ಮುಂಬೈ:ಪತಿ-ಪತ್ನಿಯರಾಗಿರಲ್ಲ, ಮಗನಿಗೆ ತಂದೆ-ತಾಯಿಯಾಗಿರುತ್ತೇವೆ ಎನ್ನುವ ಮೂಲಕ ಆಮೀರ್‌ ಖಾನ್‌ ಮತ್ತು ಅವರ ಎರಡನೆಯ ಪತ್ನಿ ಕಿರಣ್‌ ರಾವ್‌ ಕೆಲ ತಿಂಗಳ ಹಿಂದೆ ವಿಚ್ಛೇದನ ಪಡೆದು ಭಾರಿ ಸುದ್ದಿಯಾಗಿದ್ದರು. ಇದರ ನಡುವೆಯೇ ಆಮೀರ್‌ ಖಾನ್‌ ಮೂರನೆಯ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಹಳ ಸದ್ದು ಮಾಡಿತ್ತು. ತಮ್ಮ ಮಗಳ ವಯಸ್ಸಿನ ಯುವತಿಯ ಜತೆ ಅವರು ಮದುವೆಯಾಗುವ ಬಗ್ಗೆ ಹಲವಾರು ಸುದ್ದಿಗಳು ಬಂದಿದ್ದು, ಅದನ್ನು ನಟ ಅಲ್ಲಗಳೆದೂ ಇರಲಿಲ್ಲ.
ಸದ್ಯ ಆ ಮದುವೆಯ ವಿಷಯವನ್ನು ಅಲ್ಲಿಗೇ ಬಿಟ್ಟಿರುವ ನಟ ಆಮೀರ್‌ ಖಾನ್‌ ಮತ್ತು ಅವರ ವಿಚ್ಛೇದಿತ ಪತ್ನಿ ಕಿರಣ್‌ ಮತ್ತೆ ಒಂದಾಗಿದ್ದಾರೆ! ಇಬ್ಬರೂ ಒಟ್ಟಿಗೇ ಇರುವ ಫೋಟೋಗಳನ್ನು ಅವರು ಶೇರ್‌ ಮಾಡಿಕೊಂಡು ಅಭಿಮಾನಿಗಳು ಸೇರಿದಂತೆ ಇತರರನ್ನು ಅಚ್ಚರಿಗೊಳಿಸಿದ್ದು, ಇದಕ್ಕೆ ಥಹರೇವಾರಿ ಕಮೆಂಟ್‌ಗಳು ಬರುತ್ತಿವೆ.
ಅಷ್ಟಕ್ಕೂ ಇಂಥದ್ದೊಂದು ನಿರ್ಧಾರದ ಹಿಂದಿದೆ ಚಿತ್ರ ನಿರ್ಮಾಣದ ಉದ್ದೇಶವಂತೆ. 2011ರಲ್ಲಿ ಬಿಡುಗಡೆಯಾಗಿದ್ದ ಬಹಳ ಪ್ರಸಿದ್ಧಿ ಪಡೆದ ಚಿತ್ರ ‘ಧೋಬಿ ಘಾಟ್​’. ಅದರ ನಿರ್ದೇಶನ ಮಾಡಿದ್ದವರು ಆಮೀರ್‌ ಪತ್ನಿ ಕಿರಣ್​ ರಾವ್​. ಇದೇ ಅವರ ಕೊನೆಯ ಚಿತ್ರವಾಗಿತ್ತು. ಅದಾದ ಬಳಿಕ ಮತ್ತೆ ಅವರು ಯಾವುದೇ ಚಿತ್ರವನ್ನು ನಿರ್ದೇಶನ ಮಾಡಿರಲಿಲ್ಲ. ಇದೀಗ ಪತಿಯಿಂದ ವಿಚ್ಛೇದನ ಪಡೆದ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳುವ ಮನಸ್ಸು ಮಾಡಿದ್ದಾರೆ. ಇದೇ ಈ ದಂಪತಿಯನ್ನು ಒಂದು ಮಾಡಿದೆ!
ಈಗ ಚಿತ್ರವೊಂದರ ನಿರ್ದೇಶನಕ್ಕೆ ಕೈ ಹಾಕಿರುವ ಕಿರಣ್‌, ಅದರ ಶೂಟಿಂಗ್ ಅನ್ನು ಪುಣೆಯಲ್ಲಿ ಆರಂಭಗೊಳಿಸಿರುವುದಾಗಿ ‘ಬಾಲಿವುಡ್‌ ಹಂಗಾಮಾ’ ವರದಿ ಮಾಡಿದೆ. ಜನವರಿ 20ರವರೆಗೆ ಪುಣೆಯ ಸಮೀಪ ಶೂಟಿಂಗ್​ ನಡೆಯಲಿದೆ. ಆ ಬಳಿಕ ಮಹಾರಾಷ್ಟ್ರದ ನಾನಾ ಕಡೆಗಳಲ್ಲಿ ಚಿತ್ರೀಕರಣ​ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಏಪ್ರಿಲ್​ ವೇಳೆಗೆ ಚಿತ್ರದ ಶೂಟಿಂಗ್​ ಪೂರ್ಣಗೊಳಿಸುವ ನಿರ್ಧಾರವನ್ನು ಸಿನಿಮಾ ತಂಡ ಹೊಂದಿದೆ ಎನ್ನಲಾಗಿದೆ.
ಕಾಮಿಡಿ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ಈ ಚಿತ್ರದ ಸಂಪೂರ್ಣ ಜವಾಬ್ದಾರಿಯನ್ನು ಆಮೀರ್‌ ಖಾನ್‌ ಹೊತ್ತುಕೊಂಡಿದ್ದಾರೆ. ಆದ್ದರಿಂದ ಈ ದಂಪತಿ ಮತ್ತೆ ಒಂದಾಗಿದ್ದಾರೆ. ಈ ನಡುವೆಯೇ ಆಮಿರ್ ಖಾನ್​ ನಟನೆಯ ‘ಲಾಲ್​ ಸಿಂಗ್ ಛಡ್ಡಾ’ ಚಿತ್ರವನ್ನು ಈ ದಂಪತಿ ಒಟ್ಟಾಗಿ ನಿರ್ಮಾಣ ಮಾಡುತ್ತಿದ್ದು, ಕರೊನಾ ಕಾರಣದಿಂದ ಮುಂದೂಡಲ್ಪಡದಿದ್ದರೆ ಏಪ್ರಿಲ್​ 14ರಂದು ತೆರೆಗೆ ಬರುವ ನಿರೀಕ್ಷೆ ಇದೆ.
ಲಾಂಗು, ಮಚ್ಚು ಪೋಸ್‌ ಸಿನಿಮಾದಲ್ಲಿ ಇರಲಿ… ಹುಡುಗಿಯರನ್ನು ಇಂಪ್ರೆಸ್‌ ಮಾಡಲು ಹೋದ್ರೆ ಕಂಬಿ ಎಣಿಸಬೇಕಾದೀತು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − one =
Remember me
