ಚಿತ್ತೋರ್‌ಗಢ (ಉತ್ತರ ಪ್ರದೇಶ):ಮೃತದೇಹವನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ ಒಂದು ದಾರಿ ಬದಿ ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದು ಐವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬಡೋದಿ ಜಿಲ್ಲೆಯ ಗೋಪಿಗಂಜ್ ನಲ್ಲಿ ನಡೆದಿದೆ.
ಜಿಲ್ಲೆಯ ಗೋಪಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ವಾರಾಣಸಿ-ಪ್ರಯಾಗರಾಜ್ ಹೆದ್ದಾರಿಯಲ್ಲಿ ಅಮಾವಾ ಅಂಡರ್‌ಪಾಸ್ ಬಳಿ ನಿಂತಿದ್ದ ಟ್ರಕ್‌ಗೆ ಆಂಬ್ಯುಲೆನ್ಸ್‌ ಡಿಕ್ಕಿ ಹೊಡೆದಿದೆ. ದಟ್ಟ ಮಂಜಿನಿಂದಾಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಬ್ಯುಲೆನ್ಸ್ ಮೃತದೇಹವನ್ನು ಪಶ್ಚಿಮ ಬಂಗಾಳದ ಅಸನ್ಸೋಲ್‌ನಿಂದ ರಾಜಸ್ಥಾನದ ಚಿತ್ತೋರ್‌ಗಢಕ್ಕೆ ಸಾಗಿಸುತ್ತಿತ್ತು. ಕೋಲ್ ಇಂಡಿಯಾ ಲಿಮಿಟೆಡ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವಿಪಿನ್ ಪಾಲ್ ಸಿಂಗ್ (30) ಅವರ ಮೃತದೇಹವನ್ನು ಅವರ ಹಿರಿಯ ಸಹೋದರ ನವನೀತ್ ಸಿಂಗ್ ಮತ್ತು ಅವರ ಸ್ನೇಹಿತ ರಾಜ್‍ವೀರ್ ಮತ್ತು ಇನ್ನಿಬ್ಬರು ಸಾಗಿಸುತ್ತಿದ್ದರು. ಚಾಲಕ ಸೇರಿದಂತೆ ಆಂಬುಲೆನ್ಸ್‌ನಲ್ಲಿದ್ದ ಎಲ್ಲ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆಂಬುಲೆನ್ಸ್ ಅತಿ ವೇಗವಾಗಿ ಚಲಿಸುತ್ತಿದ್ದುದು ಈ ಅನಾಹುತಕ್ಕೆ ಕಾರಣವಾಗಿದೆ. ಬಡೋದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅತ್ತ ಗಣರಾಜ್ಯೋತ್ಸವ ಪರೇಡ್‌- ಇತ್ತ ಒಪ್ಪಂದ ಮೀರಿ ಬ್ಯಾರಿಕೇಡ್‌ ಮುರಿಯುತ್ತಿರುವ ರೈತರು

ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪ್ರತಿಭಟನಾ‌ ಪರೇಡ್‌: ಪ್ರತಿ ಹಳ್ಳಿಯಿಂದಲೂ ಟ್ರ್ಯಾಕ್ಟರ್‌

ಸಚಿವ ಅಶೋಕ್‌ ಪಿ.ಎ ಲಂಚ ಕೇಳಿದ್ರು, ನನ್ ಬಳಿ ಆಡಿಯೋ ಇದೆ ಎಂದ ಸಬ್‌ ರಿಜಿಸ್ಟ್ರಾರ್‌ ಹೀಗೂ ಹೇಳಿದ್ರು…

ರಾಹುಲ್‌ಗಾಂಧಿ ಬಾಯಲ್ಲಿ ‘ನಿಕ್ಕರ್‌ವಾಲಾ’… ಟ್ರಾನ್ಸ್‌ಲೇಟರ್‌ ಬಾಯಲ್ಲಿ ‘ಲಿಕ್ಕರ್‌ವಾಲಾ’ ಆದಾಗ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
