ಪ್ರಯಾಗ್ ರಾಜ್ (ಉತ್ತರಪ್ರದೇಶ):ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅವರ ಸಾವಿನ ರಹಸ್ಯ ಇನ್ನೂ ಬಗೆಹರಿಯುತ್ತಿಲ್ಲ. ಇವರ ಸಾವಿನ ಸುತ್ತಲೂ ಹಲವಾರು ಅನುಮಾನಗಳು ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಈ ಸಾವಿನ ರಹಸ್ಯ ಬಗೆಹರಿಸುವಂತೆ ತನಿಖೆಯನ್ನು ಕೇಂದ್ರ ಸರ್ಕಾರ ಸಿಬಿಐಗೆ ವಹಿಸಿದೆ.
ಸ್ವಾಮೀಜಿ ಕಳೆದ ಸೋಮವಾರ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರೇ ಬರೆದಿದ್ದಾರೆ ಎನ್ನಲಾದ ಏಳೆಂಟು ಪುಟಗಳಷ್ಟು ಬರೆದಿರುವ ಡೆತ್ ನೋಟ್ ಕೂಡ ಸಿಕ್ಕಿದ್ದು, ಅದರಲ್ಲಿ ‘ಇದುವರೆಗೆ ನಾನು ಹೆಮ್ಮೆಯಿಂದ ಬದುಕಿದ್ದೇನೆ, ಹೆಮ್ಮೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ’ ಎಂದು ಉಲ್ಲೇಖವಾಗಿದೆ. ‘ಶಿಷ್ಯ ಆನಂದ ಗಿರಿ ನನಗೆ ಅವಮಾನಗೊಳಿಸಲು ಪ್ರಯತ್ನ ಪಟ್ಟಿದ್ದರು. ಯುವತಿಯೊಂದಿಗೆ ನಾನು ಇರುವ ಫೋಟೋ ಒಂದನ್ನು ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು. ಇದು ಯಾವುದೋ ಯುವತಿಯ ಫೋಟೋವನ್ನು ನನ್ನ ಫೋಟೋ ಜತೆ ಮಾರ್ಫಿಂಗ್‌ (ನಕಲಿ ಮಾಡಿರುವುದು) ಮಾಡಲಾಗಿದೆ. ಇದೇ ನಕಲಿ ಫೋಟೋ ಇಟ್ಟುಕೊಂಡು ಅದನ್ನು ಸಾರ್ವಜನಿಕ ವಲಯದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದರು. ಆನಂದ ಗಿರಿ ಕಂಪ್ಯೂಟರ್​ನಲ್ಲಿ ಇವೆಲ್ಲಾ ಫೋಟೋಗಳು ಇವೆ. ನಾನು ಸಮಾಜದಲ್ಲಿ ಘನತೆಯಿಂದ ಬದುಕಿದ ವ್ಯಕ್ತಿ. ಈ ಅವಮಾನ ತಾಳಲಾರೆನು. ಹಾಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಬರೆಯಲಾಗಿದೆ.
ಆದರೆ ಆನಂದಗಿರಿಯವರು ಡೆತ್‌ನೋಟ್‌ ಬರೆದಿರುವುದು ನನ್ನ ಗುರುವಲ್ಲ. ಬದಲಿಗೆ ಅದು ಯಾರೋ ಮಾಡಿರುವ ಷಡ್ಯಂತ್ರ. ಗುರೂಜಿ ಅವರಿಂದ ಕೆಲವು ಮಂದಿ ಹಣ ಪಡೆಯುತ್ತಿದ್ದರು. ಅವರು ಪತ್ರದಲ್ಲಿ ನನ್ನ ಹೆಸರು ಬರೆದಿದ್ದಾರೆ. ಗುರೂಜಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಜೀವನದಲ್ಲಿ ಎಂದೂ ಪತ್ರಬರೆದವರಲ್ಲ, ಪತ್ರದಲ್ಲಿರುವ ಕೈ ಬರಹದ ಬಗ್ಗೆ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದರು.
ಇದೀಗ ಅವರ ಸಾವಿನ ನಂತರ ಮಾಡಿರುವ ಚಿತ್ರೀಕರಣದಲ್ಲಿಯೂ ಕೆಲವೊಂದು ಸಂದೇಹ ಎನಿಸುವ ಅಂಶಗಳು ಪತ್ತೆಯಾಗಿವೆ. ಅದೇನೆಂದರೆ, ಮಹಾಂತ ನರೇಂದ್ರ ಗಿರಿ ಅವರ ಮೃತದೇಹವನ್ನು ನೇಣಿನಿಂದ ಬಿಡಿಸಿ ನೆಲದ ಮೇಲೆ ಇರಿಸುವ ಸಂದರ್ಭದಲ್ಲಿ ಕುಣಿಕೆಯ ಒಂದು ಭಾಗ ಫ್ಯಾನ್​ಗೆ ಸಿಕ್ಕಿಹಾಕಿಕೊಂಡಿದೆ. ಆದರೆ ಅಚ್ಚರಿ ಎಂದರೆ ಆ ಸಮಯದಲ್ಲಿ ಫ್ಯಾನ್‌ ಆನ್ ಮೋಡ್‌ನಲ್ಲಿ ಇತ್ತು. ಇದನ್ನು ಗಮನಿಸಿದ ಪೊಲೀಸ್ ಇನ್ಸ್​ಪೆಕ್ಟರ್​ ಜನರಲ್​ ಕೆಪಿ ಸಿಂಗ್​, ಫ್ಯಾನ್ ಯಾಕೆ ತಿರುಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಸ್ಥಳದಲ್ಲಿದ್ದ ಮಹಾಂತ್ ಶಿಷ್ಯರೊಬ್ಬರು, ಯಾರೋ ಫ್ಯಾನ್​ ಸ್ವಿಚ್​ ಆನ್ ಮಾಡಿದ್ದಾರೆ ಎಂದಿದ್ದಾರೆ. ಅದ್ಯಾರು ಫ್ಯಾನ್‌ ಆನ್‌ ಮಾಡಿದ್ದು? ಅಷ್ಟು ಅವಸರವೇನಿತ್ತು? ಇದರಲ್ಲೇನೋ ರಹಸ್ಯವಿದೆ ಎಂಬ ಬಗ್ಗೆ ತನಿಖಾಧಿಕಾರಿಗಳಿಗೆ ಸಂದೇಹ ಶುರುವಾಗಿದೆ.
ಈ ನಡುವೆಯೇ ಸಿಬಿಐಗೆ ಪ್ರಕರಣ ಒಪ್ಪಿಸುವಂತೆ ಉತ್ತರ ಪ್ರದೇಶ ಸರ್ಕಾರ ಕೂಡ ಕೇಂದ್ರವನ್ನು ಮನವಿ ಮಾಡಿಕೊಂಡಿತ್ತು. ಅದರಂತೆ ಇದೀಗ ಪ್ರಕರಣ ಸಿಬಿಐಗೆ ವಹಿಸಲಾಗಿತ್ತು. ತನಿಖೆಯಿಂದ ಸತ್ಯಾಂಶ ಬಯಲಾಗಬೇಕಿದೆ.
ಸ್ನಾನ ಅಂದ್ರೆ ಹೆಂಡ್ತಿಗೆ ಆಗಲ್ಲ, ಅವಳ ಜತೆ ಮಲಗಲಾರೆ- ತಲಾಖ್‌ ಬೇಕು: ಕೋರ್ಟ್‌ನಲ್ಲಿ ಪತಿ ಅಳಲು

ಮನಸ್ಸಿದ್ದರೆ ವಯಸ್ಸಿನ ಹಂಗೇಕೆ? ಬಾಳ ಇಳಿ ಸಂಜೆಯಲ್ಲಿ ಜತೆಯಾದರು- ಮಗನೇ ಮಾಡಿಸಿದ ಅಪ್ಪನ ಮದುವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
