ಮುಂಬೈ:ಕಳೆದ ಏಪ್ರಿಲ್​ 14ರಂದು ನಟಿ ಆಲಿಯಾ ಭಟ್​ ಹಾಗೂ ನಟ ರಣಬೀರ್​ ಕಪೂರ್​ ಅವರ ಮದುವೆಯಾಗಿದೆ. ಮದುವೆಯಾದ ಎರಡು ತಿಂಗಳಿನಲ್ಲಿಯೇ ತಾವು ಗರ್ಭಿಣಿಯಾಗಿರುವ ವಿಷಯವನ್ನು ಆಲಿಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇವರು ಈ ಸುದ್ದಿ ಹಂಚಿಕೊಳ್ಳುತ್ತಲೇ ಥಹರೇವಾರಿ ಕಮೆಂಟ್​ಗಳು ಬಂದಿದ್ದವು. ಅವರ ಅಭಿಮಾನಿಗಳೆಲ್ಲಾ ಇಷ್ಟು ಬೇಗ ತಾಯಿಯಾಗಲಿರುವ ಸುದ್ದಿ ಕೇಳಿ ಶಾಕ್​ ಆಗಿದ್ದರೆ, ಹಲವರು ನೆಗೆಟಿವ್​ ಕಮೆಂಟ್​ಗಳನ್ನೂ ಮಾಡಿದ್ದರು. ನೆಗೆಟಿವ್​ ಕಮೆಂಟ್​ಗಳ ಕುರಿತು ಆಲಿಯಾ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಒಂದೇ ಒಂದು ಕಮೆಂಟ್​ಗೆ ಅವರು ಬೇಸರಗೊಂಡಿದ್ದರು. ಅದೇನೆಂದರೆ, ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳ ಗತಿ ಏನು ಪ್ರಶ್ನಿಸಿದ್ದರು. ಮೊದಲೇ ಗರ್ಭಿಣಿಯಾಗುವ ಪ್ಲ್ಯಾನ್​ ಮಾಡಿಕೊಂಡಿದ್ದರೆ ಚಿತ್ರಗಳನ್ನು ಏಕೆ ಒಪ್ಪಿಕೊಳ್ಳಬೇಕಿತ್ತು ಎಂದೆಲ್ಲಾ ಕೇಳಿದ್ದರು.
ಇದು ಆಲಿಯಾ ಅವರನ್ನು ಕೆರಳಿಸಿತ್ತು. ಏಕೆಂದರೆ ಬೇಡಿಕೆಯ ಉತ್ತುಂಗದಲ್ಲಿ ಇರುವ ನಟಿ ಆಲಿಯಾ ಕೈಯಲ್ಲಿ ಕೆಲ ಚಿತ್ರಗಳು ಇವೆ. ಆದರೆ ಎಲ್ಲವನ್ನೂ ಅವರು ಪ್ಲ್ಯಾನ್​ ಮಾಡಿಕೊಂಡೇ ಮಾಡಿರುವುದು. ಈ ಕಮೆಂಟ್​ಗೆ ಉತ್ತರಿಸಿದ್ದ ನಟಿ, ನೀವೇನೂ ಚಿಂತಿಸಬೇಡಿ, ಯಾರಿಗೂ ಕೈಕೊಡಲ್ಲ. ಒಪ್ಪಿಕೊಂಡ ಚಿತ್ರಗಳನ್ನೆಲ್ಲವನ್ನೂ ಮುಗಿಸಿಯೇ ಡೆಲಿವರಿಗೆ ಹೋಗುವುದು ಎಂದಿದ್ದರು.
ಈ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ತಮ್ಮ ಕೈಯಲ್ಲಿ ಇರುವ ಎಲ್ಲಾ ಚಿತ್ರಗಳ ಚಿತ್ರೀಕರಣವನ್ನು ಪೂರ್ತಿಗೊಳಿಸಿದ್ದಾರೆ. ಸದ್ಯ ಅವರ ಕೈಯಲ್ಲಿ ಇದ್ದುದು, ಟಾಮ್ ಹಾರ್ಪೆರ್ ನಿರ್ದೇಶಿಸುತ್ತಿರುವ ಮೊದಲ ಹಾಲಿವುಡ್ ಸಿನಿಮಾ ಹಾರ್ಟ್ ಆಫ್ ಸ್ಟೋನ್. ಆಲಿಯಾ ಗರ್ಭಿಣಿ ಎನ್ನುವ ಸುದ್ದಿ ತಿಳಿಯುತ್ತಲೇ ಮೊದಲು ದಿಗಿಲುಗೊಂಡದ್ದು ಈ ಚಿತ್ರತಂಡ. ಆದರೆ ಕೊಟ್ಟ ಮಾತಿನಂತೆ ಆಲಿಯಾ ಶೂಟಿಂಗ್​ ಮುಗಿಸಿದ್ದಾರೆ. ಚಿತ್ರದ ಶೂಟಿಂಗ್​ನ ಕೆಲವು ಫೋಟೋಗಳು ವೈರಲ್​ ಆಗಿದ್ದು, ಅದರಲ್ಲಿ ಆಲಿಯಾ ಗರ್ಭಿಣಿಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ, ಮಾತ್ರವಲ್ಲದೇ ಈಕೆ ಸ್ವಲ್ಪ ಸುಸ್ತಾಗಿರುವಂತೆಯೂ ಕಂಡುಬರುತ್ತಿದೆ.
ಶೂಟಿಂಗ್​ ಮುಗಿಸಿದ ನಂತರ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆಲಿಯಾ, ಹಾರ್ಟ್ ಆಫ್ ಸ್ಟೋನ್’ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ವಂಡರ್‌ ವುಮನ್ ಖ್ಯಾತಿಯ ಗ್ಯಾಲ ಗ್ಯಾಡೋಟ್ ಹಾಗೂ ನಿರ್ದೇಶಕ ಟಾಮ್ ಹಾರ್ಪೆರ್ ಅವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ವಂಡರ್‌ ವುಮನ್ ಖ್ಯಾತಿಯ ಗ್ಯಾಲ ಗ್ಯಾಡೋಟ್ ಕೂಡ ಟ್ವೀಟ್​ ಮಾಡಿದ್ದು, “ನನ್ನ ಹುಡುಗಿ ಆಲಿಯಾ ಭಟ್‌ಗೆ ಸ್ಪಲ್ಪ ಪ್ರೀತಿ ಕೊಡಿ. ಇವತ್ತು ಹಾರ್ಟ್ ಆಫ್ ಸ್ಟೋನ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಎಂತಹ ಅದ್ಭುತ ನಟಿ. ಹಾಗೇ ಅತ್ಯುತ್ತಮ ವ್ಯಕ್ತಿ’ ಎಂದಿದ್ದಾರೆ. ಅವರು ಆಲಿಯಾ ಜತೆ ಸೆಲ್ಫಿ ತೆಗೆದುಕೊಂಡಿದ್ದಾರೆ.
ಅಂದಹಾಗೆ ಈ ಚಿತ್ರ ನೆಟ್‌ಫಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ಗ್ಯಾಲ ಗ್ಯಾಡೋಟ್ ಹಾಗೂ ಆಲಿಯಾ ಭಟ್ ಇಬ್ಬರೂ ಗೂಢಾಚಾರಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
VIDEO: ಫಸ್ಟ್​ ನೈಟ್​ ಅನ್ನೋದೇ ಇಲ್ಲ- ನಟಿ ಆಲಿಯಾ ಭಟ್​ ಹೇಳಿಕೆಗೆ ಸುಸ್ತಾದ ಪತಿ ರಣಬೀರ್​ ಕಪೂರ್​

ನಾನು ಜಯಲಲಿತಾರ ಅಪ್ಪನ ಮಗ, ನನಗೆ ಆಸ್ತಿ ಬರಬೇಕು: ಹೈಕೋರ್ಟ್​ಗೆ ಮೈಸೂರಿನ 83ರ ವೃದ್ಧನ ಅರ್ಜಿ

ಕಳ್ಳನೆಂದು ಭಾವಿಸಿ ಹೊಡೆದೇ ಬಿಟ್ಟ ಸೆಕ್ಯುರಿಟಿ! ಕರ್ತವ್ಯ ಪ್ರಜ್ಞೆ ಮೆರೆಯಲು ಹೋಗಿ ಬ್ಯಾಂಕ್​ ಉದ್ಯೋಗಿ ಮರ್ಡರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 16 =
Remember me
