ಬೆಂಗಳೂರು:ಈಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರು ಆರಂಭಿಸಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಕರ್ನಾಟಕದ ಒಂಬತ್ತು ಮಾಜಿ ಮುಖ್ಯಮಂತ್ರಿಗಳು ಕೈಜೋಡಿಸಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿಯೇ ಪರಿಸರದ ಕಾರಣಕ್ಕಾಗಿ ರಾಜಕೀಯ ಸೌಹಾರ್ದತೆ ಮೆರೆಯುವ ಇಂತಹ ಮೊದಲ ರೀತಿಯ ಸಮಾರಂಭದಲ್ಲಿ, ಮಾಜಿ ಮತ್ತು ಹಾಲಿ ಸಿಎಂಗಳು ಒಟ್ಟಾಗಿ ಬೆಂಬಲ ನೀಡಿದ್ದಾರೆ.ಸದ್ಗುರುಗಳು ಪ್ರಸ್ತುತ 100 ದಿನಗಳ, 30 ಸಾವಿರ ಕಿಮೀ ಏಕಾಂಗಿ ಮೋಟಾರ್‌ ಸೈಕಲ್‌ ಪ್ರಯಾಣದಲ್ಲಿ ಯುರೋಪ್, ಮಧ್ಯ ಏಷ್ಯಾ ಮತ್ತು ಮಧ್ಯ ಪ್ರಾಚ್ಯದಾದ್ಯಂತ 27 ದೇಶಗಳಲ್ಲಿ ಮಣ್ಣಿನ ಸಂರಕ್ಷಣೆಯನ್ನು ಕೇಂದ್ರೀಕರಿಸುವ ಜಾಗತಿಕ ನೀತಿಗಳಿಗೆ ಒಮ್ಮತವನ್ನು ನಿರ್ಮಿಸಲು ಪ್ರಯಾಣಿಸಿದ್ದಾರೆ. ಅವರ ಪ್ರಯಾಣವು ಮಾರ್ಚ್ 21 ರಂದು ಲಂಡನ್‌ನಿಂದ ಪ್ರಾರಂಭವಾಯಿತು. ಸದ್ಗುರುಗಳ ಯಾತ್ರೆಯು ಈ ವರ್ಷದ ಜೂನ್‌ನಲ್ಲಿ ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ಮುಕ್ತಾಯಗೊಳ್ಳಲಿದೆ.
ಅವರು ಆಂದೋಲನಕ್ಕೆ ಬೆಂಬಲವನ್ನು ಪಡೆಯಲು ಮಾಧ್ಯಮಗಳು ಸೇರಿದಂತೆ ರಾಜಕೀಯ, ವ್ಯಾಪಾರ, ಸಾಮಾಜಿಕ ಮತ್ತು ಸಾಂಸ್ಕೃತಿಕ ನಾಯಕರನ್ನು ಭೇಟಿಯಾಗುತ್ತಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಗಮನಾರ್ಹ ಉಪಸ್ಥಿತಿಯನ್ನು ಹೊoದಿರುವ ಸುಪ್ರಸಿದ್ಧವ್ಯಕ್ತಿಗಳನ್ನು ಭೇಟಿ ಮಾಡುತ್ತಿದ್ದಾರೆ.
ಅವರು ಜೂನ್ 19 ರಂದು ಕರ್ನಾಟಕವನ್ನು ತಲುಪಲಿದ್ದಾರೆ. ಸದ್ಗುರುಗಳು ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಉಪಸ್ಥಿತಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಮತ್ತು ಹಲವಾರು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಹಲವಾರು ಜಾಗತಿಕ ನಾಯಕರು ಮತ್ತು ಪ್ರಭಾವಿಗಳು, ವಿಜ್ಞಾನಿಗಳು, ಪರಿಸರ ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮಣ್ಣು ಉಳಿಸಿ ಅಭಿಯಾನವನ್ನು ಬೆಂಬಲಿಸುತ್ತಿವೆ.
ನೀವು ಇದರ ಬಗ್ಗೆ ಇನ್ನಷ್ಟು ತಿಳಿದುಕೊ ಳ್ಳಲು ಬಯಸಿದರೆ, ದಯವಿಟ್ಟು +91 94874 75346 ಗೆ ಕರೆ ಮಾಡಿ ಅಥವಾ ಇದಕ್ಕೆ ಬರೆಯಿರಿ:[email protected]ವೆಬ್‌ಸೈಟ್‌: savesoil.org
ಮುತ್ತುಗಳ ದ್ವೀಪ ಬಹರೈನ್​ನಲ್ಲಿ ಮಣ್ಣು ತೂರುವ ಬಿರುಗಾಳಿಯನ್ನು ಭೇದಿಸಿ ಸದ್ಗುರು ಪ್ರವೇಶ: ಮಣ್ಣು ಉಳಿಸಿ ಅಭಿಯಾನ

ಸದ್ಗುರು ಮಣ್ಣು ರಕ್ಷಣೆ ಅಭಿಯಾನಕ್ಕೆ ಮುಸ್ಲಿಂ ವರ್ಲ್ಡ್​ ಲೀಗ್​ ಬೆಂಬಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + six =
Remember me
