ಜಮ್ಮು:ಕಳೆದ ರಾತ್ರಿಯಿಂದ ಉಂಟಾಗಿರುವ ಪ್ರತಿಕೂಲ ಹವಾಮಾನ ಮತ್ತು ಮಳೆಯ ಕಾರಣ ಸ್ಥಳೀಯ ಆಡಳಿತವು ಅಮರನಾಥ ಯಾತ್ರೆಯನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಮೊಟಕುಗೊಳಿಸಿದೆ. ಬಲ್ಟಾಲ್ ಮತ್ತು ಪಹಲ್ಗಾಮ್ ಶಿಬಿರಗಳಿಂದ ಪವಿತ್ರ ಗುಹೆಯ ಕಡೆಗೆ ತೆರಳಲು ಯಾವುದೇ ಯಾತ್ರಿಕರಿಗೆ ಅವಕಾಶ ಇಲ್ಲ. ಯಾತ್ರಾರ್ಥಿಗಳಿಗೆ ಮುಂದಿನ ಆದೇಶದವರೆಗೆ ಮೂಲ ಶಿಬಿರಗಳಲ್ಲಿಯೇ ತಂಗುವಂತೆ ಸೂಚನೆ ನೀಡಲಾಗಿದೆ.
ಇದಕ್ಕೂ ಮುನ್ನ ಜುಲೈ 5 ರಂದು ಭಾರಿ ಮಳೆಯ ನಂತರ ಮತ್ತು ಜುಲೈ 8 ರಂದು ಭಾರಿ ಮಳೆಯಿಂದ ಯಾತ್ರೆಯನ್ನು ನಿಲ್ಲಿಸಲಾಗಿತ್ತು. 15ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಇಷ್ಟಾದರೂ ಭಕ್ತರ ಉತ್ಸಾಹ ತಗ್ಗಲಿಲ್ಲ. ಇದೀಗ ಬಲ್ಟಾಲ್ ಮತ್ತು ಪಹಲ್ಗಾಮ್ ರಸ್ತೆಗಳಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಮಳೆಗಾಲದಲ್ಲಿ ಆಗಾಗ್ಗೆ ಇಲ್ಲಿ ಭೂಕುಸಿತ ಸಂಭವಿಸುವ ಅಪಾಯವಿದೆ. ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸದ್ಯಕ್ಕೆ ಎರಡೂ ಮಾರ್ಗಗಳಲ್ಲಿ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.
ಅಮರನಾಥ ಪುಣ್ಯಕ್ಷೇತ್ರ ಮಂಡಳಿ (ಎಸ್‌ಎಎಸ್‌ಬಿ) ನೀಡಿರುವ ಮಾಹಿತಿ ಪ್ರಕಾರ, ಜೂನ್ 30 ರಿಂದ ಪ್ರಾರಂಭವಾದ ಅಮರನಾಥ ಯಾತ್ರೆಯಲ್ಲಿ ಇದುವರೆಗೆ 1,44,457 ಯಾತ್ರಾರ್ಥಿಗಳು ಯಾತ್ರೆ ಕೈಗೊಂಡಿದ್ದು, ಈ ಪೈಕಿ 16,457 ಮಂದಿ ಬುಧವಾರ ದರ್ಶನ ಪಡೆದಿದ್ದಾರೆ. 5,449 ಯಾತ್ರಾರ್ಥಿಗಳ ಮತ್ತೊಂದು ತಂಡವು ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಎರಡು ಬೆಂಗಾವಲುಗಳಲ್ಲಿ ಯಾತ್ರೆಗೆ ಹೊರಟಿದೆ. ಇವರಲ್ಲಿ 3783 ಮಂದಿ ಪಹಲ್ಗಾಮ್ ಬೇಸ್ ಕ್ಯಾಂಪ್‌ಗೆ ಹೋಗುತ್ತಿದ್ದರೆ 1666 ಮಂದಿ ಬಲ್ಟಾಲ್ ಬೇಸ್ ಕ್ಯಾಂಪ್‌ಗೆ ಹೋಗುತ್ತಿದ್ದಾರೆ.
ಹವಾಮಾನ ಸುಧಾರಿಸಿದ ನಂತರವೇ ಯಾತ್ರೆಗೆ ಅನುಮತಿ ನೀಡಲಾಗುವುದು ಎಂದು ಶಿಬಿರದ ವ್ಯವಸ್ಥಾಪಕರು ಹೇಳಿದ್ದಾರೆ. ಸದ್ಯ ಯಾತ್ರೆ ನಿಂತಿರುವುದರಿಂದ ಭಕ್ತರಿಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲೆಲ್ಲಿ ಭಕ್ತರನ್ನು ನಿಲ್ಲಿಸಲಾಗಿದೆಯೋ ಅಲ್ಲೆಲ್ಲ ವಾಸ್ತವ್ಯ ಮತ್ತು ಊಟದ ಸಂಪೂರ್ಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಚಿಕ್ಕದಾದ ಬಾಲ್ಟಾಲ್ ಮಾರ್ಗವನ್ನು ಬಳಸುವವರು ಗುಹೆ ದೇಗುಲವನ್ನು ತಲುಪಲು 14 ಕಿಲೋಮೀಟರ್ ಟ್ರೆಕ್ ಮಾಡಬೇಕು ಮತ್ತು ಮುಂದೆ ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗವನ್ನು ಬಳಸುವವರು ಗುಹೆ ದೇಗುಲವನ್ನು ತಲುಪಲು ನಾಲ್ಕು ದಿನಗಳವರೆಗೆ 48 ಕಿಮೀ ಚಾರಣ ಮಾಡಬೇಕು. ಯಾತ್ರಿಗಳಿಗೆ ಎರಡೂ ಮಾರ್ಗಗಳಲ್ಲಿ ಹೆಲಿಕಾಪ್ಟರ್ ಸೇವೆಗಳು ಲಭ್ಯವಿವೆ. ರಕ್ಷಾ ಬಂಧನದ ದಿನವೂ ಆಗಿರುವ ಆಗಸ್ಟ್ 11ರಂದು ಕೊನೆಗೊಳ್ಳಲಿದೆ.
ಅಮರನಾಥ ಗುಹೆಯ ಬಳಿ ಆಗಿದ್ದು ಮೇಘಸ್ಫೋಟವಲ್ಲ: ಹಾಗಿದ್ದರೆ ಇನ್ನೇನು? ಹವಾಮಾನ ಇಲಾಖೆ ಹೇಳಿದ್ದಿಷ್ಟು..

ಅಮರನಾಥದಲ್ಲಿ ಕನ್ನಡಿಗರು ಸುರಕ್ಷಿತ: 24 ಗಂಟೆ ಸಹಾಯವಾಣಿ ಆರಂಭ, ಇಲ್ಲಿದೆ ವಿವರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
