ಅಲಹಾಬಾದ್:ಒಬ್ಬ ವಿವಾಹಿತೆ, ಮಗುವಿನ ತಾಯಿಯೊಬ್ಬಳು ಗಂಡನಿಗೆ ವಿಚ್ಛೇದನ ನೀಡದೇ ಇನ್ನೊಬ್ಬನ ಜತೆ ಸಂಬಂಧ ಇಟ್ಟುಕೊಂಡಿದ್ದರೆ ಅಥವಾ ವಿವಾಹ ಮಾಡಿಕೊಂಡಿದ್ದರೆ ಆಕೆಯ ಮಗುವಿನ ಹಕ್ಕು ಅವಳಿಗೆ ಇರುತ್ತೋ, ಇಲ್ಲವೋ ಎಂಬ ಗೊಂದಲಕ್ಕೆ ಉತ್ತರಿಸಿದೆ ಅಲಹಾಬಾದ್​ ಹೈಕೋರ್ಟ್​.
ಒಂದು ವೇಳೆ ಮಹಿಳೆಗೆ ಮಗುವಿದ್ದರೆ, ಆಕೆ ಅಕ್ರಮ ಸಂಬಂಧ ಹೊಂದಿದ್ದರೂ ಮಗುವಿನ ಹಕ್ಕಿನಿಂದ ಆಕೆಗೆ ವಂಚನೆ ಮಾಡಲಾಗದು. ಅಪ್ರಾಪ್ತ ಮಕ್ಕಳು ಯಾವತ್ತಿಗೂ ತಾಯಿಯ ಸ್ವತ್ತು. ಆಕೆ ಬೇರೊಬ್ಬನ ಜನ ಸಂಬಂಧ ಹೊಂದಿರುವ ಮಾತ್ರಕ್ಕೆ ಮಗುವಿನ ಪಾಲನೆಯ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದಿದೆ ಕೋರ್ಟ್​.
ಅಕ್ರಮ ಸಂಬಂಧ ಎನ್ನುವುದು ಅಪರಾಧವಾಗಿದ್ದರೂ, ಸಮಾಜದಲ್ಲಿ ಆಕೆ ಕೆಟ್ಟವಳಂತೆ ಕಂಡುಬಂದರೂ ಕೂಡ ಮೊದಲ ಗಂಡನಿಂದ ಪಡೆದ ಮಗುವಿಗೆ ಆಕೆ ತಾಯಿಯಾಗಿರುತ್ತಾಳೆ, ಅಪ್ರಾಪ್ತ ಮಗುವಿನ ಜೀವನದಲ್ಲಿ ತಾಯಿಗೆ ವಿಶೇಷ ಸ್ಥಾನಮಾನವಿದೆ, ಹೀಗಾಗಿ ಕಾನೂನಿನಲ್ಲಿ ಆ ಮಗುವಿನ ರಕ್ಷಣೆಯನ್ನು ನೋಡಿಕೊಳ್ಳುವ ಹಕ್ಕಿನಿಂದ ಮಹಿಳೆಯನ್ನು ನಿರಾಕರಿಸುವಂತಿಲ್ಲ ಎಂದು ಕೋರ್ಟ್​ ಹೇಳಿದೆ.

ಅಪ್ರಾಪ್ತ ಮಗುವನ್ನು ತಾಯಿಯಿಂದ ದೂರ ಮಾಡುವುದರಿಂದ ಆ ಮಗುವಿನ ಒಟ್ಟಾರೆ ಬೆಳವಣಿಗೆ ಮೇಲೆ ಪರಿಣಾಮ ಬೀರಿಬಹುದು. ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಮ್ ಕುಮಾರ್ ಗುಪ್ತಾ ಎಂಬುವವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಜೆ. ಜೆ. ಮುನೀರ್ ಈ ತೀರ್ಪು ನೀಡಿದ್ದಾರೆ. ತಮ್ಮ ಪತ್ನಿ ಸಂಯೋಗಿತ ತನಗೆ ವಿಚ್ಛೇದನೆ ನೀಡದೆ ಎರಡನೇ ಮದುವೆಯಾಗಿದ್ದು, ಇದರಿಂದಾಗಿ ತಮ್ಮ ಮಗನ ಪಾಲನೆ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾಳೆ, ನನ್ನ ಮಗನಿಗೆ ಬೇರೊಬ್ಬ ಅಪರಿಚಿತರ ಮನೆಯಲ್ಲಿ ವಾಸಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.
ಆದರೆ ಈ ವಾದವನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ. ಮಗುವಿನ ವಿಷಯದಲ್ಲಿ ಈ ರೀತಿ ಮಾಡಲು ಸಾಧ್ಯವಿಲ್ಲ. ಅಪ್ರಾಪ್ತ ಮಕ್ಕಳನ್ನು ತಾಯಿಯಿಂದ ವಂಚನೆ ಮಾಡುವಂತಿಲ್ಲ ಎಂದಿದ್ದಾರೆ ನ್ಯಾಯಮೂರ್ತಿಗಳು.
ಹುಟ್ಟುಹಬ್ಬಕ್ಕೆಂದು ದುಬೈನಿಂದ ಬಂದು ಪೊಲೀಸ್​ ಕೇಸ್​ನಲ್ಲಿ ಸಿಲುಕಿಕೊಂಡ ಸಲ್ಮಾನ್​ ಸಹೋದರರು!

ಯಾರನ್ನೇ ಮದ್ವೆಯಾದ್ರೂ ನನ್ನ ಜತೆ ಕೂಡಲೇಬೇಕು ಎಂದಿದ್ದೇನೆ- ಇದರಲ್ಲಿ ತಪ್ಪೇನಿದೆ ಮೇಡಂ?

ಕಗ್ಗತ್ತಲಿನಲಿ ಮಂಗಳೂರಿನ ದಾರಿಮೇಲೆ ಕಂಡುಬಂದ ‘ಭೂತ’: ವಿಡಿಯೋ ವೈರಲ್​

ಒಬ್ಬನ ಅಂತ್ಯಸಂಸ್ಕಾರಕ್ಕೆ ಬಂದು ಹೆಣವಾದ 16 ಮಂದಿ: ₹10 ಲಕ್ಷ ಪರಿಹಾರ, ಉದ್ಯೋಗದ ಭರವಸೆ

‘ಭಗವದ್ಗೀತೆ ಹಿಡಿದವರಿಗೆ ವೋಟ್​ ಹಾಕ್ತೀರೊ, ಬೈಬಲ್​ ಹಿಡಿದವರಿಗೊ? ಆಯ್ಕೆ ನಿಮಗೆ ಬಿಟ್ಟಿದ್ದು…’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × two =
Remember me
