ನವದೆಹಲಿ:ಕರೊನಾ ಸೋಂಕಿನಿಂದಾಗಿ ಕಳೆದ ವಾರವಷ್ಟೇ ಆಸ್ಪತ್ರೆಗೆ ದಾಖಲಾಗಿ, ಗುಣಮುಖರಾಗಿ ಬಂದಿದ್ದ ಗೃಹ ಸಚಿವ ಅಮಿತ್‌ ಷಾ ಅವರಿಗೆ ಪುನಃ ಅನಾರೋಗ್ಯ ಸಮಸ್ಯೆ ಉಂಟಾಗಿದೆ.
ಆಯಾಸ ಮತ್ತು ಎದೆನೋವಿನಿಂದ ಬಳಲುತ್ತಿರುವ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ದಾಖಲು ಮಾಡಲಾಗಿದೆ.
ಇವರ ಆರೋಗ್ಯ ಸ್ಥಿರವಾಗಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಅತ್ಯಾಚಾರಿಗೆ ಗಲ್ಲು: ಪೊಲೀಸ್‌ ಠಾಣೆಯಲ್ಲಿ ದೀಪಗಳ ಅಲಂಕಾರ, ಪಟಾಕಿ ಸಿಡಿಸಿ ಸಂಭ್ರಮ
ಅಮಿತ್‌ ಷಾ ಅವರು ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್‌ಗೆ ಒಳಗಾಗಿದ್ದರು ಮತ್ತು ಪರೀಕ್ಷಾ ಫಲಿತಾಂಶಗಳು ಅವರ ಎದೆಯಲ್ಲಿ ಸ್ವಲ್ಪ ಸೋಂಕು ಇದೆ ಎಂದು ತಿಳಿದುಬಂದಿದೆ. ಪ್ರಸ್ತುತ ಎಐಎಂಎಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರ ನೇತೃತ್ವದ ವೈದ್ಯಕೀಯ ತಂಡದವರಿಂದ ನೋಡಿಕೊಳ್ಳಲಾಗುತ್ತಿದೆ.
ಕಳೆದ ಜನವರಿಯಲ್ಲಿ ಎಚ್‌1ಎನ್‌1 ಸೋಂಕಿಗೆ ಒಳಗಾಗಿದ್ದ ಅಮಿತ್‌ ಷಾ ಅವರು, ಅದರಿಂದ ಗುಣಮುಖರಾಗಿ ಬಂದಿದ್ದರು. ನಂತರ ಕರೊನಾ ಸೋಂಕಿಗೆ ಒಳಗಾಗಿದ್ದರು.
ಆಗಸ್ಟ್‌ 2ರಂದು ಕರೊನಾದ ಸಾಮಾನ್ಯ ಲಕ್ಷಣಗಳು ಇದ್ದ ಹಿನ್ನೆಲೆಯಲ್ಲಿ ತಾವು ಆಸ್ಪತ್ರೆಗೆ ದಾಖಲಾಗುತ್ತಿರುವುದಾಗಿ ಅವರು ಟ್ವೀಟ್‌ ಮಾಡಿದ್ದರು. ಆಗಸ್ಟ್‌ 14ರಂದು ಕರೊನಾ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದರು. ಸದ್ಯ ಹೋಂ ಐಸೋಲೇಷನ್‌ನಲ್ಲಿ ಕೆಲ ದಿನ ಇರುವುದಾಗಿ ಹೇಳಿದ್ದರು. ಆದರೆ ಈ ನಡುವೆಯೇ, ಇದೀಗ ಮತ್ತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ವರ್ಕ್‌ ಫ್ರಂ ಹೋಮ್‌ ಮಾಡುತ್ತಿರುವಿರಾ? ನಿಮಗೆ ಬೀಳಬಹುದು ಹೆಚ್ಚುವರಿ ತೆರಿಗೆ!

ಮೂರೇ ವಾರದಲ್ಲಿ ನಿರ್ಮಾಣವಾಯ್ತು 180 ಅಡಿ ಸೇತುವೆ- 20 ಹಳ್ಳಿಗರ ನಿಟ್ಟುಸಿರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 12 =
Remember me
