ಮುಂಬೈ:ಬಾಲಿವುಡ್ ನಟ ಅಮೀರ್ ಖಾನ್ ಅವರ ಮೊದಲ ಪತ್ನಿಯ ಮಗಳಾಗಿರುವ ಇರಾ ಖಾನ್‌ ನೂಪುರ್‌ ಶಿಖರೆ ಎಂಬ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದು, ಆತನ ಜತೆ ದೀಪಾವಳಿಯನ್ನು ಆಚರಿಸಿಕೊಂಡಿದ್ದಾಳೆ. ಇದರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಇರಾ ಖಾನ್ ರೇಷ್ಮೆ ಸೀರೆಯನ್ನು ಧರಿಸಿ ಪ್ರೇಮಿಯ ಜತೆ ದೀಪಾವಳಿ ಆಚರಿಸಿಕೊಂಡಿರುವ ಚಿತ್ರ ಇದಾಗಿದೆ. ನೂಪುರ್‌ ಶಿಖರೆ ಫಿಟ್‌ನೆಸ್ ತರಬೇತುದಾರರಾಗಿದ್ದಾನೆ.
ಇರಾ ತಮ್ಮಿಬ್ಬರ ಲವ್‌ ಸ್ಟೋರಿಯನ್ನು ಕಳೆದ ಫೆಬ್ರುವರಿಯಲ್ಲಿ ಪ್ರೇಮಿಗಳ ದಿನದ ಮುಂಚಿತವಾಗಿ ಬರುವ ‘ಪ್ರಾಮಿಸ್ ಡೇ’ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್‌ ಮೂಲಕ ಬಹಿರಂಗಗೊಳಿಸಿದ್ದಳು. ಕೆಲವು ಕಾರಣಗಳಿಂದ ನಾನು ಖಿನ್ನತೆಯಿಂದ ಬಳಲುತ್ತಿದ್ದೆ, ಜತೆಗೆ ಮಾನಸಿಕ ಆರೋಗ್ಯ ಸಮಸ್ಯೆ ಇದ್ದವು. ಇವೆಲ್ಲವನ್ನೂ ಸರಿ ಮಾಡಿ ನನ್ನ ಮನಸ್ಸನ್ನು ಹತೋಟಿಗೆ ಬಂದವನು ನೂಪುರ್‌ ಎಂದೂ ಆಕೆ ಬರೆದುಕೊಂಡಿದ್ದಳು.
ಇರಾಗೆ ಈಗ 24 ವರ್ಷ ವಯಸ್ಸು, ಈಕೆ ಅಮೀರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಮಗಳು, ಈ ದಂಪತಿಗೆ ಜುನೈದ್ ಎಂಬ ಮಗ ಕೂಡ ಇದ್ದಾನೆ. ಇರಾ ಖಾನ್ 2019 ರಲ್ಲಿ ‘ಯೂರಿಪಿಡ್ಸ್’ ಮೀಡಿಯಾ’ ಎಂಬ ಸ್ಟೇಜ್ ಪ್ರೊಡಕ್ಷನ್‌ ಜತೆಗೆ ನಿರ್ದೇಶನ ಲೋಕಕ್ಕೆ ಕಾಲಿಟ್ಟಿದ್ದಾಳೆ.


A post shared by Popeye ⚓ (@nupur_shikhare)

ನನ್ನ ಪತ್ನಿ ಕ್ರಿಕೆಟ್‌ನಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದಾಳೆ, ಅವಳನ್ನು ಅರೆಸ್ಟ್‌ ಮಾಡಿ ಎಂದು ಪತಿಯ ದೂರು

‘ನಾನು ಜಯಲಲಿತಾರ ಮಗಳು… ಮೈಸೂರಿನವಳು… ಸಾಕ್ಷಿ ಸಮೇತ ಸಾಬೀತು ಪಡಿಸುವೆ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
