ಮುಂಬೈ:ಕೆಲ ವರ್ಷಗಳ ಹಿಂದಷ್ಟೇ ಪೆದ್ದುಪೆದ್ದು ಹುಡುಗಿ ಎಂದು ಹಣೆಪಟ್ಟಿ ಕಟ್ಟಿಕೊಂಡು ಸಿಕ್ಕಾಪಟ್ಟೆ ಜೋಕ್​ಗಳಿಂದ್ಲೇ ಪ್ರಸಿದ್ಧಿಗೆ ಬಂದ ನಟಿ ಆಲಿಯಾ ಭಟ್​. ಒಂದರ ಮೇಲೊಂದರಂತೆ ಹಿಟ್​ ಸಿನಿಮಾಗಳನ್ನು ನೀಡುತ್ತಾ, ತನ್ನ ಸಂಭಾವನೆಯನ್ನು ಅಚ್ಚರಿ ಮಟ್ಟದಲ್ಲಿ ಏರಿಸಿಕೊಳ್ಳುತ್ತಾ ಸಾಗಿರೋ ನಟಿ ಈಕೆ. ಗರ್ಭಿಣಿಯಾಗಿದ್ದರೂ ಹಾಲಿವುಡ್​ ಸಿನಿಮಾ ಶೂಟಿಂಗ್​ ಮುಗಿಸಿ ಬಂದಿರೋ ಆಲಿಯಾ ಭಟ್​ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಯಲ್ಲಿದ್ದಾರೆ.
ಈಚೆಗಷ್ಟೇ ರಿಲೀಸ್​ ಆಗಿರೋ ‘ಡಾರ್ಲಿಂಗ್ಸ್’ ಸಿನಿಮಾದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಬೈಕಾಟ್​ (ಬಹಿಷ್ಕಾರ) ಅಭಿಯಾನವನ್ನು ಎದುರಿಸುತ್ತಿದ್ದಾರೆ ಆಲಿಯಾ. ಏಕೆಂದರೆ ಈ ಸಿನಿಮಾ ಕೌಟುಂಬಿಕ ಕಲಹವನ್ನು ಪ್ರಚೋದನೆ ಮಾಡುತ್ತಿದೆ ಎನ್ನುವ ಕಾರಣಕ್ಕೆ ಬೈಕಾಟ್​ ಅಭಿಯಾನ ಶುರುವಾಗಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ ಇದೇ ಸಾಮಾಜಿಕ ಜಾಲತಾಣದಿಂದಲೇ ಈಕೆ ಪಡೀತಿರೋ ಸಂಭಾವನೆ ಕೇಳಿದ್ರೆ ಶಾಕ್​ ಆಗೋದು ಗ್ಯಾರೆಂಟಿ.
ಸದ್ಯ ಈಕೆ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಒಂದು ಸಿನಿಮಾಗೆ ಆಲಿಯಾ ಭಟ್ 15 ಕೋಟಿ ರೂ.ಯಿಂದ 18 ಕೋಟಿ ರೂ. ಪಡೆಯುತ್ತಾರೆ. 2021ರ ವೇಳೆಗೆ ಇವರ ಆಸ್ತಿಯ ಮೌಲ್ಯ ಗಗನಕ್ಕೇರಿದೆ. ಕಳೆದ ವರ್ಷದವರೆಗೆ ಇವರ ಆಸ್ತಿ ಮೌಲ್ಯ 517 ಕೋಟಿ ರೂ. ಆಗಿದ್ದು, ಜಾಹೀರಾತುಗಳಿಂದಲೂ ಭರ್ಜರಿ ಆದಾಯ ಪಡೆಯುತ್ತಿದ್ದಾರೆ.
ಸಿನಿಮಾಗಳಲ್ಲಿ, ಜಾಹೀರಾತುಗಳಲ್ಲಿ ಇವರೂ ಕಷ್ಟಪಟ್ಟು ದುಡಿಯುತ್ತಾರೆ ಅನ್ನಿ. ಆದರೆ ಸುಮ್ಮನೇ ಕುಳಿತಲ್ಲಿಯೇ ಇನ್​ಸ್ಟಾಗ್ರಾಂ ಸೇರಿದಂತೆ ಇತರ ಜಾಲತಾಣಗಳಲ್ಲಿ ಒಂದು ಪೋಸ್ಟ್​ ಹಾಕಿದರೂ ಈಕೆಗೆ ಸಿಗುತ್ತದೆ ಸಂಭಾವನೆ! ಆಲಿಯಾ ಭಟ್​ಗೆ ಇನ್ಸ್​ಟಾಗ್ರಾಂನಲ್ಲಿ 68.5 ದಶಲಕ್ಷ ಫಾಲೋವರ್ಸ್ ಇದ್ದಾರೆ. ನಟಿ ಈವರೆಗೆ 1833 ಪೋಸ್ಟ್​ಗಳನ್ನು ಹಾಕಿದ್ದಾರೆ. ಪೋಸ್ಟ್​ಗಳನ್ನು ಎಲ್ಲರೂ ಹಾಕ್ತಾರೆ, ಅದರಲ್ಲೇನು ವಿಶೇಷ ಅಂದುಕೊಂಡ್ರಾ? ಸೆಲೆಬ್ರಿಟಿಗಳ ಒಂದೊಂದು ಪೋಸ್ಟ್​ಗಳು ಲಕ್ಷದಿಂದ ಕೋಟಿ ಬೆಲೆ ಬಾಳುತ್ತವೆ. ಅದೇ ರೀತಿ ಆಲಿಯಾ ಭಟ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್​ ಹಾಕಿದ್ರೆ ಅದಕ್ಕೆ 85 ಲಕ್ಷ ರೂಪಾಯಿಗಳಿಂದ 1 ಕೋಟಿಯವರೆಗೆ ಸಂಭಾವನೆ ಪಡೆಯುತ್ತಿದ್ದಾರೆ! ಈವರೆಗೆ ಈವರೆಗೆ 1833 ಪೋಸ್ಟ್​ಗಳನ್ನು ಹಾಕಿದ್ದಾರೆ ಎಂದ ಮೇಲೆ ಎಷ್ಟು ಕೋಟಿ ಈಕೆಗೆ ಸೇರಿರಬಹುದು ಲೆಕ್ಕಹಾಕಿಕೊಳ್ಳಿ.
ಅಂದಹಾಗೆ, ಆಲಿಯಾ ಭಟ್​ಗೆ ಇಷ್ಟೆಲ್ಲಾ ಫಾಲೋವರ್ಸ್​ ಇದ್ದರೂ ನಟಿ ಮಾತ್ರ ಫಾಲೋ ಮಾಡುವುದು 493 ಮಂದಿಯನ್ನು ಮಾತ್ರ!(ಏಜೆನ್ಸೀಸ್​)
ದೇಹದ ಇಂಚಿಂಚೂ ಬಿಡದೇ ಟ್ಯಾಟೂ ಹಾಕಿಸಿಕೊಂಡ ನಟಿ! ಖಾಸಗಿ ಅಂಗಗಳ ನೋವು ಬಿಚ್ಚಿಟ್ಟಿದ್ದು ಹೀಗೆ…

ಆತ ಮಧ್ಯರಾತ್ರಿ ಕರೆದಾಗ ಹೋದ್ರೆ ಸಿನಿಮಾದಲ್ಲಿ ಛಾನ್ಸ್​, ಇಲ್ಲದಿದ್ರೆ ಔಟ್​: ಕರಾಳ ಸತ್ಯ ಬಿಚ್ಚಿಟ್ಟ ನಟಿ ಮಲ್ಲಿಕಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − three =
Remember me
