ವಾಷಿಂಗ್ಟನ್: ಕರೊನಾ ವೈರಸ್‌, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇದಾಗಲೇ ಲಕ್ಷಾಂತರ ಸಾಫ್ಟ್‌ವೇರ್‌ ಇಂಜಿನಿಯರ್‌ಗಳು ಕೆಲಸ ಕಳೆದುಕೊಂಡಿರುವ ಬೆನ್ನಲ್ಲೇ, ಭಾರತೀಯ ಟೆಕಿಗಳಿಗೆ ಆಘಾತಕಾರಿ ವಿಷಯವೊಂದು ಅಮೆರಿಕದಿಂದ ಬಂದಿದೆ.
ಅದೇನೆಂದರೆ ಭಾರತೀಯ ನೌಕರರಿಗೆ ವರದಾನವಾಗಿದ್ದ ಎಚ್1ಬಿ ವೀಸಾ ನಿಯಮಾವಳಿಗೆ ಬದಲಾವಣೆ ತರಲಾಗಿದೆ. ಈ ಮೂಲಕ ಎಚ್1ಬಿ ವೀಸಾದಾರರಿಗೆ ಕೆಲಸ ನಿರ್ಬಂಧಿಸುವ ಆದೇಶಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ. ಫೆಡರಲ್ ಸೇವೆಯಲ್ಲಿ ಎಚ್1ಬಿ ವೀಸಾ ಹೊಂದಿರುವವರ ನೇಮಕವನ್ನು ತಮ್ಮ ಸರ್ಕಾರ ನಿಷೇಧಿಸಿದೆ ಎಂದು ಟ್ರಂಪ್‌ ಹೇಳಿದ್ದಾರೆ.
ಅಮೆರಿಕದಲ್ಲಿರುವ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ನೀಡಬೇಕು ಎನ್ನುವ ನಿಟ್ಟಿನಲ್ಲಿ ಟ್ರಂಪ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಆದ್ದರಿಂದ ಎಚ್ 1ಬಿ ವೀಸಾ ಹೊಂದಿರುವವರನ್ನು ನೇಮಕ ಮಾಡಿಕೊಳ್ಳದಂತೆ ವಿವಿಧ ಕಂಪನಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅದರಲ್ಲಿಯೂ ಮುಖ್ಯವಾಗಿ ಸರ್ಕಾರದ ವ್ಯಾಪ್ತಿಯ ಎಲ್ಲಾ ಇಲಾಖೆಗಳಲ್ಲಿ ಕೌಶಲ್ಯ ಆಧಾರಿತ ಹುದ್ದೆಗಳಿಗೆ ಮೂಲ ಅಮೆರಿಕನ್ನರಿಗೇ ಉದ್ಯೋಗ ನೀಡುವಂತೆ ಸೂಚಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅಧ್ಯಕ್ಷ ಟ್ರಂಪ್‌, ‘ಮೂಲ ಅಮೆರಿಕನ್ನರಿಗೆ ನೆರವಾಗುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ. ಎಚ್‌1ಬಿ ವೀಸಾ ನಿಯಮಾವಳಿಗಳಲ್ಲಿ ಬದಲಾವಣೆ ತರುವುದಾಗಿ ತುಂಬಾ ಹಿಂದೆಯೇ ಹೇಳಿದ್ದು, ಅದರಂತೆ ನಡೆದುಕೊಳ್ಳಲಾಗಿದೆ.
ಇದನ್ನೂ ಓದಿ:ಬಳಕೆದಾರರ ಮಾಹಿತಿ ಕಳುವು: ಟ್ವಿಟರ್‌ಗೆ 1,876 ಕೋಟಿ ರೂ ದಂಡ!
ಇದರಿಂದಾಗಿ ಅಮೆರಿಕನ್ನರಿಗೆ ಮಾತ್ರ ಅವಕಾಶ ನೀಡಲಾಗುವುದು. ಕಡಿಮೆ ಸಂಬಳ ಪಡೆಯುವ ಅಮೆರಿಕನ್ ಕೆಲಸಗಾರರ ರಕ್ಷಣೆಗಾಗಿ ಹೆಚ್ಚು ಸಂಭಾವನೆ ಪಡೆಯುವ ಪ್ರತಿಭೆಗಳಿಗೆ ಮಾತ್ರ ಎಚ್ -1 ಬಿ ವೀಸಾ ಬಳಸುವಂತೆ ಆದೇಶದಲ್ಲಿ ಹೇಳಲಾಗಿದೆ. ಇದರಿಂದ ಅಮೆರಿಕದಲ್ಲಿ ಸಣ್ಣ ಪುಟ್ಟ ಪ್ರಮುಖ ಹುದ್ದೆಗಳು ವಿದೇಶಗರ ಪಾಲಾಗುವುದನ್ನು ತಪ್ಪಿಸಬಹುದಾಗಿದೆ ಎಂದಿದ್ದಾರೆ.
ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಸರ್ಕಾರದ ವ್ಯಾಪ್ತಿಯ ಎಲ್ಲಾ ಇಲಾಖೆಗಳಲ್ಲಿ ಕೌಶಲ ಆಧಾರಿತ ಹುದ್ದೆಗಳಿಗೆ ಅಮೆರಿಕ ಪ್ರಜೆಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆದ್ದರಿಂದ ಎಚ್1ಬಿ ವೀಸಾ ಹೊಂದಿದವರಿಗೆ ಈ ಹುದ್ದೆಗಳು ಸಿಗುವುದಿಲ್ಲ. ಫೆಡರಲ್ ಸೇವೆಯಲ್ಲಿ ಎಚ್‌1 ಬಿ ವೀಸಾ ಹೊಂದಿರುವವರ ನೇಮಕವನ್ನು ತಮ್ಮ ಸರ್ಕಾರ ನಿಷೇಧಿಸಿದೆ. ಈ ಇಲಾಖೆಗಳಿಗೆ ತಾಂತ್ರಿಕ ನೆರವು ಒದಗಿಸುತ್ತಿದ್ದ ಭಾರತ ಮೂಲದ ಐಟಿ ಸಂಸ್ಥೆಗಳಿಗೂ ಇದರಿಂದ ಭಾರಿ ಹೊಡೆತ ಬೀಳಲಿದೆ ಎಂದಿದ್ದಾರೆ ತಜ್ಞರು.
ಜೂನ್ 23 ರಂದು ಡೊನಾಲ್ಡ್ ಟ್ರಂಪ್ ಎಚ್ 1-ಬಿ ವೀಸಾಗಳನ್ನು ನೀಡುವುದನ್ನು ನಿಷೇಧಿಸಿದ್ದರು. ಇದರೊಂದಿಗೆ ಇತರ ವಿದೇಶಿ ಪ್ರಜೆಗಳಿಗೆ ಕೆಲಸದ ಪರವಾನಗಿ ನೀಡುವುದನ್ನು ನಿಷೇಧಿಸಿದರು. ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಅಮೆರಿಕನ್ ನಾಗರಿಕರ ಉದ್ಯೋಗವನ್ನು ಉಳಿಸಬೇಕೆಂದರೆ ಇದು ಅನಿವಾರ್ಯ ಎಂದಿದ್ದರು.(ಏಜೆನ್ಸೀಸ್‌)
ಬಾರ್‌ ಓಪನ್‌ ಆದ್ರೂ ಸ್ಯಾನಿಟೈಸರ್‌ ಹೀರಿ ಪಾರ್ಟಿ- ಕುಡುಕರ ಹೊಸರೂಪಕ್ಕೆ ಪೊಲೀಸರು ಸುಸ್ತು!

ಮದುವೆಯಾಗದೇ ಹುಚ್ಚನಾದವನಿಂದ ಬರ್ಬರವಾಗಿ ಕೊಲೆಯಾದರು ನಾಲ್ಕು ಮಂದಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + sixteen =
Remember me
