ಮುಂಬೈ:ಬಾಲಿವುಡ್​ ನಟಿ ಆಲಿಯಾ ಭಟ್​ ಅವರಿಗೆ ಕರೊನಾ ಸೋಂಕು ತಗುಲಿದೆ. ಪರೀಕ್ಷೆ ಮಾಡಿಸಿಕೊಂಡಾಗ ತಮಗೆ ಕರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ ಎಂದು ನಟಿ ಖುದ್ದು ಹೇಳಿಕೊಂಡಿದ್ದಾರೆ.
ಈ ಕುರಿತು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಆಲಿಯಾ ಮಾಹಿತಿ ಹಂಚಿಕೊಂಡಿದ್ದಾರೆ. ಕರೊನಾ ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 11 ರಂದು ಆಲಿಯಾ ಭಟ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಆದರೆ ಅವರಿಗೆ ನೆಗೆಟಿವ್ ಕಂಡುಬಂದಿತ್ತು.
ಇದಾದ ಬೆನ್ನಲ್ಲೇ ಅವರ ಬಾಯ್ ಫ್ರೆಂಡ್ ರಣಬೀರ್ ಕಫೂರ್ ಮತ್ತು ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಈ ಸಮಯದಲ್ಲಿ ಇವರ ಜತೆ ಆಲಿಯಾ ಗಂಗೂಬಾಯಿ ಕಥೈವಾಡಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಪುನಃ ಪರೀಕ್ಷೆ ಮಾಡಿಸಿಕೊಂಡಾಗ ಕರೊನಾ ಪಾಸಿಟಿವ್​ ಬಂದಿದೆ.


A post shared by Alia Bhatt Pics🌸 (@aliaabhattpics)

ತಮಗೆ ಕೊರೊನಾ ಪಾಸಿಟಿವ್ ಬಂದಿದ್ದು, ವೈದ್ಯರ ಸಲಹೆ ಮೇರೆಗೆ ಹೋಮ್ ಐಸೋಲೇಷನ್ ನಲ್ಲಿದ್ದೇನೆ. ಕರೊನಾ ಕುರಿತು ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಎಂದು ಹೇಳಿದ್ದಾರೆ. ಈ ನಡುವೆ ರಣಬೀರ್​ ಕಪೂರ್​ ಹಾಗೂ ಸಂಜಯ್​ ಲೀಲಾ ಬನ್ಸಾಲಿ ಚೇತರಿಸಿಕೊಂಡಿರುವುದಾಗಿ ವರದಿಗಳು ಹೇಳಿವೆ.
ಸುಷ್ಮಾ, ಜೇಟ್ಲಿ ಸಾವಿಗೆ ಪ್ರಧಾನಿಯತ್ತ ಬೊಟ್ಟು ಮಾಡಿದ ಡಿಎಂಕೆ- ಬೆಳ್ಳಂಬೆಳಗ್ಗೆ ಐಟಿ ಇಲಾಖೆ ನೀಡಿತು ಬಿಗ್​ ಶಾಕ್​!

ಒಂದೆಡೆ ಪ್ರೀತಿಯ ಹುಡುಗ… ಇನ್ನೊಂದೆಡೆ ಆಣೆ ಮಾಡಿಸಿಕೊಂಡ ಅಣ್ಣ… ಗೊಂದಲದ ಮನಕೆ ದಾರಿ ತೋರಿ ಮೇಡಂ…

ಅವಳೂ ಯುವತಿ- ಇವಳೂ ಯುವತಿ… ಕೋರ್ಟ್​ಗೆ ಹೋಯ್ತು ಪ್ರೇಮಪ್ರಸಂಗ… ಗೊಂದಲದಲ್ಲಿ ನ್ಯಾಯಮೂರ್ತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
