ಮುಂಬೈ:ಬಿಡುಗಡೆಗೆ ಮುನ್ನವೇ ಭಾರೀ ಸದ್ದು ಮಾಡಿದ್ದ ಚಿತ್ರ ಆಲಿಯಾ ಭಟ್, ಶಂತನು ಮತ್ತು ಅಜಯ್ ದೇವಗನ್ ಅಭಿನಯದ ಗಂಗೂಬಾಯಿ ಕಾಥಿಯಾವಾಡಿ. ಮುಂಬೈನ ರೆಡ್​ಲೈಟ್​ ಏರಿಯಾ ಕಾಮಾಟಿಪುರದ ಬಗ್ಗೆ ಇರುವ ಈ ಚಿತ್ರದ ವಿರುದ್ಧ ಕಾಮಾಟಿಪುರದ ನಿವಾಸಿಗಳು ಸಿಡಿದೆದ್ದರೂ ಚಿತ್ರ ಬಿಡುಗಡೆಯಾಗಿದೆ ಭರ್ಜರಿ ಯಶಸ್ಸು ಗಳಿಸಿದೆ. ಕೇವಲ ಭಾರತದಲ್ಲಷ್ಟೇ ಅಲ್ಲದೇ ಈ ಸಿನಿಮಾ ವಿದೇಶದಲ್ಲೂ ಸಖತ್​ ಸೌಂಡ್​ ಮಾಡುತ್ತಿದೆ.
ಕಾಮಾಟಿಪುರದಲ್ಲಿ ತುಂಬಾ ಹಿಂದೆ ವೇಶ್ಯೆಯಾಗಿದ್ದ ಗಂಗೂಬಾಯಿ ಪಾತ್ರದಲ್ಲಿ ನಟಿಸಿರುವ ಆಲಿಯಾ ಭಟ್​ ನಟನೆಗೆ ಅಭಿಮಾನಿಗಳು ಮನಸೋತಿದ್ದಾರೆ. ಸತ್ಯ ಕತೆಗೆ ಕಾಲ್ಪನಿಕತೆ ಬೆರೆಸಿರುವ ಈ ಚಿತ್ರದಲ್ಲಿ ನಟ ಅಜಯ್​ ದೇವಗನ್​ ಮುಂಬೈನ ಮಾಫಿಯಾ ಡಾನ್ ರಹೀಮ್ ಲಾಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಂಗೂಬಾಯಿಯನ್ನು ವೇಶ್ಯಾವೃತ್ತಿಗೆ ಕರೆತರುವ ಪಾತ್ರ ಅವರದ್ದು.
ಅಂದಹಾಗೆ ಈ ಚಿತ್ರದಲ್ಲಿ ‘ಗಂಗೂಬಾಯಿ’ ಪಾತ್ರಕ್ಕೆ ಆಲಿಯಾ ಭಟ್‌ ತೆಗೆದುಕೊಂಡಿರುವ ಸಂಭಾವನೆ ಕೂಡ ಚಿತ್ರದಂತೆಯೇ ಈಗ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಏನೆಂದರೆ, ಆಲಿಯಾ ಈ ಚಿತ್ರಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. 100 ಕೋಟಿ ಬಜೆಟ್​ನಲ್ಲಿ ರೆಡಿಯಾದ ಈ ಸಿನಿಮಾದಲ್ಲಿ 20 ಕೋಟಿ ರೂಪಾಯಿ ಆಲಿಯಾ ಪಾಲಾಗಿದೆ.
ಹಾಗಿದ್ದರೆ ಅಜಯ್​​ ದೇವಗನ್​ ಎಷ್ಟು ಪಡೆದುಕೊಂಡಿರಬಹುದು? ಪಾತ್ರ ಚಿಕ್ಕದಾದರೂ ಅಜಯ್​ ದೇವಗನ್​ ಸಂಭಾವನೆ ಪಡೆದುಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲಿ. ಅವರು ತಮ್ಮ ಚಿತ್ರಕ್ಕೆ 12 ಕೋಟಿ ರೂಪಾಯಿ ಪಡೆದಿದ್ದಾರಂತೆ! ಇದಕ್ಕೆ ಹೋಲಿಸಿದರೆ ಆಲಿಯಾ ಭಟ್​ ಪಡೆದಿರುವ ಸಂಭಾವನೆ ಕಡಿಮೆ ಎಂದೇ ಅಭಿಮಾನಿಗಳು ಹೇಳುತ್ತಿದ್ದಾರೆ.
ಅಂದಹಾಗೆ ಇದು ಆಲಿಯಾ ಭಟ್​ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ಮೊದಲ ಚಿತ್ರವಾಗಿದೆ. ಒಂಬತ್ತನೇ ವಯಸ್ಸಿನಿಂದ ಬನ್ಸಾಲಿ ಜೊತೆ ಕೆಲಸ ಮಾಡಬೇಕೆಂಬ ಆಸೆ ಇತ್ತು ಎಂದು ಆಲಿಯಾ ಹೇಳಿಕೊಂಡಿದ್ದರು.
ಆಂಧ್ರದಲ್ಲಿ ಕ್ಷಾಮ ಬಂದಾಗ ಹುಟ್ಟಿಕೊಂಡದ್ದು ಮುಂಬೈನ ಕಾಮಾಟಿಪುರ! 200 ವರ್ಷಗಳ ಇತಿಹಾಸ ಇದಕ್ಕಿದೆ…

ನನ್ನ ಕೆನ್ನೆಗೆ ಹೊಡೆಯಲು ಆಲಿಯಾ 20 ಸಲ ಟ್ರೈ ಮಾಡಬೇಕಾಯ್ತು! ಅನುಭವ ಬಿಚ್ಚಿಟ್ಟ ನಟ ಶಂತನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − four =
Remember me
