ಮುಂಬೈ:ಗಂಗೂಬಾಯಿ ಕಥಿಯಾವಾಡಿ ಭರ್ಜರಿ ಯಶಸ್ಸಿನ ನಂತರ ಬಾಲಿವುಡ್​ ನಟಿ ಆಲಿಯಾ ಭಟ್​ ಭಾರಿ ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ವೇಶ್ಯೆಯ ಪಾತ್ರದಲ್ಲಿ ಅದ್ಭುತ ಅಭಿನಯದ ನಂತರ ಆಲಿಯಾಗೆ ಹಲವಾರು ಅವಕಾಶಗಳು ಅರಸಿ ಬರುತ್ತಿವೆ.
ಬಾಲಿವುಡ್ ನಟಿ ಆಲಿಯಾ ಭಟ್​ ಅಭಿನಯಕ್ಕೆ ಮನಸೋತು ವಿದೇಶದ ಸಿನಿಮಾ ಪ್ರೇಕ್ಷಕರು ಕೂಡ ಗಂಗೂಬಾಯಿ ಚಿತ್ರ ನೋಡಿದ ನಂತರ ಚಿತ್ರಮಂದಿರದಲ್ಲೇ ಸರಿ ಸುಮಾರು ಎಂಟು ನಿಮಿಷಗಳ ಕಾಲ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಯಾಗಿದೆ. ಜರ್ಮನ್​ ದೇಶದ ಬೆರ್ಲಿನ್​ ನಗರದ ಚಿತ್ರಮಂದಿರದಲ್ಲಿ ಯಾವ ಸ್ಟಾರ್​ ನಟನಿಗೂ ಸಿಗದ ಮೆಚ್ಚುಗೆ ಆಲಿಯಾ ಭಟ್​ಗೆ ವ್ಯಕ್ತವಾಗಿದೆ.
ಚಿಕ್ಕವಯಸ್ಸಿನಲ್ಲಿಯೇ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದು ಬೀಗುತ್ತಿರುವ ಆಲಿಯಾ ಇದೀಗ ಹಾಲಿವುಡ್​ಗೆ ಹಾರುವ ತಯಾರಿ ನಡೆಸಿದ್ದಾರೆ. . ‘ವಂಡರ್​ ವುಮೆನ್​’ ಸಿನಿಮಾಗಳಲ್ಲಿ ನಟಿಸಿರುವ ಗಾಲ್​ ಗಡೋಟ್​ ಅವರೊಂದಿಗೆ ಆಲಿಯಾ ನಟಿಸಿಲಿದ್ದಾರೆ. ಓಟಿಟಿಯ ದೈತ್ಯ ಸಂಸ್ಥೆ ನೆಟ್​​ಫ್ಲಿಕ್ಸ್​​ ನಿರ್ಮಾಣ ಮಾಡುತ್ತಿದೆ.
ನೆಟ್‌ಫ್ಲಿಕ್ಸ್‌ನ ‘ಹಾರ್ಟ್ ಆಫ್ ಸ್ಟೋನ್‌’ ತಂಡ ಸೇರಲಿದ್ದಾರೆ. ಜೋಯಾ ಅಖ್ತರ್ ನಿರ್ದೇಶಿಸಿದ ಅವರ 2019 ರ ಚಲನಚಿತ್ರ ‘ಗಲ್ಲಿ ಬಾಯ್’ ಆ ವರ್ಷದ ಬರ್ಲಿನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತ್ತು.ಈ ಸಿನಿಮಾ ವಿಶ್ವದಾದ್ಯಂತ $25M (ಸುಮಾರು 193 ಸಾವಿರ ಕೋಟಿ ರೂ) ಗಳಿಸಿದೆ. ಈ ಚಲನಚಿತ್ರವು ಈಗ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿದೆ. ಇದೀಗ ಆಲಿಯಾ ಹಾಲಿವುಡ್​ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಅಂದಹಾಗೆ ‘ಗಂಗೂಬಾಯಿ ಕಥಿಯಾವಾಡಿ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್​ನಲ್ಲಿ ಭಾರಿ ಸದ್ದು ಮಾಡುತ್ತಿದೆ. ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂಪಾಯಿ ಬಾಚಿಕೊಂಡಿದೆ.
ವೇಶ್ಯೆ ಪಾತ್ರಕ್ಕೆ ಆಲಿಯಾ ಪಡೆದ ಸಂಭಾವನೆ ಕೇಳಿದ್ರೆ ಹುಬ್ಬೇರಿಸುತ್ತೀರಾ! ಅಜಯ್​ ದೇವಗನ್ನೂ ಹಿಂದೆ ಬಿದ್ದಿಲ್ಲ…

ನನ್ನ ಕೆನ್ನೆಗೆ ಹೊಡೆಯಲು ಆಲಿಯಾ 20 ಸಲ ಟ್ರೈ ಮಾಡಬೇಕಾಯ್ತು! ಅನುಭವ ಬಿಚ್ಚಿಟ್ಟ ನಟ ಶಂತನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
