ವಾಷಿಂಗ್ಟನ್:ಅಮೆರಿಕದ ಚುನಾವಣೆಯ ಇದುವರೆಗಿನ ಫಲಿತಾಂಶದಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಗೆಲುವಿನ ಸನೀಹದಲ್ಲಿದ್ದಾರೆ. ಹಾಲಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಜೋ ಬಿಡನ್‌ ಅವರಿಗೆ ಪೈಪೋಟಿ ನೀಡುತ್ತಲೇ ಇದ್ದರೂ, ಇಲ್ಲಿಯವರೆಗಿನ ಫಲಿತಾಂಶವನ್ನು ಗಣನೆಗೆ ತೆಗೆದುಕೊಂಡರೆ ಅದೃಷ್ಟ ಅವರಿಗೆ ಒಲಿಯುವಂತೆ ತೋರುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಇದೀಗ ಅಮೆರಿಕದ ರಸ್ತೆ ರಸ್ತೆಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಟ್ರಂಪ್‌ ಬೆಂಬಲಿಗರಿಂದ ಗಲಾಟೆ ಶುರುವಾಗಿದೆ.
ಡೊನಾಲ್ಡ್‌ ಟ್ರಂಪ್ ಬಹುಮತ ಮ್ಯಾಜಿಕ್ ನಂಬರ್ ಸನಿಹಕ್ಕೂ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳನ್ನು ಇದು ಕೆರಳಿಸಿದೆ.
ಇದನ್ನೂ ಓದಿ:ಚಿತ್ರ ನಿರ್ದೇಶಕಿ ಮೀರಾ ನಾಯರ್‌ ಪುತ್ರನಿಗೆ ಒಲಿದ ಅಮೆರಿಕ ಚುನಾವಣೆ
ಟ್ರಂಪ್ ಹಿನ್ನಡೆ ಹಿನ್ನೆಲೆಯಲ್ಲಿ ಈಗಾಗಲೇ ಅಮೆರಿಕದೆಲ್ಲೆಡೆ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಟ್ರಂಪ್ ಎಲ್ಲಿ ಹಿಂದುಳಿದಿದ್ದಾರೋ ಅಲ್ಲಿ ಮರು ಎಣಿಕೆ ಮಾಡಬೇಕೆಂದು ಬೆಂಬಲಿಗರು ಒತ್ತಾಯಿಸುತ್ತಿದ್ದು, ಹಿಂಸಾಚಾರ ಉಂಟಾಗಿದೆ.
ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ (ಭಾರತೀಯ ಕಾಲಮಾನ ಗುರುವಾರ ಮಧ್ಯಾಹ್ನ 1 ಗಂಟೆವರೆಗೆ) ಡೊನಾಲ್ಡ್‌ ಟ್ರಂಪ್ ಅವರು ಬಹುಮತ ಪಡೆಯಲು ಕನಿಷ್ಠ 56 ಎಲೆಕ್ಟ್ರೋಲ್ ಮತಗಳು ಬೇಕು. ಆದರೆ ಜೋ ಬಿಡೆನ್ ಅವರು ಬಹುಮತ ಗಿಟ್ಟಿಸಲು ಕೇವಲ 6 ಎಲೆಕ್ಟ್ರೋಲ್ ಮತಗಳು ಸಾಕು. ಆದ್ದರಿಂದ ಇಬ್ಬರ ನಡುವೆ ಭಾರಿ ಅಂತರವಿರುವ ಹಿನ್ನೆಲೆಯಲ್ಲಿ ಸದ್ಯದ ಲೆಕ್ಕಾಚಾರದಲ್ಲಿ ಜೋ ಬಿಡನ್‌ ಗೆಲುವಿನ ನಗು ಬೀರುತ್ತಿದ್ದಾರೆ.
ನವೆಡಾ ರಾಜ್ಯದಲ್ಲಿ 6 ಎಲೆಕ್ಟ್ರೋಲ್ ಮತಗಳಿದ್ದು, ಈ ಪೈಕಿ 2ರಲ್ಲಿ ಬಿಡೆನ್ ಮುನ್ನಡೆಯಲ್ಲಿದ್ದಾರೆ. ಇನ್ನುಳಿದಂತೆ ಜಾರ್ಜಿಯಾ, ನಾರ್ಥ್ ಕೆರೋಲಿನಾ, ಪೆನ್ಸೆಲ್ವೇನಿಯಾ ಹಾಗೂ ಅಲಾಸ್ಕಾ ರಾಜ್ಯಗಳಲ್ಲಿ ಡೊನಾಲ್ಡ್‌ ಟ್ರಂಪ್ ಮುನ್ನಡೆಯಲ್ಲಿದ್ದಾರೆ. ಆದರೆ ಇಲ್ಲಿಯೂ ಎಲೆಕ್ಟ್ರೋಲ್ ಮತಗಳು ಮಿಶ್ರ ಹಂಚಿಯಾಗುವ ಸಾಧ್ಯತೆಗಳಿವೆ.
ಮತ ಎಣಿಕೆ ಪ್ರಗತಿಯಲ್ಲಿರುವ ಐದೂ ರಾಜ್ಯಗಳ ಎಲ್ಲಾ ಎಲೆಕ್ಟ್ರೋಲ್ ಮತಗಳೂ ಟ್ರಂಪ್‌ ಅವರಿಗೇ ಬಂದರೂ ಮತ್ತೊಮ್ಮೆ ಅವರು ಅಧ್ಯಕ್ಷ ಪದವಿಗೆ ಏರಲು ಸಾಧ್ಯವಿಲ್ಲದಂಥ ಪರಿಸ್ಥಿತಿ ಇದೀಗ ಎದುರಾಗಿದೆ.
ಬೆದರಿಕೆಗೆ ₹1 ಸಾವಿರ, ಕೊಲೆ ಮಾಡಲು ₹55 ಸಾವಿರ… ಹಲವು ‘ಸೇವೆ’ ನಮ್ಮಲ್ಲಿ ಲಭ್ಯ…

ಪಾಕ್‌ನಲ್ಲಿ ಮತ್ತೆ ಹಿಂದೂ ದೇವಾಲಯಗಳು ಧ್ವಂಸ- ಹಿಂದೂ ಕುಟುಂಬಗಳ ಮೇಲೆ ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 13 =
Remember me
