ಮುಂಬೈ:ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಅವರು ತಮ್ಮ ಟ್ವಿಟರ್‌ನಲ್ಲಿ ನಿಗೂಢ ಮಾಹಿತಿ ಹಂಚಿಕೊಂಡಿದ್ದು, ಅದೀಗ ಅವರ ಅಭಿಮಾನಿಗಳ ತಲೆ ಕೆಡಿಸಿದೆ.
ಅನಾರೋಗ್ಯದ ನಿಮಿತ್ತ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಬಗ್ಗೆ ಈಚೆಗಷ್ಟೇ ಹೇಳಿಕೊಂಡಿದ್ದ ಅಮಿತಾಭ್‌ ಬಚ್ಚನ್‌ ಅವರು ನಿನ್ನೆ ಶನಿವಾರ ‘ಕುಛ್ ಜರೂರತ್ ಸೇ ಜ್ಯಾದಾ ಬಡ್ ಗಯಾ ಹೈ, ಕುಛ್‌ ಕಾಟ್ ನೇ ಪರ್ ಸುದರ್ನೆ ವಾಲಾ ಹೈ, ಜೀವನ್ ಕಲ್ ಕ್ಯಾ ಯೇ ಹೈ, ಕಲ್ ಹಿ ಪಥಾ ಚಲೇಗಾ ಕೈಸೇ ರಹೇ ವೇ (ಏನೋ ಒಂದು ಅಗತ್ಯವನ್ನು ಮೀರಿ ಬೆಳೆದುಬಿಟ್ಟಿದೆ. ಅದನ್ನು ಕತ್ತರಿಸಿದರೆ ಮಾತ್ರ ಸುಧಾರಿಸುವುದು ಸಾಧ್ಯವಾಲಿದೆ. ಇದು ಜೀವನದ ಭವಿಷ್ಯ, ನಾಳೆ ನಾವು ಹೇಗೆ ಇರುತ್ತೇವೆ ಎಂದು ನಾಳೆಯೇ ತಿಳಿಯುತ್ತದೆ) ಎಂದು ಬರೆದುಕೊಂಡಿದ್ದಾರೆ.
T 3827 – !!!!!! ?????
— Amitabh Bachchan (@SrBachchan)February 27, 2021

ಇದನ್ನು ಓದಿದ ಅಭಿಮಾನಿಗಳಿಗಳಿಗೆ ಬಿಗ್‌ ಬಿ ಆರೋಗ್ಯ ಸಮಸ್ಯೆಯ ಬಗ್ಗೆ ಎಲ್ಲಿಲ್ಲದ ಆತಂಕ ಶುರುವಾಗಿದೆ. ಇದಕ್ಕೂ ಮುನ್ನ ಅವರು, ತಮ್ಮ ಟ್ವಿಟರ್‌ ಖಾತೆಯಲ್ಲಿ ಆನಾರೋಗ್ಯ ಸಮಸ್ಯೆಇದೆ, ಶಸ್ತ್ರಚಿಕಿತ್ಸೆ ಆಗಬೇಕಿದೆ. ಹೆಚ್ಚು ಬರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಇದೀಗ ನಿಗೂಢವಾದ ಬರಹವೊಂದನ್ನು ಹಾಕಿರುವುದರಿಂದ ಅಭಿಮಾನಿಗಳು ನೂರಾರು ಪ್ರಶ್ನೆಗಳ ಸುರಿಮಳೆಯನ್ನೇಗೈದಿದ್ದಾರೆ.
T 3826 –कुछ ज़रूरत से ज़्यादा बढ़ गया है ; कुछ काटने पर सुधरने वाला है ;जीवन काल का कल है ये , कल ही पता चलेगा कैसे रहे वे❤️🌹
— Amitabh Bachchan (@SrBachchan)February 26, 2021

ಈ ಸಂದೇಶ ಶೇರ್‌ ಮಾಡಿರುವ ಕೆಲ ಗಂಟೆಗಳಲ್ಲಿಯೇ ಅಮಿತಾಭ್‌ ಬಚ್ಚನ್‌ ಇನ್ನೊಂದು ಟ್ವೀಟ್‌ ಮಾಡಿದ್ದು, ಅದರಲ್ಲಿ ಕೇವಲ ’!!!!! ?????’ ಎಂದಷ್ಟೇ ಬರೆದಿದ್ದಾರೆ.
ಒಟ್ಟಿನಲ್ಲಿ ಎಲ್ಲವೂ ನಿಗೂಢವಾಗಿದ್ದು, ತಮ್ಮ ಆರಾಧ್ಯ ದೈವ ನಟನ ಉತ್ತಮ ಆರೋಗ್ಯಕ್ಕಾಗಿ ಅಭಿಮಾನಿಳು ಪ್ರಾರ್ಥಿಸುತ್ತಿದ್ದಾರೆ.‘ ನಿಮ್ಮ ಜತೆ ನಾವಿದ್ದೇವೆ. ನಿಮ್ಮ ಆರೋಗ್ಯ ಶೀಘ್ರ ಸುಧಾರಿಸಲಿ. ನಿಮ್ಮ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇವೆ…’ ಹೀಗೆ ಅಭಿಮಾನಿಗಳ ಕಮೆಂಟ್‌ ಮೂಲಕ ಹಾರೈಸಿದ್ದಾರೆ.
VIDEO: 32 ಗಂಟೆ ರೈಲು ಟ್ರಾಲಿ ತಳ್ಳಿಕೊಂಡು ಊರು ಸೇರಿದ ರಾಜತಾಂತ್ರಿಕ ಕುಟುಂಬದ ಸದಸ್ಯರು!

ಉಗ್ರರ ದಾಳಿಗೂ ಜಗ್ಗದ, ಚೀನಾದ ದಾಖಲೆ ಮುರಿಯಲು ಸಜ್ಜಾಗುತಿದೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ

ಕಾನೂನಿನಾಚೆ ಮಾನವೀಯ ಆದೇಶ: ಅಪ್ರಾಪ್ತರ ಮದುವೆಗೆ ಕೋರ್ಟ್‌ನಿಂದ ಅಸ್ತು: ಲೈಂಗಿಕ ಸಂಪರ್ಕವಾದರೂ ನೀಡದ ಶಿಕ್ಷೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × one =
Remember me
