ಭಾಗಲ್ಪುರ (ಬಿಹಾರ):ಈಗ ಹೆಣ್ಣುಮಕ್ಕಳ ಬಗ್ಗೆ ಏನೇ ಮಾತನಾಡಿದರೂ ಅದು ಅಫ್ಘಾನಿಸ್ತಾನದ್ದೇ ಸುದ್ದಿ ಎನ್ನುವಂತಾಗಿದೆ. ಆದರೆ ಬಿಹಾರದಲ್ಲಿನ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರಿಗೆ ಕಟ್ಟುನಿಟ್ಟಿನ ರೂಲ್ಸ್​ ಮಾಡಲಾಗಿದೆ..ಬಿಹಾರದ ಭಾಗಲ್ಪುರದ ಮಹಿಳಾ ಕಾಲೇಜೊಂದರಲ್ಲಿ ನೂತನ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದೆ. ಈ ಸಂಹಿತೆಯಡಿ ಇಲ್ಲಿ ವಿದ್ಯಾರ್ಥಿನಿಯರಿಗೆ ಕೂದಲು ಬಿಟ್ಟುಕೊಂಡು ಬರುವಂತಿಲ್ಲ ಹಾಗೂ ಸೆಲ್ಫಿ ತೆಗೆಯಲು ನಿಷೇಧ ಹೇರಲಾಗಿದೆ.ಭಾಗಲ್ಪುರದ ಸುಂದರ್​ವತಿ ಮಹಿಳಾ ಮಹಾವಿದ್ಯಾಲಯದಲ್ಲಿ 11 ಮತ್ತು 12ನೇ ತರಗತಿ ವಿದ್ಯಾರ್ಥಿನಿಯರಿಗೆ ನೂತನ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದ್ದು, ತೆರೆದ ಕೂದಲೊಂದಿಗೆ ಬಂದರೆ ಅವರಿಗೆ ಕಾಲೇಜಿನೊಳಗೆ ಪ್ರವೇಶವಿಲ್ಲ ಎಂದು ಕಾಲೇಜು ಸಮಿತಿ ಕಟ್ಟಪ್ಪಣೆ ಹೊರಡಿಸಿದೆ.ಈ ಕಾಲೇಜು ಭಾಗಲ್ಪುರದ ಏಕೈಕ ಮಹಿಳಾ ಕಾಲೇಜಾಗಿದೆ. ಪದವಿ ಪೂರ್ವ ಕೋರ್ಸ್​ನ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಸುಮಾರು 1500 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. 11 ಮತ್ತು 12ನೇ ತರಗತಿ ವಿದ್ಯಾರ್ಥಿನಿಯರಿಗೆ ಈ ವರ್ಷದಿಂದ ಹೊಸ ಡ್ರೆಸ್ ಕೋಡ್ ಜಾರಿಗೆ ತರಲು ಪ್ರಾಂಶುಪಾಲರಾದ ಪ್ರೊ. ರಮಣ್ ಸಿನ್ಹಾ ನೇತೃತ್ವದಲ್ಲಿ ಕಾಲೇಜು ಸಮಿತಿ ನಿರ್ಧರಿಸಿದೆ.ಹೊಸ ನಿಯಮಗಳ ಪ್ರಕಾರ ವಿದ್ಯಾರ್ಥಿನಿಯರು ತೆರೆದ ಕೂದಲೊಂದಿಗೆ ಬಂದರೆ ಅವರಿಗೆ ಕಾಲೇಜಿನೊಳಗೆ ಪ್ರವೇಶ ಇಲ್ಲ, ಜುಟ್ಟು ಅಥವಾ ಜಡೆ ಕಟ್ಟಿಕೊಂಡು ನೀಲಿ ಕುರ್ತಿ, ಬಿಳಿ ಸಲ್ವಾರ್, ಬಿಳಿ ದುಪ್ಪಟ್ಟಾ, ಕಪ್ಪು ಶೂ ಧರಿಸಿ ಬರಬೇಕು. ಚಳಿಗಾಲದಲ್ಲಿ ರಾಯಲ್ ಬ್ಲೂ ಬ್ಲೇಜರ್ ಅಥವಾ ಕಾರ್ಡಿಜನ್ ಧರಿಸಿ ಬರಬೇಕು. ಅಷ್ಟೇ ಅಲ್ಲ, ಕಾಲೇಜು ಆವರಣದಲ್ಲಿ ಸೆಲ್ಫಿಯಂತೂ ಕ್ಲಿಕ್ಕಿಸುವ ಹಾಗಿಲ್ಲ ಎಂದು ವಸ್ತ್ರಸಂಹಿತೆಯಲ್ಲಿ ವಿವರಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + two =
Remember me
