ನವದೆಹಲಿ:ಇಂದು ಮುಂಗಾರು ಅಧಿವೇಶನ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಸದರು ಸೇರಿದಂತೆ ಎಲ್ಲರಿಗೂ ಕರೊನಾ ಪರೀಕ್ಷೆ ಕಡ್ಡಾಯವಾಗಿದೆ.
ಈ ಹಿನ್ನೆಲೆಯಲ್ಲಿ ಸಂಸದರನ್ನು ಪರೀಕ್ಷೆಗೆ ಒಳಪಡಿಸಿದಾಗ ಅನಂತ್​ಕುಮಾರ್​ ಹೆಗಡೆ ಸೇರಿದಂತೆ 17 ಮಂದಿಗೆ ಕರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ.
ಸಂಸದ ಅನಂತ್​ಕುಮಾರ್​ ಅವರು ಕಳೆದ ಶುಕ್ರವಾರ ಅವರು ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನದ ಮೂಲಕ ತೆರಳಿದ್ದರು. ಅಲ್ಲಿಗೆ ತಲುಪಿದ ಬಳಿಕ ಎನ್ ಐಸಿಪಿಆರ್ ಆಸ್ಪತ್ರೆಯಲ್ಲಿ ತಪಾಸಣೆಗೊಳಪಟ್ಟಿದ್ದರು. ಈ ವೇಳೆ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.
ತಮಗೆ ಯಾವುದೇ ರೀತಿಯಲ್ಲಿಯೂ ಸೋಂಕಿನ ಲಕ್ಷಣಗಳು ಇಲ್ಲ. ಆದರೂ ಪಾಸಿಟಿವ್​ ಬಂದಿದೆ ಎಂದು ಅನಂತ್​ಕುಮಾರ್​ ಹೇಳಿದ್ದಾರೆ. ಸದ್ಯ ಇವರು ದೆಹಲಿಯ ನಿವಾಸದಲ್ಲಿ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.
ಇದನ್ನೂ ಓದಿ:ನಟ ಸೂರ್ಯನ ವಿರುದ್ಧ ನ್ಯಾಯಾಂಗ ನಿಂದನೆಗೆ ಕೋರಿದ ಜಡ್ಜ್!​ ಅಷ್ಟಕ್ಕೂ ಮಾಡಿರೋ ತಪ್ಪೇನು?
ಇವರಿಗೆ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಶಿರಸಿಯ ಅವರ ನಿವಾಸಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಕುಟುಂಬದವರ ಗಂಟಲುದ್ರವ ಪರೀಕ್ಷಿಸಿದ್ದು ಅವರೆಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಹೇಳಲಾಗಿದೆ.
ಈ ನಡುವೆಯೇ, ಅಧಿವೇಶನದಲ್ಲಿ ಹಾಜರು ಆಗಹೊರಟಿದ್ದ ಸಂಸದರನ್ನು ಪರೀಕ್ಷೆ ಮಾಡಿದಾಗ 16 ಮಂದಿಗೆ ಕರೊನಾ ಪಾಸಿಟಿವ್​ ಬಂದಿದೆ.ಇವರ ಪೈಕಿ ಅತ್ಯಧಿಕ ಕರೊನಾ ಪಾಸಿಟಿವ್​ ಬಂದಿರುವುದು ಬಿಜೆಪಿ ಸಂಸದರಿಗೆ. 12 ಮಂದಿ ಬಿಜೆಪಿ ಸಂಸದರು, ಇಬ್ಬರು ವೈಎಸ್​ಆರ್​ ಕಾಂಗ್ರೆಸ್​, ಹಾಗೂ ತಲಾ ಒಬ್ಬರು ಶಿವ ಸೇನಾ, ಡಿಎಂಕೆ ಹಾಗೂ ಆರ್​ಎಲ್​ಪಿ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಸಂಸದ ಸುಕಂಠ ಮಜುಮ್ದಾರ್​ ಅವರು ನಿನ್ನೆನೇ ತಮಗೆ ಪಾಸಿಟಿವ್​ ಬಂದಿರುವ ಕುರಿತು ಟ್ವೀಟ್​ ಮಾಡಿದ್ದರು. ತಮ್ಮ ಸಂಪರ್ಕಕ್ಕೆ ಬಂದಿರುವವರು ಪರೀಕ್ಷೆಗೆ ಒಳಗಾಗುವಂತೆ ಹೇಳಿದ್ದರು.
ಬಿಬಿಎಂಪಿ 198 ವಾರ್ಡ್​ಗಳ ಮೀಸಲಾತಿ ಪಟ್ಟಿ ಪ್ರಕಟ: ಇಲ್ಲಿದೆ ಮಾಹಿತಿ…

ಪ್ರಧಾನಿಗೆ ದೇಶದ ಬಗ್ಗೆ ಕಾಳಜಿ ಇಲ್ಲ ಎಂದು ಅಮೆರಿಕದಿಂದ ರಾಹುಲ್​ ಗಾಂಧಿ ಟ್ವೀಟ್​!

‘ನೆಹರೂ ಕಟ್ಟಿಸಿರೋ ‘ಏಮ್ಸ್’​ ಇರೋವಾಗ ಸೋನಿಯಾ ಪದೇ ಪದೇ ವಿದೇಶಕ್ಕೆ ಹೋಗೋದ್ಯಾಕೆ?’

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × five =
Remember me
