ಹೈದರಾಬಾದ್​: ತೆಲುಗು, ತಮಿಳು ಮತ್ತು ಮಲಯಾಳ ಚಿತ್ರಗಳಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ನಟಿ ಅಮಲಾ ಪೌಲ್​. ಅನೇಕ ಹಿಟ್​ ಚಿತ್ರಗಳನ್ನು ನೀಡುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.
ಈ ನಟಿಗೆ ಈಗ 30 ವರ್ಷ ವಯಸ್ಸು. 2014ರಲ್ಲಿ ಅಂದರೆ 21ನೇ ವಯಸ್ಸಿನಲ್ಲಿ ಇವರ ವಿವಾಹ ಕಾಲಿವುಡ್​ನ ಜನಪ್ರಿಯ ನಿರ್ದೇಶಕ ಎ.ಎಲ್.ವಿಜಯ್ ಅವರ ಜತೆಗೆ ಆಗಿತ್ತು. ಆದರೆ ಮದುವೆಯಾದ ಮೂರೇ ವರ್ಷಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ ಡಿವೋರ್ಸ್​ ಪಡೆದುಕೊಂಡರು. ಇವರ ಈ ಬಿರುಕಿಗೆ ಕಾರಣ, ನಟ ಧನುಷ್ ಎಂಬ ಮಾತು ಕೂಡ ಕೇಳಿಬಂದಿದ್ದವು. ಆದರೆ ಆ ಬಗ್ಗೆ ಯಾರೊಬ್ಬರೂ ಬಾಯಿ ಬಿಟ್ಟಿರಲಿಲ್ಲ.
ಇದೀಗ ದಂಪತಿ ದೂರವಾಗಿ ಐದು ವರ್ಷಗಳಾಗಿವೆ. ಅವಿವಾಹಿತರಾಗಿ ಉಳಿದಿರುವ ಅಮಲಾ ಈಗ ತಮ್ಮ ಎರಡನೆಯ ಮದುವೆಯ ಹಿಂಟ್​ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಪಡೆದಿರುವ ಅಮಲಾ ಅವರ ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಮದುವೆಯಾಗುವ ಹಿಂಟ್​ ನೀಡಿದ್ದಾರೆ. ‘ನಿಮ್ಮನ್ನು ಮದುವೆಯಾಗಲು ಇರುವ ಅರ್ಹತೆಗಳೇನು?’ ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. ಅದಕ್ಕೆ ಅಮಲಾ, ‘ಈಗ ನನಗೆ ಮತ್ತೆ ಮದುವೆಯಾಗುವ ಯೋಚನೆ ಇಲ್ಲ. ನಾನು ಪ್ರಸ್ತುತ ನನ್ನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮತ್ತು ರೂಪಾಂತರಗೊಳ್ಳುವ ಪ್ರಕ್ರಿಯೆಯಲ್ಲಿದ್ದೇನೆ. ಹಾಗಾಗಿ ವಿದ್ಯಾರ್ಹತೆ ಹೇಳಲಾರೆ ಎಂದಿದ್ದಾರೆ. ಆದರೆ ಆತನಲ್ಲಿ ಯಾವ ಗುಣಗಳು ಇರಬೇಕು ಎಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಹೇಳುವ ಮೂಲಕ ಮದುವೆಯಾಗುವ ಹಿಂಟ್​ ನೀಡಿದ್ದಾರೆ.
ಆಂಧ್ರದ ರಾಜಕೀಯದಲ್ಲಿ ಕುತೂಹಲದ ತಿರುವು: ಮಗನ ಬಿಟ್ಟು ಮಗಳ ಕೈಹಿಡಿದ ಮುಖ್ಯಮಂತ್ರಿ ಅಮ್ಮ!

‘ಕಷ್ಟ ನನ್ನದು, ಲಾಭ ಅವರದ್ದು… ಆಸ್ತಿ ಬಂದ ಮೇಲೆ ದೂರ ಮಾಡಿದ್ರು- ಕೆಲ್ಸ ಮಾಡಿಸಿ​ಕೊಂಡು ಯಾಮಾರಿಸಿದ್ರು’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
