ನವದೆಹಲಿ:ಪಾಕಿಸ್ತಾನ, ಸಿರಿಯಾ ದೇಣಿಗೆ ಸ್ವೀಕರಿಸುತ್ತಾ, ಹಲವಾರು ದೇಶಗಳಲ್ಲಿ ಹಣದ ವ್ಯವಹಾರ ನಡೆಸುತ್ತಿರುವ ಭಾರಿ ಆರೋಪ ಹೊತ್ತು ಭಾರತದಲ್ಲಿ ನೆಲೆಸುತ್ತಿರುವ ಆಲ್ಟ್​ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್​ಗೆ ಸುಪ್ರೀಂಕೋರ್ಟ್​ ಬುಧವಾರ (ಜುಲೈ 29) ಜಾಮೀನು ನೀಡಿದೆ. ಇವರ ವಿರುದ್ಧ ಇರುವ ಹಲವು ಪ್ರಕರಣಗಳ ಪೈಕಿ ಆರು ಕೇಸ್​ಗಳಲ್ಲಿ ಜಾಮೀನು ಮಂಜೂರು ಆಗಿದೆ.
ಫ್ಯಾಕ್ಟ್​ ಚೆಕ್​ ಹೆಸರಿನಲ್ಲಿ ಆಲ್ಟ್​ ನ್ಯೂಸ್ ವೆಬ್​ಸೈಟ್​ ತೆರೆದು ಹಿಂದೂ ದೇವತೆಗಳು ಹಾಗೂ ಸನ್ಯಾಸಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್​ ಮಾಡಿರುವುದು, 2018ರಲ್ಲಿ ಹಿಂದೂ ದೇವತೆಯ ವಿರುದ್ಧದ ‘ಆಕ್ಷೇಪಾರ್ಹ ಟ್ವೀಟ್’ ಮಾಡಿರುವುದ ಸೇರಿದಂತೆ ಹಲವು ಪ್ರಕರಣಗಳು ಇವರ ಮೇಲಿವೆ. 2018ರಲ್ಲಿ ದಾಖಲಾದ ಕೇಸ್​ ತನಿಖೆ ವೇಳೆ ಜುಬೇರ್​ ನಡೆಸುತ್ತಿರುವ ಕಂಪೆನಿಯು ಪಾಕಿಸ್ತಾನ, ಸಿರಿಯಾ ಮತ್ತು ಇತರೆ ಗಲ್ಫ್ ದೇಶಗಳಿಂದ ದೇಣಿಗೆಗಳನ್ನು ಸ್ವೀಕರಿಸಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದರು.
ಆಲ್ಟ್ ನ್ಯೂಸ್‌ನ ಪೋಷಕ ಕಂಪೆನಿಯಾಗಿರುವ ಪ್ರವ್ಡಾ ಮೀಡಿಯಾ, ವಿವಿಧ ವರ್ಗಾವಣೆಗಳ ಮೂಲಕ 2 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಪಡೆದುಕೊಂಡಿದೆ. ಅದು ರವಾನೆಯಾಗಿರುವ ಮೊಬೈಲ್ ಫೋನ್ ಸಂಖ್ಯೆ ಅಥವಾ ಐಪಿ ವಿಳಾಸ ವಿದೇಶಗಳದ್ದಾಗಿವೆ. ಜುಬೇರ್ ಅವರು ಪ್ರವ್ಡಾ ಮೀಡಿಯಾದ ನಿರ್ದೇಶಕ ಕೂಡ ಹೌದು ಎಂದು ಪೊಲೀಸರು ತಿಳಿಸಿದ್ದರು. ಬ್ಯಾಂಕಾಕ್, ಆಸ್ಟ್ರೇಲಿಯಾ, ನಾರ್ಥ್ ಹಾಲಾಂಡ್, ಸಿಂಗಪುರ, ವಿಕ್ಟೋರಿಯಾ, ನ್ಯೂಯಾರ್ಕ್, ಇಂಗ್ಲೆಂಡ್, ರಿಯಾದ್ ಪ್ರದೇಶ, ಶಾರ್ಜಾ, ಸ್ಟಾಕ್‌ಹೋಮ್, ಅಬುದಾಬಿ, ವಾಷಿಂಗ್ಟನ್, ಕನ್ಸಾಸ್, ನ್ಯೂಜೆರ್ಸಿ, ಒಂಟಾರಿಯೋ, ಕ್ಯಾಲಿಫೋರ್ನಿಯಾ, ಟೆಕ್ಸಾಸ್, ಲೋವರ್ ಸಾಕ್ಸೋನಿ, ಬೆರ್ನ್, ದುಬೈ, ಸ್ಕಾಟ್ಲೆಂಡ್ ಸೇರಿದಂತೆ ವಿದೇಶಗಳು ಮತ್ತು ನಗರಗಳಿಂದ ಹಲವು ಹಣ ವರ್ಗಾವಣೆಗಳು ನಡೆದಿವೆ. ಇವುಗಳ ಮೊಬೈಲ್ ಫೋನ್ ಸಂಖ್ಯೆ ಅಥವಾ ಐಪಿ ವಿಳಾಸ ಭಾರತದ ಹೊರಗೆ ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಆದರೆ ಇದೀಗ ಇನ್ನಷ್ಟು ಆತಂಕಕಾರಿ ವಿಷಯವನ್ನು ಉತ್ತರ ಪ್ರದೇಶ ಸರ್ಕಾರ ಕೋರ್ಟ್​ಗೆ ತಿಳಿಸಿದೆ. ಅದೇನೆಂದರೆ, ಮೊಹಮ್ಮದ್‌ ಜುಬೇರ್‌ ಅಸಲಿಗೆ ಪತ್ರಕರ್ತನಲ್ಲ, ಬದಲಿಗೆ ವಿಷವನ್ನು ಬಿತ್ತುವ ಟ್ವೀಟ್‌ಗಳನ್ನು ಮಾಡುತ್ತಾ ಕೋಟಿ ಕೋಟಿ ರೂಪಾಯಿಗಳನ್ನು ಪಡೆಯುತ್ತಿರುವುದಾಗಿ ಸರ್ಕಾರ ಹೇಳಿದೆ. ತನಿಖೆಯ ವೇಳೆ ಈ ವಿಷಯವನ್ನು ಖುದ್ದು ಇವರೇ ಒಪ್ಪಿಕೊಂಡಿರುವುದಾಗಿ ಕೋರ್ಟ್​ಗೆ ಸರ್ಕಾರ ಮಾಹಿತಿ ನೀಡಿದೆ.
ತನ್ನನ್ನು ತಾನು ಫ್ಯಾಕ್ಟ್‌ ಚೆಕ್ಕರ್‌ ಎಂದು ಕರೆದುಕೊಳ್ಳುವ ಜುಬೇರ್​, ಸತ್ಯವನ್ನು ಪರಿಶೀಲಿಸುವ ಬದಲು, ವೈರಲ್ ಆಗುತ್ತಿರುವ ಮತ್ತು ವಿಷವನ್ನು ಹರಡುವ ಟ್ವೀಟ್‌ಗಳನ್ನು ಪೋಸ್ಟ್ ಮಾಡುತ್ತಾರೆ. ಇದಾಗಲೇ ಒಂದು ಟ್ವೀಟ್‌ಗೆ 12 ಲಕ್ಷ ರೂ. ಪಡೆದಿದ್ದಾರೆ. ಟ್ವೀಟ್‌ ಮಾಡಲೆಂದೇ 2 ಕೋಟಿ ರೂ. ಪಡೆದಿದ್ದಾರೆ. ಟ್ವೀಟ್​ ಹೆಚ್ಚು ಹೆಚ್ಚು ಪ್ರಚೋದನಕಾರಿಯಾದಷ್ಟೂ ಬೆಲೆ ಅಷ್ಟೇ ಇವರಿಗೆ ಸಂದಾಯವಾಗುತ್ತಿದೆ. ಪ್ರಚೋದನಕಾರಿ ಅಥವಾ ಸಮಾಜವನ್ನು ಹಾಳುಗೆಡುವ ವಿಷಯಗಳು ಕಂಡುಬಂದಾಗ ಅದನ್ನು ಪೊಲೀಸರಿಗೆ ತಿಳಿಸುವುದನ್ನು ಬಿಟ್ಟು, ಅದನ್ನೇ ಬಂಡವಾಳ ಮಾಡಿಕೊಂಡು ಟ್ವೀಟ್​ ಮಾಡಿ ಇನ್ನಷ್ಟು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಲ್ಲಿ ಇವರದ್ದು ಎತ್ತಿದ ಕೈ ಎಂದು ಸರ್ಕಾರ ಕೋರ್ಟ್​ಗೆ ಹೇಳಿದೆ.
ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೇ ಅನುಯಾಯಿಗಳನ್ನು ಹೊಂದಿದ್ದು, ಈ ರೀತಿಯ ಪೋಸ್ಟ್​ ಮಾಡುವ ಮೂಲಕ ದೇಶಾದ್ಯಂತ ಜನರ ಭಾವನೆಗಳನ್ನು ಕೆರಳಿಸಲು ಪ್ರಯತ್ನ ಮಾಡುತ್ತಿರುವುದಾಗಿ ಉತ್ತರ ಪ್ರದೇಶ ಸರ್ಕಾರ ಕೋರ್ಟ್​ಗೆ ಮಾಹಿತಿ ನೀಡಿದೆ. ಸದ್ಯ ಜುಬೇರ್​ಗೆ ಜಾಮೀನು ಮಂಜೂರು ಆಗಿದೆ. ಇವರನ್ನು ಬಂಧಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್​ ಸೇರಿದಂತೆ ಕೆಲವರು ಪ್ರತಿಭಟನೆ ಮಾಡಿದ್ದರು.(ಏಜೆನ್ಸೀಸ್​)
ಅದು ನನ್ನ ಬರ್ತ್​ಡೇಟ್​ ಅಲ್ವೋ, ಡೆತ್​ಡೇಟ್​ ಎಂದಿದ್ದ ಬಾಲಕ: ಸ್ನೇಹಿತನಿಗೆ ಹೇಳಿದ್ದ ಮಾತು ನಿಜವಾಗಿತ್ತು!

ಕೂಡ್ಲಿಗಿಯಲ್ಲೊಂದು ಬೆಚ್ಚಿಬೀಳೋ ಘಟನೆ: ಮದುವೆಗೆ ಒಪ್ಪಲಿಲ್ಲವೆಂದು ರುಂಡ ಕಡಿದು ಪೊಲೀಸ್​ ಠಾಣೆಗೆ ತಂದ!

ಕಂಕುಳಿನ ಕೂದಲಿನಿಂದ ಕೋಟಿ ಕೋಟಿ ರೂ. ಗಳಿಸ್ತಾಳೆ ಈಕೆ- ಬೆವರೇ ಈಕೆಯ ಆದಾಯದ ಮೂಲವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
