ಶ್ರೀನಗರ:ನೈಸರ್ಗಿಕ ವಿಕೋಪದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆಯನ್ನು ಪುನರಾರಂಭಿಸಿದ 36 ಗಂಟೆಗಳಲ್ಲಿಯೇ ಮತ್ತೆ ಎಂಟು ಮಂದಿ ಮೃತಪಟ್ಟಿದ್ದಾರೆ. ವಿಪರೀತ ಮಳೆ ಹಾಗೂ ಗುಡ್ಡಗಳ ಕುಸಿತದ ಹಿನ್ನೆಲೆಯಲ್ಲಿ ಯಾತ್ರೆಯನ್ನು ನಿನ್ನೆ (ಜುಲೈ 14) ಪುನಃ ಸ್ಥಗಿತಗೊಳಿಸಲಾಗಿದೆ. ಆದರೆ ಇದಕ್ಕೂ ಮುನ್ನ ಎಂಟು ಮಂದಿ ಪ್ರಕೃತಿ ವಿಕೋಪಕ್ಕೆ ಬಲಿಯಾಗಿದ್ದಾರೆ.
ಮೃತಪಟ್ಟವರನ್ನು ಕರ್ನಾಟಕದ ಬಸವರಾಜ (68), ರಾಜಸ್ಥಾನದ ಮೊಂಗಿಲಾಲ್ (52), ಗುಜರಾತ್‌ನ ವ್ರಿಯಾಗ್ ಲಾಲ್ ಹೀರಾ ಚಂದ್ ವ್ಯಾಸ್ (57), ಸಿಂಗಪುರದ ಪೂನಿಯಾಮೂರ್ತಿ (63), ಮಹಾರಾಷ್ಟ್ರದ ಕಿರಣ್ ಚತುರ್ವೇದಿ, ಆಂಧ್ರಪ್ರದೇಶದ ಕಲವಲ ಸುಬ್ರಮಣ್ಯಂ (63), ಉತ್ತರ ಪ್ರದೇಶದ ಗೋವಿಂದ್ ಶರಣ್ (34) ಮತ್ತು ಹರಿಯಾಣದ ಸತ್ವೀರ್ ಸಿಂಗ್ (70) ಎಂದು ಗುರುತಿಸಲಾಗಿದೆ.
ಈ ಮೂಲಕ ಒಟ್ಟು ಸಾವಿನ ಸಂಖ್ಯೆ 41 ತಲುಪಿದೆ. ಕಳೆದ ವಾರ ದಕ್ಷಿಣ ಕಾಶ್ಮೀರ ಹಿಮಾಲಯದ ಗುಹೆ ದೇಗುಲದ ಬಳಿ ಭಾರಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಒಟ್ಟು 15 ಮಂದಿ ಯಾತ್ರಿಕರು ಸೇರಿ ಒಟ್ಟೂ 33 ಮಂದಿ ಮೃತಪಟ್ಟಿದ್ದರು.
ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಆದರೆ ಈ ವರ್ಷ ಎಲ್ಲ ರೀತಿಯ ಭದ್ರತೆಯೊಂದಿಗೆ ಅಮರನಾಥ ಯಾತ್ರೆಯು ಜೂನ್ 30 ರಂದು ಪ್ರಾರಂಭ ಮಾಡಲಾಗಿದೆ. ಜುಲೈ 8 ರಂದು ಹಠಾತ್ ಪ್ರವಾಹದ ನಂತರ ಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು. ಮತ್ತೆ ಜುಲೈ 11 ರಂದು ಯಾತ್ರೆಯನ್ನು ಪುನರಾರಂಭ ಮಾಡಲಾಗಿದ್ದು, ತಾತ್ಕಾಲಿಕವಾಗಿ ಮತ್ತೆ ಸ್ಥಗಿತಗೊಳಿಸಲಾಗಿದೆ.
ಸಾವು-ನೋವುಗಳ ನಡುವೆಯೂ ಬತ್ತದ ಉತ್ಸಾಹ: ವರುಣನ ಆರ್ಭಟಕ್ಕೆ ಅಮರನಾಥ ಯಾತ್ರೆ ಮತ್ತೆ ಸ್ಥಗಿತ

ಡೊನಾಲ್ಡ್​ ಟ್ರಂಪ್​ ಮೊದಲ ಪತ್ನಿ, ಸುಪ್ರಸಿದ್ಧ ಮಾಡೆಲ್ ಇವಾನಾ ನಿಗೂಢ ಸಾವು: ಪೊಲೀಸರಿಂದ ತನಿಖೆ

ಸಂಗೀತದ ಹೆಸರಿನಲ್ಲಿ ಜನರ ಅಕ್ರಮ ಸಾಗಾಟ: ಖ್ಯಾತ ಗಾಯಕ ದಲೇರ್​ ಮೆಹಂದಿ ಜೈಲಿಗೆ- ಕೋರ್ಟ್​ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 16 =
Remember me
