ವಿಜಯನಗರ:ಆಂಧ್ರಪ್ರದೇಶದ ಕೃಷ್ಣಪಟ್ಟಣಂ ಎಂದರೆ ಇದೀಗ ದೇಶ ಮಾತ್ರವಲ್ಲದೇ ವಿದೇಶಿಗರೂ ಕಣ್ಣುಹಾಯಿಸುತ್ತಾರೆ. ಅದಕ್ಕೆ ಕಾರಣ, ನಾಟಿ ವೈದ್ಯ ಆನಂದಯ್ಯನವರ ಆಯುರ್ವೇದ ಕರೊನಾ ಔಷಧ. ಲಕ್ಷಾಂತರ ಮಂದಿ ಜೀವ ಕಾಪಾಡಿದ ಈ ಉಚಿತ ಔಷಧಕ್ಕೆ ಇದಾಗಲೇ ಆಂಧ್ರದಲ್ಲಿ ಹಲವು ಅಡೆತಡೆಗಳು ಬಂದಿದ್ದವು. ಈ ಔಷಧ ವಿತರಣೆ ಹತ್ತಿಕ್ಕಲು ಪ್ರಯತ್ನಗಳೂ ನಡೆದವು, ಆನಂದಯ್ಯನವರಿಗೆ ಜೀವ ಬೆದರಿಕೆಗಳೂ ಬಂದವು.
ಆದರೆ ಇದೀಗ ನ್ಯಾಯಾಲಯದ ಅಂಗಳಕ್ಕೂ ಹೋಗಿ ಈ ಔಷಧ ಜಯಭೇರಿ ಬಾರಿಸಿದೆ. ಆಂಧ್ರಪ್ರದೇಶದ ಸರ್ಕಾರ ಆನಂದಯ್ಯನವರ ನೆರವಿಗೆ ನಿಂತು ಈ ಔಷಧಕ್ಕೆ ಅನುಮತಿ ನೀಡಿದೆ. ಭಾರತದ ಪುರಾತನ ಪರಂಪರೆಯಾಗಿರುವ ಆಯುರ್ವೇದದಿಂದ ಹಾನಿ ಇದೆಯೋ ಇಲ್ಲವೋ ಎಂದು ಆಧುನಿಕ ವೈದ್ಯರು ಪ್ರಯೋಗ ಮಾಡಿ, ಪ್ರಯೋಗಾಲಯದಲ್ಲಿಯೂ ಈ ಔಷಧ ಯಶಸ್ಸು ಕಂಡನಂತರ ಇದೀಗ ವಿದೇಶಿಗರೂ ಆಂಧ್ರದತ್ತ ದೌಡಾಯಿಸುತ್ತಿದ್ದಾರೆ.
ಆದ್ದರಿಂದ ಈ ಔಷಧವನ್ನು ಕರ್ನಾಟಕದಲ್ಲಿಯೂ ವಿತರಣೆ ಮಾಡಲು ನಿನ್ನೆಯಷ್ಟೇ ಶುರು ಮಾಡಲಾಗಿತ್ತು. ಬಳ್ಳಾರಿ, ವಿಜಯನಗರದ ಕೆಲವು ಭಾಗಗಳಲ್ಲಿ ಇದನ್ನು ವಿತರಣೆ ಮಾಡಲಾಗಿತ್ತು. ಆದರೆ ಇದಕ್ಕೆ ಸದ್ಯ ಬ್ರೇಕ್‌ ಬಿದ್ದಿದೆ. ಕಾರಣ, ಈ ಔಷಧವನ್ನು ಕರ್ನಾಟಕದಲ್ಲಿ ಪೂರೈಕೆ ಮಾಡಲು ನಿಯಮಾನುಸಾರ ಸರ್ಕಾರದ, ಜಿಲ್ಲಾಡಳಿತದ ಅನುಮತಿ ಪಡೆದಿಲ್ಲ, ಹಾಗೂ ಆಯುಷ್‌ ಇಲಾಖೆಯನ್ನೂ ಕೇಳಿಲ್ಲ ಎನ್ನುವ ಕಾರಣಕ್ಕೆ.
ಆದ್ದರಿಂದ ಇದೀಗ ಔಷಧಿ ವಿತರಣೆಗೆ ಅವಕಾಶ ಕೋರಿ ಹಂಪಿಯ ಶ್ರೀ ಹನುದಮದ್ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ನ ಸಂಸ್ಥಾಪಕ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯವರು ಮುಖ್ಯಮಂತ್ರಿ ಬಿ,ಎಸ್‌. ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಈಗಾಗಲೇ ವಿಜಯನಗರದ ಪಂಪಾಕ್ಷೇತ್ರದ ಕಮಲಾಪುರ, ಹಂಪಿ, ಕೊಪ್ಪಳದ ಆನೆಗುಂದಿ, ಗಂಗಾವತಿ, ಬಳ್ಳಾರಿ ಭಾಗದಲ್ಲಿ ಹಂಚಿಕೆ ಮಾಡಲಾಗಿದ್ದು ಈ ಬಗ್ಗೆ ಜಿಲ್ಲಾಡಳಿತದ ಆಕ್ಷೇಪ ಬಂದಿದ್ದರಿಂದ ಸದ್ಯ ಬ್ರೇಕ್‌ ಹಾಕಲಾಗಿದೆ.ಈ ಬಗ್ಗೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಕರ್ನಾಟಕದಲ್ಲಿ ಆನಂದಯ್ಯನವರ ಕರೊನಾ ಔಷಧಿಯ ಭವಿಷ್ಯ ನಿಂತಿದೆ. ಇದಾಗಲೇ ಆಂಧ್ರ ಸೇರಿದಂತೆ ವಿವಿಧೆಡೆಗಳಲ್ಲಿ ಐದು ಲಕ್ಷಕ್ಕೂ ಹೆಚ್ಚಿನ ಮಂದಿಗೆ ಈ ಔಷಧ ನೀಡಲಾಗಿದೆ.
ಆಯುರ್ವೇದ ಕರೊನಾ ಔಷಧಕ್ಕೆ ವಿದೇಶಿಗರ ದೌಡು- ಆನ್‌ಲೈನ್‌ ಮೂಲಕ ದೇಶಾದ್ಯಂತ ಪೂರೈಕೆಗೆ ಮುಂದಾದ ಸರ್ಕಾರ

ಮನೆಬಾಗಿಲಿಗೆ ಆನಂದಯ್ಯನವರ ಆಯುರ್ವೇದ ಔಷಧ: ಟಿಟಿಡಿಯಿಂದ ದೇಶಾದ್ಯಂತ ಪೂರೈಕೆಗೆ ಮುಂದಾದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − four =
Remember me
