಟ್ ಸ್ಪೋಟ್ಸ್ ಬ್ರಾ ಧರಿಸಿ ಅದಕ್ಕೆ ಮ್ಯಾಚ್ ಆಗುವ ಟೈಟ್ಸ್ ತೊಟ್ಟು ಸೈಡ್ ಲುಕ್‍ನಲ್ಲಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.
20 ಮುಗಿದಿದೆ, 20 ಇದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಈ ಫೋಟೋಗೆ ನಟಿ ಕತ್ರಿನಾ ಕೈಫ್, ಮಲೈಕಾ ಆರೋರಾ ಕಾಮೆಂಟ್ ಮಾಡಿದ್ದಾರೆ.ಸದ್ಯ ಆಲಿಯಾ ಭಟ್ ಬ್ರಹ್ಮಸ್ತ್ರ ಸಿನಿಮಾದಲ್ಲಿ ಬಿಜಿ ಆಗಿದ್ದಾರೆ. ಟಾಲಿವುಡ್ ನಟ ರಾಮ್ ಬಿಜಿ ಆಗಚರಣ್ ಹಾಗೂ ಜ್ಯೂನಿಯರ್ ಎನ್‍ಟಿಆರ್ ಅಭಿನಯಿಸುತ್ತಿರುವ ಆರ್‍ಆರ್‍ಆರ್ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಪ್ರಿಯಕರನೊಂದಿಗೆ ಹೋಗಿದ್ದಾಕೆಯನ್ನು ಬೆತ್ತಲೆಗೊಳಿಸಿದ ಗಂಡ: ಆತನನ್ನು ಹೊತ್ತು ತಿರುಗುವಂತೆ ಹೇಳಿದ ಗ್ರಾಮಸ್ಥರು!

ಆ ಚಿತ್ರ ಒಪ್ಪಿಕೊಂಡಾಗ ಜೀವನದಲ್ಲಿ ದೊಡ್ಡ ತಪ್ಪು ಮಾಡಿಬಿಟ್ಟೆ ಎಂದರು ಅಪ್ಪ… ಮನದಾಳ ಬಿಚ್ಚಿಟ್ಟ ಹೃತಿಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
