ಶ್ರೀನಗರ:ತಮ್ಮ ಎರಡನೆಯ ಹಿಂದೂ ಪತ್ನಿಗೂ ವಿಚ್ಛೇದನ ನೀಡಿ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಆಮೀರ್‌ ಖಾನ್‌, ಡಿವೋರ್ಸ್‌ ಮಾಡಿದ ಪತ್ನಿಯ ಜತೆಗೇ ಜಮ್ಮುವಿಗೆ ತೆರಳಿದ್ದಾರೆ.ಕಿರಣ್‌ ರಾವ್‌ ಅವರ ಜತೆ ಜಮ್ಮು- ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಆಮೀರ್‌ ಖಾನ್‌ ಭೇಟಿಯಾಗಿದ್ದಾರೆ. ಇವರು ರಾಜ್ಯಪಾಲರನ್ನು ಭೇಟಿಯಾಗಿದ್ದು ಏಕೆ ಎಂಬ ಬಗ್ಗೆ ಎಲ್ಲೆಡೆ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.ನಂತರ ಈ ಬಗ್ಗೆ ಸ್ಪಷ್ಟಪಡಿಸಿರುವ ಆಮೀರ್‌ ಖಾನ್‌, ಜಮ್ಮು ಕೇಂದ್ರಾಡಳಿತ ಪ್ರದೇಶವನ್ನು ನೆಚ್ಚಿನ ಸಿನಿಮಾ ತಾಣವನ್ನಾಗಿಸುವ ಸಂಬಂಧ ಮಾತುಕತೆ ನಡೆಸಲು ರಾಜ್ಯಪಾಲರನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ.ಈ ಬಗ್ಗೆ ಮಾತುಕತೆ ನಡೆಸಲಾಗಿದೆ. ಜತೆಗೆ ಜಮ್ಮು- ಕಾಶ್ಮೀರದಲ್ಲಿ ಚಿತ್ರೀಕರಣಕ್ಕೆ ನೀಡಲಾದ ಹೊಸ ಪಾಲಿಸಿ ಬಗ್ಗೆ ಮಾತನಾಡಲಾಗಿದೆ ಎಂದು ತಿಳಿದುಬಂದಿದೆ.ಆಮೀರ್‌ ಖಾನ್‌ ಮತ್ತು ಕಿರಣ್‌ ರಾವ್‌ ಅವರು ಭೇಟಿಯಾಗಿದ್ದರು. ಚಿತ್ರೀಕರಣದ ಕುರಿತು ಮಾತನಾಡಲಾಗಿದೆ. ಕಾಶ್ಮೀರದಲ್ಲಿ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಹೊಸ ನಿಯಮ ಜಾರಿ ಮಾಡಲಾಗುವುದು. ಮತ್ತೆ ಜಮ್ಮಿ-ಕಾಶ್ಮೀರದ ವೈಭವವನ್ನು ಸಿನಿಮಾದಲ್ಲಿ ತೋರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ಟ್ವೀಟರ್‌ ಮೂಲಕ ತಿಳಿಸಿದ್ದಾರೆ.ಸದ್ಯ ಆಮೀರ್‌ ಖಾನ್‌ ಲಾಲ್‌ಸಿಂಗ್‌ ಚಡ್ಡಾ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಕಿರಣ್‌ ರಾವ್‌ ಅವರಿಗೆ ವಿಚ್ಛೇದನ ನೀಡಿದ್ದ ಅವರು ಇದು ಡಿವೋರ್ಸ್‌ ಅಷ್ಟೇ. ಆ ನಂತರವೂ ನಾವು ಸ್ನೇಹಿತರಾಗಿಯೇ ಇರುತ್ತೇವೆ ಎಂದಿದ್ದರು.
Met renowned film actor Aamir Khan and Kiran Rao today. We discussed new film policy of J&K, which will be released shortly. The discussion also focused on reviving J&K glory in Bollywood and making it a favourite film shooting destination.pic.twitter.com/k5qbekKKQ9— Office of LG J&K (@OfficeOfLGJandK)July 31, 2021
Met renowned film actor Aamir Khan and Kiran Rao today. We discussed new film policy of J&K, which will be released shortly. The discussion also focused on reviving J&K glory in Bollywood and making it a favourite film shooting destination.pic.twitter.com/k5qbekKKQ9
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − two =
Remember me
