ನವದೆಹಲಿ:ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ನಂತರ ಇದೇ ಮೊದಲ ಬಾರಿಗೆ ಅಮರನಾಥ ಯಾತ್ರೆ ನಡೆಯಲಿದ್ದು ಅದರ ದಿನಾಂಕವನ್ನು ನಿಗದಿ ಮಾಡಲಾಗಿದೆ. 2019ರ ಆಗಸ್ಟ್​ 5ರಂದು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಲಾಗಿತ್ತು. ಇದಾದ ಬಳಿಕ ಕರೊನಾ ಹಿನ್ನೆಲೆಯಲ್ಲಿ ಯಾತ್ರೆ ನಡೆದಿರಲಿಲ್ಲ.
ಇದೀಗ ಅಮರನಾಥ ದೇವಾಲಯ ಮಂಡಳಿಯ ಸಭೆಯಲ್ಲಿ ಈ ವರ್ಷದ ದಿನವನ್ನು ನಿಗದಿ ಮಾಡಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಜಿ.ಸಿ.ಮರ್ಮು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಿನಾಂಕವನ್ನು ಗೊತ್ತು ಮಾಡಲಾಗಿದೆ. ಯಾತ್ರೆಯು ಬರುವ ಜೂನ್ 23 ರಂದು ಆರಂಭವಾಗಲಿದೆ. ಇದು ಮುಕ್ತಾಯವಾಗುವ ದಿನ ಆಗಸ್ಟ್ 3. ಅಂದರೆ ಒಟ್ಟು 42 ದಿನಗಳವರೆಗೆ ಪ್ರಯಾಣ ಇರಲಿದೆ. ಕಳೆದ ಬಾರಿ 46 ದಿನಗಳ ಪ್ರಯಾಣವಿತ್ತು.
ಈ ಯಾತ್ರೆಗೆ ಹೋಗಬಯಸುವವರಿಗೆ ನೋಂದಣಿಯನ್ನು ಬರುವ ಏಪ್ರಿಲ್​ 1ರಿಂದ ಆರಂಭಿಸಲಾಗುತ್ತಿದೆ. ಕಣಿವೆಯಲ್ಲಿ ಭಯೋತ್ಪಾದಕ ಕೃತ್ಯದ ಹಿನ್ನೆಲೆಯಲ್ಲಿ ಅಮರನಾಥ ಅಮರನಾಥ ಯಾತ್ರಿಕರು ಆದಷ್ಟು ಬೇಗ ಕಾಶ್ಮೀರದಿಂದ ಹೊರಹೋಗುವಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತವು 2019 ರ ಆಗಸ್ಟ್ 2 ರಂದು ಭದ್ರತಾ ಸಲಹೆಯನ್ನು ನೀಡಿತ್ತು. ಅದರ ಆಧಾರದ ಮೇಲೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಜಗನ್ನಾಥ ಯಾತ್ರೆ ಕೂಡ ಆರಂಭ:ಜೂನ್ 23 ರಿಂದ ಜಗನ್ನಾಥ ಯಾತ್ರೆ ಕೂಡ ಪ್ರಾರಂಭವಾಗಲಿದೆ. ಆಗಸ್ಟ್ 3 ರಂದು ಸಾವನ್ ಪೂರ್ಣಿಮಾ (ರಕ್ಷಾ ಬಂಧನ್) ದಿನದಂದು ಯಾತ್ರೆ ಕೊನೆಗೊಳ್ಳುತ್ತದೆ. 2019 ರಲ್ಲಿ ಸೀಮಿತ ಸಂಖ್ಯೆಯ ಯಾತ್ರಿಗಳ ಆನ್‌ಲೈನ್ ನೋಂದಣಿಯ ಪ್ರಾಯೋಗಿಕ ಯೋಜನೆಯ ಯಶಸ್ಸನ್ನು ಪರಿಗಣಿಸಿ ಮಂಡಳಿಯು ಆನ್‌ಲೈನ್ ನೋಂದಣಿಯ ಕೋಟಾವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
13 ವರ್ಷಕ್ಕಿಂತ ಕಡಿಮೆ ಮತ್ತು 75 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಗೆ ತೀರ್ಥಯಾತ್ರೆ ಮಾಡಲು ಅನುಮತಿ ನೀಡಲಾಗುವುದಿಲ್ಲ. ಯಾತ್ರೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್-http://www.Shriamarnathjishrine.comನಲ್ಲಿ ನೋಡಬಹುದಾಗಿದೆ.
ಕುದುರೆ ಏರಿ ನಿಂತ… ಚೆಂದನೇ ಪೋಸ್​ ಕೊಟ್ಟ…. ಹೆಣ್ಮಕ್ಕಳು ಫಿದಾ… ಗಂಡುಮಕ್ಕಳು ಗರಂ!

ಚಿಕ್ಕ ವಯಸ್ಸಿನಲ್ಲಿಯೇ ಲೈಂಗಿಕ ನಿರಾಸಕ್ತಿ ಬಂದುಬಿಟ್ಟಿದೆ… ಅಪರಾಧಿ ಪ್ರಜ್ಞೆ ಕಾಡ್ತಿದೆ, ಏನು ಮಾಡಲಿ?

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಶಾಕ್​- ನೇರ ನೇಮಕಾತಿಯ ಅಧಿಸೂಚನೆಗಳು ರದ್ದು; ಕನಸು ನುಚ್ಚುನೂರು

ಶಾಲೆಯಿಂದ 39 ವಿದ್ಯಾರ್ಥಿಗಳನ್ನು ಅಪಹರಿಸಿ ಕೊಂಡೊಯ್ದ ಬಂದೂಕುಧಾರಿಗಳು! ಕಣ್ಣೀರಿನಲ್ಲಿ ಪಾಲಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eleven =
Remember me
