ಹೈದರಾಬಾದ್:ಟಾಲಿವುಡ್‌ನ ‘ಶಾಕುಂತಲಂ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿರುವ ಐದು ವರ್ಷದ ಪುಟಾಣಿ ಅರ್ಹಾ ಅರ್ಜುನ್‌ ಇದೀಗ ವಿಶ್ವದಾಖಲೆಯೊಂದನ್ನು ಮಾಡಿ ಗಮನ ಸೆಳೆದಿದ್ದಾಳೆ.
ನಟ ಅಲ್ಲು ಅರ್ಜುನ್ ಮಗಳಾದ ಅಲ್ಲು ಸಿನಿರಂಗಕ್ಕೆ ಪ್ರವೇಶಿಸುತ್ತಿರುವುದು ಈ ಕುಟುಂಬದ ನಾಲ್ಕನೆಯ ತಲೆಮಾರಿನ ಕುಡಿಯಾಗಿದ್ದಾಳೆ. ನಟನೆಯಲ್ಲಿಯೂ ಸೈ ಎನಿಸಿಕೊಂಡಿರುವ ಈಕೆ ಇದೀಗ ಚೆಸ್‌ ಆಡುವ ಮೂಲಕ ನೊಬೆಲ್‌ ವಿಶ್ವ ದಾಖಲೆ ಮಾಡಿದ್ದಾಳೆ. ಈಕೆ ಅತಿ ಚಿಕ್ಕ ವಯಸ್ಸಿಗೆ ಚೆಸ್ ಟ್ರೇನರ್ ಆಗಿದ್ದಾಳೆ.
ಈ ಕುರಿತು ಅಲ್ಲು ಅರ್ಜುನ್‌ ಪತ್ನಿ ಅಲ್ಲು ಸ್ನೇಹಾ ರೆಡ್ಡಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ವಿಷಯವನ್ನು ಶೇರ್‌ ಮಾಡಿದ್ದಾರೆ. ಮಗಳ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಅವರು, ತಮ್ಮ ಪುತ್ರಿಯ ಸಾಧನೆಯ ಕುರಿತು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಚೆಸ್‌ ಆಡುತ್ತಿರುವುದನ್ನು ನೋಡಬಹುದಾಗಿದೆ. ಜತೆಗೆ, ಅರ್ಹಾಗೆ ನೊಬೆಲ್ ವರ್ಲ್ಡ್​ ರೆಕಾರ್ಡ್ ನೀಡಿ ಗೌರವಿಸುವುದನ್ನು ನೋಡಬಹುದು.
ಸಮಂತಾ ಅಕ್ಕಿನೇನಿ ನಟನೆಯ ಶಾಕುಂತಲಂ ಸಿನಿಮಾದಲ್ಲಿ ಈಕೆಯದದ್ದು ಶಕುಂತಲೆ ಪುತ್ರ ಭರತನ ಪಾತ್ರ.‘ಶಾಕುಂತಲಂ ಚಿತ್ರದೊಂದಿಗೆ ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಅಲ್ಲು ಅರ್ಹಾ ಚಿತ್ರಕ್ಕೆ ಕಾಲಿಡುತ್ತಿರುವುದು ನಮಗೆ ಹೆಮ್ಮೆಯ ಸಂಗತಿ. ಇದು ನನ್ನ ಮಗಳಿಗೆ ಚೊಚ್ಚಲ ಸಿನಿಮಾವಾಗಿದೆ’ ಎಂದು ಬರೆದುಕೊಂಡ ಅಲ್ಲು ಅರ್ಜುನ್ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ಮಗಳು ದಾಖಲೆ ಮಾಡಿರುವುದನ್ನು ಕೂಡ ಅವರು ಉಲ್ಲೇಖಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
A post shared by Allu Sneha Reddy (@allusnehareddy)

VIDEO: ಏಳು ಗಂಟೆ ಶವಾಗಾರದ ಫ್ರೀಜರ್‌ನಲ್ಲಿದ್ದ ಮೃತದೇಹ ಎದ್ದು ಉಸಿರಾಡಿತು! ವಿಡಿಯೋ ವೈರಲ್‌
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
